More

    ಅಥ್ಲೆಟಿಕ್ಸ್ ದಿಗ್ಗಜ ಮಿಲ್ಖಾ ಸಿಂಗ್ ಪತ್ನಿ ನಿರ್ಮಲ್ ಕರೊನಾಗೆ ಬಲಿ

    ನವದೆಹಲಿ: ಅಥ್ಲೆಟಿಕ್ಸ್ ದಿಗ್ಗಜ ಮಿಲ್ಖಾ ಸಿಂಗ್ ಅವರ ಪತ್ನಿ ಹಾಗೂ ಭಾರತ ವಾಲಿಬಾಲ್ ತಂಡದ ಮಾಜಿ ನಾಯಕಿ ನಿರ್ಮಲ್ ಸಿಂಗ್ (85 ವರ್ಷ) ಕರೊನಾ ಸೋಂಕಿನಿಂದ ಭಾನುವಾರ ನಿಧನರಾದರು.

    ಫ್ಲೈಯಿಂಗ್ ಸಿಖ್ ಖ್ಯಾತಿಯ 91 ವರ್ಷದ ಮಿಲ್ಖಾ ಜತೆಗೆ ನಿರ್ಮಲ್ ಕೌರ್ ಕೂಡ ಕಳೆದ ತಿಂಗಳು ಪಾಸಿಟಿವ್ ಆಗಿದ್ದರು. ಬಳಿಕ ಮೊಹಾಲಿ ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಮಿಲ್ಖಾ ಕೂಡ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪತ್ನಿಯ ಅಂತ್ಯಸಂಸ್ಕಾರಕ್ಕೆ ಹಾಜರಾಗಲು ಸಾಧ್ಯವಾಗಲಿಲ್ಲ ಎಂದು ಕುಟುಂಬ ತಿಳಿಸಿದೆ.

    ಮನೆಗೆಲಸದವರಿಂದ ಮಿಲ್ಖಾ ಕುಟುಂಬಕ್ಕೆ ಮೇ 25ರಂದು ಕರೊನಾ ಸೋಂಕು ಅಂಟಿಕೊಂಡಿತ್ತು. ನಿರ್ಮಲ್ ಸಿಂಗ್ ಅವರು ಪತಿ, ಓರ್ವ ಪುತ್ರ ಹಾಗೂ ಗಾಲ್ಫ್ ಆಟಗಾರ ಜೀವ್ ಮಿಲ್ಖಾ ಸಿಂಗ್ ಮತ್ತು ಮೂವರು ಪುತ್ರಿಯರನ್ನು ಅಗಲಿದ್ದಾರೆ.

    1955ರಲ್ಲಿ ನಿರ್ಮಲ್ ಸಿಂಗ್ ಶ್ರೀಲಂಕಾದ ಸೈಲನ್‌ಗೆ ವಾಲಿಬಾಲ್ ಟೂರ್ನಿ ಆಡಲು ಹೋದಾಗ ಮಿಲ್ಖಾ ಸಿಂಗ್ ಅವರನ್ನು ಮೊದಲ ಬಾರಿ ಭೇಟಿಯಾಗಿದ್ದರು. ಬಳಿಕ ಪ್ರೀತಿಸಲಾರಂಭಿಸಿದ್ದ ಅವರು 1962ರಲ್ಲಿ ವಿವಾಹವಾಗಿದ್ದರು. ನಿರ್ಮಲ್ ಸಿಂಗ್ ಅವರು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ವಾಲಿಬಾಲ್ ಟೂರ್ನಿಗಳಲ್ಲಿ ಶಾರ್ಟ್ಸ್ ಅಥವಾ ಸ್ಕರ್ಟ್‌ಗಳಿಗೆ ಬದಲಾಗಿ ಸಲ್ವಾರ್ ಕಮೀಜ್ ಧರಿಸಿಕೊಂಡೇ ಆಡುತ್ತಿದ್ದರು ಎಂಬುದು ವಿಶೇಷವಾಗಿತ್ತು.

    ಸಿಂಗಲ್ಸ್ ಬಳಿಕ ಡಬಲ್ಸ್‌ನಲ್ಲೂ ಪ್ರಶಸ್ತಿ ಗೆದ್ದು ಇತಿಹಾಸ ಬರೆದ ಕ್ರೆಜ್‌ಸಿಕೋವಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts