More

    ಅವರು ಆಸ್ತಿಯಲ್ಲಿ ನನ್ನ ತಾಯಿಯ ಭಾಗ ಕೊಡಲ್ಲ ಎನ್ನುತ್ತಿದ್ದಾರೆ, ಈಗ ನಾನೇನು ಮಾಡಲಿ?

    ಅವರು ಆಸ್ತಿಯಲ್ಲಿ ನನ್ನ ತಾಯಿಯ ಭಾಗ ಕೊಡಲ್ಲ ಎನ್ನುತ್ತಿದ್ದಾರೆ, ಈಗ ನಾನೇನು ಮಾಡಲಿ?ಪ್ರಶ್ನೆ: ನಮ್ಮ ತಾಯಿಯ ತಮ್ಮನನ್ನೇ ನಾನು ಮದುವೆ ಆಗಿರುವುದು. ನಮ್ಮ ತಾಯಿಯ ತಂದೆ ಈಗ ತೀರಿಕೊಂಡಿದ್ದಾರೆ. ಅವರ ತಾಯಿಯೂ ಇಲ್ಲ. ನನ್ನ ಗಂಡನೂ ತೀರಿಕೊಂಡಿದ್ದಾರೆ. ನನ್ನ ಗಂಡನಿಗೆ ಇನ್ನೊಬ್ಬ ಅಣ್ಣ ಇದ್ದಾನೆ. ಅವರು ಒಟ್ಟು ಮೂವರು ಮಕ್ಕಳು. ನಮ್ಮ ತಾಯಿ, ನನ್ನ ಗಂಡ ಮತ್ತು ನನ್ನ ಗಂಡನ ಅಣ್ಣ. ನಮ್ಮ ತಂದೆ ತಾಯಿಗೆ ನಾನು ಒಬ್ಬಳೇ ಮಗಳು. ಈಗ ನಮ್ಮ ಬಾವ ನಮಗೆ ಒಂದು ಭಾಗ ಮಾತ್ರ ಕೊಡುತ್ತೇನೆ. ನಮ್ಮ ತಾಯಿಯ ಭಾಗ ಕೊಡುವುದಿಲ್ಲ ಎನ್ನುತ್ತಿದ್ದಾರೆ. ಎಲ್ಲ ಆಸ್ತಿಗಳೂ ನಮ್ಮ ಮಾವ (ತಾತ) ಸ್ವತ: ಸಂಪಾದಿಸಿದ ಆಸ್ತಿಗಳು. ನನಗೆ ಮೂವರು ಹೆಣ್ಣು ಮಕ್ಕಳು ಇದ್ದಾರೆ. ಎಲ್ಲ ಓದುತ್ತಿದ್ದಾರೆ. ಈಗ ನಾವು ಏನು ಮಾಡಬೇಕು ಎಂದು ತಿಳಿಸಿ ಸಹಾಯ ಮಾಡಿ. ನಮಗೆ ಎಷ್ಟು ಪಾಲು ಸಿಗುತ್ತದೆ ತಿಳಿಸಿ?

    ಉತ್ತರ: ನಿಮ್ಮ ತಾಯಿಯ ತಂದೆಯ ಸ್ವಯಾರ್ಜಿತ ಆಸ್ತಿ ಅವರ ಮೂವರು ಮಕ್ಕಳಿಗೆ ಸಮವಾಗಿ ಹೋಗುತ್ತದೆ. ನಿಮ್ಮ ತಾಯಿ, ನಿಮ್ಮ ಪತಿ ಮತ್ತು ನಿಮ್ಮ ಗಂಡನ ಅಣ್ಣ ಮೂವರಿಗೂ ಸಮವಾಗಿ ಮೂರನೇ ಒಂದು ಭಾಗ ಬರುತ್ತದೆ. ನಿಮ್ಮ ಪತಿಯ ಮೂರನೇ ಒಂದು ಭಾಗ ನಿಮಗೂ ನಿಮ್ಮ ಮಕ್ಕಳಿಗೂ ಸಮವಾಗಿ ಹೋಗುತ್ತದೆ. ನಿಮ್ಮ ತಾಯಿಯ ಮೂರನೇ ಒಂದುಭಾಗವನ್ನು ಅವರು ಯಾರಿಗೆ ಬೇಕಾದರೂ ಕೊಡಬಹುದು ಅಥವಾ ತಾವೇ ಉಪಯೋಗಿಸಬಹುದು. ನೀವು ದಾವೆ ಹಾಕಿದರೆ ನಿಮ್ಮ ಪತಿಯ ಮೂರನೇ ಒಂದು ಭಾಗ ನಿಮಗೂ ನಿಮ್ಮ ಮಕ್ಕಳಿಗೂ ಸಿಗುತ್ತದೆ, ಇಷ್ಟವಿದ್ದರೆ ಸ್ವಲ್ಪ ಹೆಚ್ಚು ಕಡಿಮೆ ಹಂಚಿಕೆಗೆ ರಾಜಿ ಮಾಡಿಕೊಳ್ಳಬಹುದು.

    ಪ್ರಶ್ನೆ: ನಮ್ಮ ತಂಗಿಯ ಗಂಡ ವಿಪರೀತ ಕುಡುಕ. ಹಗಲೂ ರಾತ್ರಿ ಅವಳಿಗೆ ಹೊಡೆದು ಬಡಿದು ಹಿಂಸೆ ಕೊಟ್ಟಿದ್ದರು ಎಂದು ತವರಿಗೆ ಬಂದಿದ್ದಾಳೆ. ಈಗ ಅವಳ ಗಂಡ ಬಂದು, ಎಳೆಯ ಮಕ್ಕಳನ್ನು ತೆಗೆದುಕೊಂಡು ಹೋಗುತ್ತೇನೆ ಎಂದು ಹೆದರಿಸುತ್ತಿದ್ದಾರೆ. ನೀನು ಬಂದು ಮನೆಯಲ್ಲಿ ಸಂಸಾರ ಮಾಡು ಎಂದು ಗಲಾಟೆ ಮಾಡುತ್ತಿದ್ದಾರೆ. ದಿನಾ ಮನೆಯ ಹತ್ತಿರ ಕುಡಿದು ಬಂದು ಗಲಾಟೆ ಮಾಡುತ್ತಾರೆ. ಮಕ್ಕಳನ್ನು ಕರೆದುಕೊಂಡು ಹೋದರೆ ಎಂದು ನನ್ನ ತಂಗಿಗೆ ಹೆದರಿಕೆ ಆಗಿದೆ. ಈಗ ಏನು ಮಾಡುವುದು.

    ಉತ್ತರ: ನಿಮ್ಮ ತಂಗಿ ತಕ್ಷಣ ಮಕ್ಕಳ ಶಾಶ್ವತ ಕಸ್ಟಡಿ ತನಗೇ ಕೊಡಬೇಕು ಎಂದು ಪ್ರಕರಣ ದಾಖಲಿಸಲು ತಿಳಿಸಿ. ಮಕ್ಕಳನ್ನು ಅವಳ ಗಂಡ ತನ್ನ ಸುಪರ್ದಿನಿಂದ ಕರೆದುಕೊಂಡು ಹೋಗಬಾರದು ಎಂದು ತಾತ್ಕಾಲಿಕ ತಡೆ ಆಜ್ಞೆ ಪಡೆಯಲು ತಿಳಿಸಿ. ಮನೆಯ ಹತ್ತಿರ ಬಂದು ಗಲಾಟೆ ಮಾಡಬಾರದು, ತೊಂದರೆ ಕೊಡಬಾರದು ಎನ್ನುವ ಆದೇಶವನ್ನಿ ಡಿ.ವಿ ಕೇಸು ಹಾಕಿ ಪಡೆಯಲು ತಿಳಿಸಿ. ನ್ಯಾಯಾಲಯ ಡಿ.ವಿ ಕೇಸಿನಲ್ಲಿ ರಕ್ಷಣೆಯ ಆದೇಶವನ್ನು ಕೊಡುತ್ತದೆ. ನಿಮ್ಮ ತಂಗಿ ಹೆದರಬೇಕಿಲ್ಲ ಆದರೆ, ತಂದೆಯಾಗಿ ನಿಮ್ಮ ತಂಗಿಯ ಗಂಡನಿಗೆ ತನ್ನ ಮಕ್ಕಳನ್ನು ನೋಡುವ ಅವಕಾಶವನ್ನು ನ್ಯಾಯಾಲಯ ಕೊಟ್ಟೇ ಕೊಡುತ್ತದೆ ಎನ್ನುವುದನ್ನು ನೀವು ಯಾರೂ ಮರೆಯುವಂತಿಲ್ಲ. ನಿಮ್ಮ ತಂಗಿಗೆ ಹಣಕಾಸಿನ ಸಮಸ್ಯೆ ಇದ್ದರೆ ಅವರ ಊರಿನ ನ್ಯಾಯಾಲಯದ ಉಚಿತ ಕಾನೂನು ಸೇವಾ ಕೇಂದ್ರವನ್ನು ಭೇಟಿ ಆಗಿ ಅರ್ಜಿ ಕೊಟ್ಟರೆ ಎಲ್ಲ ಖರ್ಚನ್ನೂ ಕೇಂದ್ರವೇ ನೋಡಿಕೊಳ್ಳುತ್ತದೆ.

    (ಲೇಖಕರು ಕರ್ನಾಟಕ ಉಚ್ಚ ನ್ಯಾಯಾಲಯದ ಹಿರಿಯ ವಕೀಲರು ಮತ್ತು ಬೆಂಗಳೂರು ಮಧ್ಯಸ್ಥಿಕೆ ಕೇಂದ್ರದ ಹಿರಿಯ ಮಧ್ಯಸ್ಥಿಕೆಗಾರರು)

    ಕೋವಿಶೀಲ್ಡ್ ಕೊಡಬಾರದಿತ್ತು, ಭಾರತದಲ್ಲಿನ್ನು ವ್ಯಾಕ್ಸಿನ್​ ಅನಗತ್ಯ; ಲಸಿಕೆ ಅಡ್ಡಪರಿಣಾಮಗಳ ಕುರಿತು ದನಿ ಎತ್ತಿದ ಡಾಕ್ಟರ್​

    ಕಾಲೇಜು ವಿದ್ಯಾರ್ಥಿಗಳೇ.. ವೀರ್ಯಾಣು ದಾನ ಮಾಡಿ: ಸ್ಪರ್ಮ್ ಬ್ಯಾಂಕ್​ಗಳಿಂದ ಹೀಗೊಂದು ಮನವಿ; ಎಲ್ಲಿ, ಏಕೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts