More

    ಚೆನ್ನೈನಲ್ಲಿ ಜಯದತ್ತ ರಾಜ್ಯದ ಚಿತ್ತ: ತಮಿಳುನಾಡಿಗೆ 355 ರನ್ ಗುರಿ

    ಚೆನ್ನೈ: ಪ್ರವಾಸಿ ಕರ್ನಾಟಕ ತಂಡ ರಣಜಿ ಟ್ರೋಫಿ ದೇಶೀಯ ಕ್ರಿಕೆಟ್ ಟೂರ್ನಿಯಲ್ಲಿ ಆತಿಥೇಯ ತಮಿಳುನಾಡಿಗೆ 355 ರನ್‌ಗಳ ಗುರಿ ನೀಡಿದ್ದು, ಗೆಲುವಿನತ್ತ ದೃಷ್ಟಿ ನೆಟ್ಟಿದೆ. ವೇಗಿ ವೈಶಾಕ್ ವಿಜಯ್ ಕುಮಾರ್ (26ಕ್ಕೆ 4) ಬೌಲಿಂಗ್ ದಾಳಿಯ ಬಲದಿಂದ ಮೊದಲ ಇನಿಂಗ್ಸ್‌ನಲ್ಲಿ ಮಹತ್ವದ ಮುನ್ನಡೆ ಸಾಧಿಸಿದ ಕರ್ನಾಟಕ, ದ್ವಿತೀಯ ಇನಿಂಗ್ಸ್‌ನಲ್ಲಿ ಬ್ಯಾಟಿಂಗ್ ವೈಲ್ಯ ಕಂಡು ಅಲ್ಪಮೊತ್ತಕ್ಕೆ ಕುಸಿದರೂ, ಆತಿಥೇಯರಿಗೆ ಕಠಿಣ ಸವಾಲು ನೀಡುವಲ್ಲಿ ಯಶಸ್ವಿಯಾಗಿದೆ. ಮಯಾಂಕ್ ಅಗರ್ವಾಲ್ ಬಳಗದ ಗೆಲುವಿಗೆ ಕೊನೇ ದಿನ 9 ವಿಕೆಟ್ ಅಗತ್ಯವಿದ್ದು, ಗೆದ್ದರೆ ನಾಕೌಟ್ ಪ್ರವೇಶವೂ ಖಚಿತವಾಗಲಿದೆ.

    ಚೆಪಾಕ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಸಿ ಗುಂಪಿನ ಪಂದ್ಯದ 3ನೇ ದಿನವಾದ ಭಾನುವಾರ, 7 ವಿಕೆಟ್‌ಗೆ 129 ರನ್‌ಗಳಿಂದ ಆಟ ಆರಂಭಿಸಿದ ತಮಿಳುನಾಡು 151 ರನ್‌ಗಳಿಗೆ ಮೊದಲ ಇನಿಂಗ್ಸ್ ಮುಗಿಸಿತು. 215 ರನ್ ಮುನ್ನಡೆ ಸಾಧಿಸಿದರೂ, ಾಲೋಆನ್ ಹೇರದೆ ದ್ವಿತೀಯ ಇನಿಂಗ್ಸ್ ಆರಂಭಿಸಿದ ಕರ್ನಾಟಕ, ಎಡಗೈ ಸ್ಪಿನ್ನರ್ ಅಜಿತ್ ರಾಮ್ (61ಕ್ಕೆ 5) ದಾಳಿಗೆ ನಲುಗಿ 56.4 ಓವರ್‌ಗಳಲ್ಲಿ 139 ರನ್‌ಗಳಿಗೆ ಆಲೌಟ್ ಆಯಿತು. ದಿನದ ಕೊನೆಯಲ್ಲಿ 15 ಓವರ್ ಎದುರಿಸಿದ ತಮಿಳುನಾಡು ತಂಡ, ದಿನದಂತ್ಯಕ್ಕೆ 1 ವಿಕೆಟ್‌ಗೆ 36 ರನ್ ಗಳಿಸಿದ್ದು, ಇನ್ನೂ 319 ರನ್ ಅಗತ್ಯವಿದೆ.

    ಕರ್ನಾಟಕ: 366 ಹಾಗೂ 139 (ಮಯಾಂಕ್ 11, ಪಡಿಕ್ಕಲ್ 36, ಹಾರ್ದಿಕ್ ರಾಜ್ 20, ಮನೀಷ್ 14, ಶರತ್ 18, ವೈಶಾಕ್ 22*, ಅಜಿತ್ ರಾಮ್ 61ಕ್ಕೆ 5, ಸಾಯಿ ಕಿಶೋರ್ 27ಕ್ಕೆ 2). ತಮಿಳುನಾಡು: 151 ಹಾಗೂ 1 ವಿಕೆಟ್‌ಗೆ 36 (ವಿಮಲ್ 16*, ಎನ್. ಜಗದೀಶನ್ 8, ಪ್ರದೂಷ್ 10*, ವೈಶಾಕ್ 12ಕ್ಕೆ 1).

    ಮತ್ತೆ ಬ್ಯಾಟಿಂಗ್ ವೈಲ್ಯ: ಕರ್ನಾಟಕ ತಂಡ ಎರಡನೇ ಸರದಿಯಲ್ಲಿ ಮತ್ತೆ ಬ್ಯಾಟಿಂಗ್ ವೈಲ್ಯ ಅನುಭವಿಸಿತು. ಮೊದಲ ಇನಿಂಗ್ಸ್‌ನಲ್ಲಿ ಅರ್ಧಶತಕಗಳಿಸಿದ್ದ ಆರ್.ಸಮರ್ಥ್ (2) ಹಾಗೂ ನಾಯಕ ಮಯಾಂಕ್ ಅಗರ್ವಾಲ್ (14) ನಿರಾಸೆ ಮೂಡಿಸಿದರು. ಎಡಗೈ ಬ್ಯಾಟರ್ ದೇವದತ್ ಪಡಿಕ್ಕಲ್(36) ಮತ್ತು ಹಾರ್ದಿಕ್ ರಾಜ್ (20) ಮೂರನೇ ವಿಕೆಟ್‌ಗೆ 31 ರನ್ ಕಲೆಹಾಕಿ ಚೇತರಿಕೆ ಒದಗಿಸಿದರು. 88 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡ ಕರ್ನಾಟಕ ಬಳಿಕ ನಿರಂತರ ವಿಕೆಟ್ ಕೈಚೆಲ್ಲಿತು. ಮನೀಷ್ ಪಾಂಡೆ (14), ಕಿಶನ್ ಬಿದರೆ (8) ಹೆಚ್ಚು ಹೊತ್ತು ನಿಲ್ಲಲಿಲ್ಲ. ಉಪನಾಯಕ ನಿಕಿನ್ ಜೋಸ್ (0) ರನ್‌ಬರ ಮುಂದುವರಿಸಿದರು. ಶರತ್ ಶ್ರೀನಿವಾಸ್ (18) ಹಾಗೂ ವೈಶಾಕ್ ವಿಜಯ್‌ಕುಮಾರ್ (22*) ಉಪಯುಕ್ತ ರನ್ ಕಲೆಹಾಕಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts