More

    ಕನ್ನಡ ಕಲಿತು ಇತರರಿಗೂ ಕಲಿಸಬೇಕು

    ಕೊಡಗು : ಕನ್ನಡ ನಾಡಲ್ಲಿ ಹುಟ್ಟಿರುವ ನಾವು ಮೊದಲು ಕನ್ನಡ ಕಲಿತು ಇತರರಿಗೂ ಕಲಿಸಿ, ಬೆಳೆಸುವ ಕಾರ್ಯಕ್ಕೆ ಮುಂದಾಗಬೇಕೆಂದು ಸಂತ ಮೇರಿ ಆಂಗ್ಲ ಮಾಧ್ಯಮ ಶಾಲೆಯ ವ್ಯವಸ್ಥಾಪಕ ರೇವರೆಂಡ್ ಫಾದರ್ ಅರುಳ್ ಸೇಲ್ವಕುಮಾರ್ ಹೇಳಿದರು.


    ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಸುಂಟಿಕೊಪ್ಪ ಸಂತ ಮೇರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶನಿವಾರ ಆಯೋಜಿಸಿದ್ದ ಹೋಬಳಿ ಮಟ್ಟದ ಶಾಲಾ ಹಾಗೂ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳ ವಿವಿಧ ಸ್ಪರ್ಧೆಗಳ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಕನ್ನಡವನ್ನು ಕಲಿಸಿ, ಬೆಳೆಸಲು ನಿರ್ಧರಿಸಲಾಗಿದೆ ಎಂದರು.


    ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಪಿ.ಎಫ್.ಸೆಬಾಸ್ಟೀನ್ ಮಾತನಾಡಿದರು. ಕಾರ್ಯಕ್ರಮದಲ್ಲಿ ವಿಜಯ ಪ್ಲಾಂಟೇಶನ್ ವ್ಯವಸ್ಥಾಪಕ ಶಶಾಂಕ್, ಸಂತ ಮೇರಿ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯಶಿಕ್ಷಕ ಸೇಲ್ವರಾಜ್, ಸುಂಟಿಕೊಪ್ಪ ಕನ್ನಡ ಸಾಹಿತ್ಯ ಪರಿಷತ್ತು ಉಪಾಧ್ಯಕ್ಷೆ ಲೀಲಾವತಿ ಇತರರು ಇದ್ದರು.
    ಗಾಯನ ಸ್ಪರ್ಧೆ : ಪ್ರಾಥಮಿಕ ಶಾಲಾ ವಿಭಾಗದಲ್ಲಿ ಭಾವಗೀತೆ ಗಾಯನ ಸ್ಪರ್ಧೆಯಲ್ಲಿ ಕೊಡಗರಹಳ್ಳಿ ಶಾಂತಿನಿಕೇತನ ಪ್ರೌಢಶಾಲೆಯ ಕೆ.ಎಸ್.ಅನ್ವಿ ಪ್ರಥಮ, ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಪಿ.ಜಿ.ರಂಜಿನಿ ದ್ವಿತೀಯ, ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಎ.ಪುಣ್ಯಾ ತೃತೀಯ ಸ್ಥಾನಗಳನ್ನು ಪಡೆದುಕೊಂಡರು.


    ಪ್ರೌಢಶಾಲಾ ವಿಭಾಗದಲ್ಲಿ ಕೊಡರಹಳ್ಳಿಯ ಸುಂಟಿಕೊಪ್ಪ ನಾಡು ಶಾಲೆಯ ಎಂ.ಎ.ನಿಯಾಜ್ ಪ್ರಥಮ, ಸರ್ಕಾರಿ ಪ್ರೌಢಶಾಲೆಯ ಎಚ್.ಜಿ.ಚಸ್ಮಿತ್ ದ್ವಿತೀಯ, ಶಾಂತಿನೀಕೇತನ ಪ್ರೌಢಶಾಲೆಯ ಎಸ್.ಧನ್ಯಾಶ್ರಿ ತೃತೀಯ ಸ್ಥಾನ ಪಡೆದುಕೊಂಡರು.
    ಪದವಿಪೂರ್ವ ಕಾಲೇಜು ವಿಭಾಗದಲ್ಲಿ ಸುಂಟಿಕೊಪ್ಪ ಸರ್ಕಾರಿ ಪದವಿಪೂರ್ವ ಕಾಲೇಜಿನ ಆಲಿನಾ ಡಿಸೋಜಾ ಪ್ರಥಮ, ಸಂತಮೇರಿ ಆಂಗ್ಲ ಪಿಯು ಕಾಲೇಜಿನ ಎಚ್.ಎ.ಅನುಷಾ ದ್ವಿತೀಯ, ಸುಂಟಿಕೊಪ್ಪ ಸರ್ಕಾರಿ ಪದವಿಪೂರ್ವ ಕಾಲೇಜಿನ ಆಜ್ಮೀಯ ತೃತೀಯ ಸ್ಥಾನಗಳನ್ನು ಪಡೆದುಕೊಂಡರು.
    ಪ್ರಬಂಧ ಸ್ಪರ್ಧೆ: ಜ್ಞಾನಪೀಠ ಪ್ರಶಸ್ತಿ ವಿಜೇತ ಕನ್ನಡ ಸಾಹಿತಿಗಳ ಬಗ್ಗೆ ಪ್ರಬಂಧ ಸ್ಪರ್ಧೆಯಲ್ಲಿ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಸುಂಟಿಕೊಪ್ಪ ಸಂತ ಮೇರಿ ಶಾಲೆಯ ಇಸ್ನಾ ಪೆಬಿನ್ ಪ್ರಥಮ, ಕೊಡಗರಹಳ್ಳಿ ಶಾಂತಿನಿಕೇತನ ಶಾಲೆಯ ನಿವೇದಾ ದ್ವಿತೀಯ, ಅತ್ತೂರು ನಲ್ಲೂರು ಶಾಲೆಯ ಕೆ.ಎಂ.ಸಿಂಚನಾ ತೃತೀಯ ಸ್ಥಾನಗಳನ್ನು ಪಡೆದುಕೊಂಡರು.


    ಪ್ರೌಢಶಾಲಾ ವಿಭಾಗದಲ್ಲಿ ಸರ್ಕಾರಿ ಪ್ರೌಢಶಾಲೆ ಪಿ.ಆರ್.ಶಾಕೀರ ಪ್ರಥಮ, ಸುಂಟಿಕೊಪ್ಪ ಸರ್ಕಾರಿ ಪ್ರೌಢಶಾಲೆಯ ಪ್ರೋರಿಯ ರಾಡ್ರಿಗಸ್ ದ್ವಿತೀಯ, ಕೊಡರಹಳ್ಳಿಯ ಸುಂಟಿಕೊಪ್ಪ ನಾಡು ಶಾಲೆಯ ಎ.ಎಸ್.ಶ್ರೀಶಾ ತೃತೀಯ ಸ್ಥಾನ ಪಡೆದುಕೊಂಡರು.ಪದವಿಪೂರ್ವ ಕಾಲೇಜು ವಿಭಾಗದಲ್ಲಿ ಸುಂಟಿಕೊಪ್ಪ ಸರ್ಕಾರಿ ಪದವಿಪೂರ್ವ ಕಾಲೇಜಿನ ವಿಭಾಗದಲ್ಲಿ ಎಂ.ಜಿ ಶ್ವೇತಾ ಪ್ರಥಮ, ಸಂ. ಮೇ. ಪ.ಪೂ.ಕಾ.ಎಸ್.ಕೀರ್ತಿ ದ್ವಿತೀಯ, ಸಂ.ಮೇ. ಪ.ಪೂ.ಕಾ ಮೇಲಿಷಾ ಡಿಸೋಜ ತೃತೀಯ ಸ್ಥಾನಗಳನ್ನು ಪಡೆದುಕೊಂಡರು.


    ಚಿತ್ರಕಲೆ ಸ್ಪರ್ಧೆ: ಪ್ರಾಥಮಿಕ ಶಾಲಾ ವಿಭಾಗದಲ್ಲಿ ಸುಂಟಿಕೊಪ್ಪ ಸಂತ ಮೇರಿ ಶಾಲೆಯ ಮಹಮದ್ ಸುಹಾನ್ ಪ್ರಥಮ, ಶಾಂತಿನಿಕೇತನ ಶಾಲೆಯ ಸನಾತಿನಿ ಶೆಟ್ಟಿ ದ್ವಿತೀಯ, ಶಾಂತಿನಿಕೇತನ ಶಾಲೆಯ ಶಿವಪ್ರಸಾದ್, ಪ್ರೌಢಶಾಲೆ ವಿಭಾಗದಲ್ಲಿ ಶಾಂತಿನಿಕೇತನ ಶಾಲೆಯ ಜಸ್ಮಿತಾ ಶ್ರೀಹರಿ ಪ್ರಥಮ, ಸಂತಮೇರಿ ಶಾಲೆಯ ಎಂ.ವಿಸ್ಮಯ್ ದ್ವಿತೀಯ, ಸಂತಮೆರಿ ಶಾಲೆಯ ರೂಮನ್ ತೃತೀಯ ಸ್ಥಾನಗಳನ್ನು ಪಡೆದುಕೊಂಡರು. ಕಾಲೇಜು ವಿಭಾಗದಲ್ಲಿ ಸಂತಮೇರಿ ಪದವಿ ಪೂರ್ವ ಕಾಲೇಜಿನ ಮಧುಮಿತಾ ಪ್ರಥಮ, ಸಂತ ಮೇರಿ ಪದವಿ ಪೂರ್ವ ಕಾಲೇಜಿನ ಆಯಿಷಾ ದ್ವಿತೀಯ, ಸಕ್ರೃ ಪದವಿಪೂರ್ವ ಕಾಲೇಜಿನ ಕಿಶೋರ್ ತೃತೀಯ ಸ್ಥಾನ ಪಡೆದುಕೊಂಡು.


    ಜಾನಪದ ಗೀತೆ ಸ್ಪರ್ಧೆ : ಜಾನಪದ ಗೀತೆ ಸ್ಪರ್ಧೆಯಲ್ಲಿ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಶಾಂತಿನಿಕೇತನ ಶಾಲೆಯ ಪ್ರಣಮೀಯ ಪ್ರಥಮ, 7ನೇ ಹೊಸಕೋಟೆ ದೀಪ್ತಿ ಶಾಲೆಯ ಅಜ್ಮೀಯ ದ್ವಿತೀಯ, ಅತ್ತೂರು ನಲ್ಲೂರು ಶಾಲೆಯ ಸಹನಾ ತೃತೀಯ ಸ್ಥಾನ ಪಡೆದುಕೊಂಡರು. ಪ್ರೌಢಶಾಲೆ ವಿಭಾಗದಲ್ಲಿ ಶಾಂತಿನಿಕೇತನ ಶಾಲೆಯ ಕೆ.ಪ್ರೀತಿ ಪ್ರಥಮ, ಸುಂಟಿಕೊಪ್ಪ ಸರ್ಕಾರಿ ಪ್ರೌಢಶಾಲೆಯ ಅನುಕುಮಾರಿ ದ್ವಿತೀಯ, ಶಾಂತಿನಿಕೇತನ ಶಾಲೆಯ ದಿಕ್ಷೀತ ತೃತೀಯ ಸ್ಥಾನ ಪಡೆದುಕೊಂಡರು. ಕಾಲೇಜು ವಿಭಾಗದಲ್ಲಿ ಸಂತ ಮೇರಿ ಪದವಿ ಪೂರ್ವ ಕಾಲೇಜಿನ ಸಾನ ಪರ್ವಿನ್ ಪ್ರಥಮ, ಸರ್ಕಾರಿ ಪದವಿಪೂರ್ವ ಕಾಲೇಜಿನ ಐಶ್ವರ್ಯಾ ದ್ವಿತೀಯ, ಸರ್ಕಾರಿ ಪದವಿಪೂರ್ವ ಕಾಲೇಜಿನ ಮಹಮದ್ ಹರ್ಷದ್ ತೃತೀಯ ಸ್ಥಾನಗಳನ್ನು ಪಡೆದುಕೊಂಡರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts