More

  ದೈನಂದಿನ ಬಳಕೆಯ ವಾಕ್ಯಗಳು

  ನಿಮಗೆ ಕೆಟ್ಟ ಸುದ್ದಿ ತರುತ್ತಿರುವುದಕ್ಕಾಗಿ / ಕೊಡುತ್ತಿರುವುದಕ್ಕಾಗಿ ಕ್ಷಮಿಸಿ.

  I am sorry to be the bearer of / for bringing you bad news.

  ಅವನು ನನ್ನೊಡನೆ ಪ್ರಾಣಿಯಂತೆ ವರ್ತಿಸುತ್ತಿದ್ದುದರಿಂದ ಅವನೊಡನೆ ಸಂಬಂಧ ಕಡಿದುಕೊಂಡೆ.

  I broke up with him as he was being beastly to me.

  ಹಾಗೆಯೇ ಅಲ್ಲಾಡದೆ ನಿಲ್ಲು, ನಿನ್ನ ಹೆಗಲ ಮೇಲೊಂದು ಕೀಟವಿದೆ.

  Keep still, there is a beastie on your shoulder.

  ವಿಪರೀತ ಸೆಕೆಯ ಮಧ್ಯಾಹ್ನ ತಂಪಾದ ಸೋಡಾ / ತಣ್ಣೀರು ಸ್ನಾನಕ್ಕಿಂತ ಒಳ್ಳೆಯದು ಯಾವುದೂ ಇಲ್ಲ.

  You can’t beat a cold soda / cold bath on a scorching afternoon.

  ನನಗೆ ನಾಡಿ ಬಡಿಯುತ್ತಿದ್ದಂತೆ ಅನಿಸಲಿಲ್ಲ ಆದುದರಿಂದ ಅವನು ಸತ್ತಿದ್ದಾನೆಂದು ತಿಳಿದೆ.

  I didn’t feel any pulse beating and so thought that he was dead.

  ನಿಮಗೆ ಮದುವೆ ಆಗಿದೆಯೆ ಎಂದು ಅವಳು ಕೇಳಿದಾಗ ನನ್ನ ಹೃದಯದ ಬಡಿತ ಒಮ್ಮೆ ನಿಂತ ಹಾಗಾಯ್ತು.

  My heart missed a beat when she asked, “Are you married?”

  ಅವಳು ಹಾಡಿನ ಲಯಕ್ಕೆ ಸರಿಯಾಗಿ ತನ್ನ ಕಾಲಿನಿಂದ ನೆಲವನ್ನು ತಟ್ಟುತ್ತಿದ್ದಳು.

  She was tapping her foot to the beat of the music.

  ಪರಿಚಾರಕನು ನಮಸ್ಕಾರ ಸರ್ ಎಂದು ಹೇಳುತ್ತ ತನ್ನ ಮೇಜಿನೆಡೆ ನನ್ನನ್ನು ಬರುವಂತೆ ತಲೆಯಾಡಿಸಿ ಸೂಚಿಸಿದ.

  The waiter beckoned me to his table saying ‘Good evening sir’.

  ಸಿನಿಮಾ

  ಲೈಫ್‌ಸ್ಟೈಲ್

  ಸಿನಿಮಾ

  Latest Posts