More

    ಹೊಸ ಚಿಂತನೆಗಳನ್ನು ಮೈಗೂಡಿಸಿಕೊಳ್ಳಿ: ವಿಧಾನ ಪರಿಷತ್ ಸದಸ್ಯ ಮಧು ಜಿ.ಮಾದೇಗೌಡ ಸಲಹೆ

    ಮಂಡ್ಯ: ಪಠ್ಯದೊಂದಿಗೆ ಕ್ರೀಡೆ ಮತ್ತು ಸೃಜನಾತ್ಮಕ ಕೌಶಲಜ್ಞಾನ ವೃದ್ದಿಸಿಕೊಳ್ಳಬೇಕಿದೆ. ಅತಿ ಓದುವುದು ಮಂಕುಕವಿಸುತ್ತದೆ. ಆದ್ದರಿಂದ ಹೊಸ ಚಿಂತನೆಗಳನ್ನು ಮೈಗೂಡಿಸಿಕೊಳ್ಳಬೇಕಿದೆ ಎಂದು ವಿಧಾನ ಪರಿಷತ್ ಸದಸ್ಯ ಮಧು ಜಿ.ಮಾದೇಗೌಡ ಸಲಹೆ ನೀಡಿದರು.
    ನಗರದ ಲಕ್ಷ್ಮೀ ಜನಾರ್ಧನ ಶಾಲೆ ಆವರಣದಲ್ಲಿ ಲಕ್ಷ್ಮೀ ಜನಾರ್ಧನ ಶಿಕ್ಷಣ ಸಮಿತಿ ಟ್ರಸ್ಟ್‌ನಿಂದ ಆಯೋಜಿಸಿದ್ದ ವಾರ್ಷಿಕೋತ್ಸವ ಹಾಗೂ ಪಾಲಕರ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು. ಪ್ರಸ್ತುತ ಸ್ಪರ್ಧಾತ್ಮಕ ಯುಗಲ್ಲಿರುವ ವಿದ್ಯಾರ್ಥಿಗಳು ಪಠ್ಯದೊಂದಿಗೆ ಕ್ರೀಡೆ ಹಾಗೂ ಕೌಶಲಜ್ಞಾನ ಹೆಚ್ಚಿಸಿಕೊಳ್ಳುವುದು ಅತ್ಯಾವಶ್ಯಕ ಎಂದರು.
    ಶಾಲಾ-ಕಾಲೇಜಿನ ಜೀವನ ಮತ್ತೆ ಸಿಗುವುದಿಲ್ಲ. ನನ್ನಂತೆ ವಯಸ್ಸಿನವರು ಶಾಲೆ-ಕಾಲೇಜಿನಲ್ಲಿ ವಿದ್ಯಾರ್ಥಿಯಾಗಿ ಕಲಿಯಲು ಸಾಧ್ಯವಿಲ್ಲ. ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವುದೇ ಜಾಣತನ. ಲಕ್ಷ್ಮೀಜನಾರ್ದನ ತುಂಬ ಹಳೆಯ ವಿದ್ಯಾಸಂಸ್ಥೆ. ಅದರ ಅಭಿವೃದ್ದಿಗಾಗಿ ನನ್ನ ಕೈಲಾದ ಮಟ್ಟಿಗೆ ನೆರವು ನೀಡುತ್ತೇನೆ. ತಂತ್ರಜ್ಞಾನ ಬಂದಿರುವುದರಿಂದ ಬಹಳಷ್ಟು ಶಿಕ್ಷಕರಿಗೆ ತರಬೇತಿ ಅವಶ್ಯವಿದೆ. ಮುಂದಿನ ದಿನಗಳಲ್ಲಿ ವೈಜ್ಞಾನಿಕ ಶಿಕ್ಷಣಕ್ಕೆ ಹೆಚ್ಚು ಆದ್ಯತೆ ನೀಡಿ ಸಹಾಯ ಮಾಡುತ್ತೇವೆ ಎಂದು ತಿಳಿಸಿದರು.
    ಡಿಡಿಪಿಐ ಎಸ್.ಟಿ.ಜವರೇಗೌಡ, ಸಾಹಿತಿ ಡಾ.ಪ್ರದೀಪ್‌ಕುಮಾರ್ ಹೆಬ್ರಿ, ಸಂಸ್ಥೆಯ ಅಧ್ಯಕ್ಷೆ ಅಂಜನಾ ಶ್ರೀಕಾಂತ್, ಟ್ರಸ್ಟಿ ಡಾ.ಸುರೇಶ್, ಕೆಪಿಸಿಸಿ ಸದಸ್ಯ ಅಶೋಕ್, ಡಾ.ಗೋಪಾಲಕೃಷ್ಣ ಇತರರಿದ್ದರು.
    ಇದೇ ವೇಳೆ ವಿದ್ಯಾರ್ಥಿಗಳ ಸಾಹಿತ್ಯ, ಸಾಂಸ್ಕೃತಿಕ, ಕ್ರೀಡೆ, ಸಾಧನೆ ಕುರಿತ ಕೌಸ್ತುಭ ಸಂಚಿಕೆಯನ್ನು ಗಣ್ಯರು ಲೋಕಾರ್ಪಣೆಗೊಳಿಸಿದರು. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts