More

    ವಿಶ್ವಾಸದ ಪ್ರತೀಕ ಅಂಚೆ ಇಲಾಖೆ

    ಲಕ್ಷ್ಮೇಶ್ವರ: ಅಂಚೆ ಇಲಾಖೆಯು ಕಾಲಕ್ಕೆ ತಕ್ಕಂತೆ ಬದಲಾವಣೆಯಾಗಬೇಕಾದ ಹಾಗೂ ಆಧುನಿಕ ಸೌಲಭ್ಯ ಹೊಂದುವ ಅಗತ್ಯವಿದೆ ಎಂದು ಗದಗ ಅಂಚೆ ವಿಭಾಗದ ಅಂಚೆ ಅಧೀಕ್ಷಕ ನಿಂಗನಗೌಡ ಭಂಗಿಗೌಡ್ರ ಅಭಿಪ್ರಾಯಪಟ್ಟರು.
    ಪಟ್ಟಣದ ಚನ್ನಮ್ಮನವನ ಕಲ್ಯಾಣ ಮಂಟಪದಲ್ಲಿ ಅಂಚೆ ಇಲಾಖೆ, ಗದಗ ವಿಭಾಗ, ಗದಗ ಉಪವಿಭಾಗದ ವತಿಯಿಂದ ಆಯೋಜಿಸಿದ್ದ ಅಂಚೆ ಜನಸಂಪರ್ಕ ಅಭಿಯಾನದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ‘ಅಂಚೆ ಕಚೇರಿಗೆ 250 ವರ್ಷಗಳ ಇತಿಹಾಸವಿದ್ದು ಜನರ ವಿಶ್ವಾಸಕ್ಕೆ ಪಾತ್ರ್‌ಆಗಿದೆ. ಇಲಾಖೆಯ ಸಿಬ್ಬಂದಿ ಕೂಡ ಪ್ರಾಮಾಣಿಕವಾಗಿ ನಯ-ವಿನಯದಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಶಾಲಾ- ಕಾಲೇಜು ಮಕ್ಕಳಿಗೆ ಅಂಚೆ ಕಚೇರಿಯ ಸೇವೆ ಇಂದು ತುಂಬಾ ಸಹಾಯಕವಾಗಿದೆ. ಇದೀಗ ಠೇವಣಿ, ವಿಮೆ, ಉಳಿತಾಯ ಖಾತೆ ಇತ್ಯಾದಿ ಸೌಲಭ್ಯವಿದೆ. ಫೋನ್ ಮೂಲಕ ತಿಳಿಸಿದರೆ ಖಾತೆಯಲ್ಲಿನ ಹಣವನ್ನು ಮನೆಗೆ ತಲುಪಿಸುವ ಯೋಜನೆಯೂ ಇದೆ. ಜನರು ಅಂಚೆ ಇಲಾಖೆಯಲ್ಲಿರುವ ಹೊಸ ಯೋಜನೆಗಳ ಬಗ್ಗೆ ತಿಳಿದುಕೊಂಡು ಇಲಾಖೆಯ ಬೆಳವಣಿಗೆಗೆ ಕೈಜೋಡಿಸಬೇಕು’ ಎಂದರು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ಡಾ.ಚಂದ್ರು ಲಮಾಣಿ, ‘ಅಂಚೆ ಇಲಾಖೆ ವಿಶ್ವದಲ್ಲಿಯೇ ಉತ್ತಮ ಸಂಪರ್ಕ ಜಾಲವನ್ನು ಹೊಂದಿದೆ. ಅಂಚೆ ಇಲಾಖೆಯ ಕಾರ್ಯ ಸಮಾಜಮುಖಿಯಾದದ್ದು. ಸ್ಪರ್ಧಾತ್ಮಕ ಯುಗದ ಪೈಪೋಟಿಯಲ್ಲೂ ಅಂತರ್ಜಾಲ ತಂತ್ರಜ್ಞಾನವನ್ನು ಬಳಸಿಕೊಂಡು ಜನರಿಗೆ ಉತ್ತಮ ಸೌಲಭ್ಯ ಒದಗಿಸುತ್ತಿದೆ ಎಂದರು.
    ತಹಸೀಲ್ದಾರ್ ಕೆ.ಆನಂದಶೀಲ ಮಾತನಾಡಿದರು. ಸಹಾಯಕ ಅಂಚೆ ಅಧೀಕ್ಷಕ ಶ್ರೀಕಾಂತ ಜಾಧವ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಿ.ಜಿ. ಹಿರೇಮಠ, ಬಿ.ಎಸ್. ಬಾಳೇಶ್ವರಮಠ, ಶಕುಂತಲಾ ಹೊರಟ್ಟಿ, ಐಪಿಪಿಬಿ ವ್ಯವಸ್ಥಾಪಕ ಪಿ.ಆನಂದಸಾಗರ, ಪಟ್ಟಣದ ಅಂಚೆಪಾಲಕ ದೊಡ್ಡಪ್ಪ ಇಟಗಿ, ನಿವೃತ್ತ ಅಂಚೆಪಾಲಕ ಬಸವರಾಜ ಬಳ್ಳೊಳ್ಳಿ ಇತರರಿದ್ದರು. ಅಂಚೆ ಕಚೇರಿ ಸಂಪರ್ಕ ಅಭಿಯಾನದ ಅಂಗವಾಗಿ ಸ್ಥಳೀಯ ಪುರಸಭೆ ಪೌರಕಾರ್ಮಿಕರನ್ನು ಹಾಗೂ ಅಂಚೆ ಇಲಾಖೆಯಲ್ಲಿ ಉತ್ತಮ ಸಾಧನೆ ಮಾಡಿದ ಇಲಾಖೆ ಸಿಬ್ಬಂದಿಯನ್ನು ಸನ್ಮಾನಿಸಲಾಯಿತು, ಈಶ್ವರ ಮೆಡ್ಲೇರಿ ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts