More

    ಪ್ರೌಢಶಿಕ್ಷಣ ವಿದ್ಯಾರ್ಥಿಗಳಿಗೆ ಬುನಾದಿ ಇದ್ದಂತೆ

    ಲಕ್ಷ್ಮೇಶ್ವರ: ಪ್ರೌಢಶಾಲೆ ಹಂತದ ಶಿಕ್ಷಣ ವಿದ್ಯಾರ್ಥಿ ಜೀವನದ ಬುನಾದಿ. ವಿದ್ಯಾರ್ಥಿಗಳಲ್ಲಿ ಶಿಕ್ಷಣದ ಮಹತ್ವ ತಿಳಿಸಿ ಶ್ರೇಷ್ಠ ನಾಗರಿಕರನ್ನಾಗಿ ರೂಪಿಸುವ ಗುರುತರ ಜವಾಬ್ದಾರಿ ಶಿಕ್ಷಕರು ಹಾಗೂ ಶಿಕ್ಷಣಾಧಿಕಾರಿಗಳ ಮೇಲಿದೆ ಎಂದು ಶಾಸಕ ಡಾ. ಚಂದ್ರು ಲಮಾಣಿ ಹೇಳಿದರು.
    ಪಟ್ಟಣದ ಬಿಸಿಎನ್ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಏರ್ಪಡಿಸಿದ್ದ ಸರ್ಕಾರಿ ಪ್ರೌಢಶಾಲೆಗಳ ಅಭಿವೃದ್ಧಿ, ಗುಣಾತ್ಮಕ ಶಿಕ್ಷಣ, ಎಸ್‌ಎಸ್‌ಎಲ್‌ಸಿ ಫಲಿತಾಂಶ ಉತ್ತಮೀಕರಣ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು. ಶಿಕ್ಷಣ ಕ್ಷೇತ್ರ ಸರ್ವಕ್ಷೇತ್ರದ ಪ್ರಗತಿಯ ಮೂಲವಾಗಿದೆ. ಈ ಕ್ಷೇತ್ರದ ಆಮೂಲಾಗ್ರ ಬದಲಾವಣೆ, ಸುಧಾರಣೆ, ಪ್ರಗತಿಯಲ್ಲಿ ಶಿಕ್ಷಣಾಧಿಕಾರಿಗಳ ಪಾತ್ರ ಮಹತ್ವದ್ದಾಗಿದೆ ಎಂದರು. ಶಿಕ್ಷಣಾಧಿಕಾರಿಗಳ ಸಂಘದ ಉಪಾಧ್ಯಕ್ಷ ಜಿ.ಎಂ. ಮುಂದಿನಮನಿ ಮಾತನಾಡಿ, ಎಲ್ಲ ಅಧಿಕಾರಿಗಳು ಶಿಕ್ಷಣ ಇಲಾಖೆಯ ಮಿದುಳು ಇದ್ದ ಹಾಗೆ. ಎಲ್ಲ ಕೆಲಸಗಳನ್ನು ಕಾಳಜಿ ಪೂರ್ವಕವಾಗಿ ಮಾಡುತ್ತಿದ್ದಾರೆ ಎಂದರು. ಅಧ್ಯಕ್ಷತೆ ವಹಿಸಿದ್ದ ಜಿ.ಎಲ್. ಬಾರಾಟಕ್ಕೆ ಮಾತನಾಡಿ, ಎಸ್‌ಎಸ್‌ಎಲ್‌ಸಿ ಫಲಿತಾಂಶ ಸುಧಾರಣೆಗೆ ದಸರಾ ರಜಾ ದಿನಗಳಲ್ಲಿ ಕೂಡ ಪ್ರೌಢಶಾಲೆ ಮುಖ್ಯೋಪಾಧ್ಯಾಯರು, ಶಿಕ್ಷಣಾಧಿಕಾರಿಗಳು, ಶಿಕ್ಷಕರು ವಿಶೇಷ ತರಗತಿ, ಮೇಲ್ವಿಚಾರಣೆ ಮಾಡುತ್ತಿರುವುದು ಶ್ಲಾಘನೀಯ ಎಂದರು. ಆರ್.ಎಸ್. ಬುರಡಿ ಮಾತನಾಡಿ, ರುದ್ರಪ್ಪ ಹುರುಳಿ, ಎಸ್.ಡಿ. ಕನವಳ್ಳಿ, ವಿ.ವಿ. ನಡುವಿನಮನಿ, ಎಚ್.ಬಿ. ರಡ್ಡೇರ, ಶಂಕರ ಹಡಗಲಿ, ಎಸ್.ಕೆ. ಹವಾಲ್ದಾರ ಮಾತನಾಡಿದರು. ಮುಂಡರಗಿ ಪ್ರಭಾರ ಬಿಇಒ ಗಂಗಾಧರ ಅಣ್ಣಿಗೇರಿ, ಬಸವರಾಜ ಮಜ್ಜಿಗಿ, ಮಂಗಳಾ ತಾಪಸ್ಕರ, ಬಿ.ಎಸ್. ಹರ್ಲಾಪುರ, ಸಿಆರ್‌ಪಿ, ಬಿಆರ್‌ಪಿ ಪಾಲ್ಗೊಂಡಿದ್ದರು. ಎಂ.ಬಿ. ಹೊಸಮನಿ, ಎಸ್.ಎಸ್. ಕುರಿ, ಈಶ್ವರ ಮೆಡ್ಲೇರಿ, ಜೆ.ಎಸ್. ಗಾಯಕವಾಡ, ಕೆ.ಪಿ ಕಂಬಳಿ ನಿರ್ವಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts