More

    ನ್ಯಾಯಾಲಯ ಕಲಾಪದಿಂದ ಹೊರಗುಳಿದ ವಕೀಲರು

    ಕುಶಾಲನಗರ: ಜ್ಞಾನವ್ಯಾಪಿ ಮಂದಿರ ವಿಚಾರದಲ್ಲಿ ರಾಮನಗರದ ವಕೀಲರೊಬ್ಬರು ನ್ಯಾಯಾಂಗ ವ್ಯವಸ್ಥೆ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂದು ಆರೋಪಿಸಿ ವಕೀಲರು ಬುಧವಾರ ನ್ಯಾಯಾಲಯ ಕಲಾಪದಿಂದ ಹೊರಗುಳಿದು ಆಕ್ರೋಶ ವ್ಯಕ್ತಪಡಿಸಿದರು.

    ವಕೀಲರ ಸಂಘದ ತಾಲೂಕು ಅಧ್ಯಕ್ಷ ಆರ್.ಕೆ.ನಾಗೇಂದ್ರ ಬಾಬು ಮಾತನಾಡಿ, ಜ್ಞಾನವ್ಯಾಪಿ ಮಂದಿರದಲ್ಲಿ ಪೂಜೆ ಸಲ್ಲಿಸಲು ಹಿಂದುಗಳಿಗೆ ಅವಕಾಶ ನೀಡಿ ಅಲ್ಲಿನ ಹೈಕೋರ್ಟ್ ತೀರ್ಪು ನೀಡಿತ್ತು. ಈ ಕುರಿತು ನ್ಯಾಯಾಧೀಶರು, ನ್ಯಾಯಾಂಗ ವ್ಯವಸ್ಥೆ ಮತ್ತು ಸಂವಿಧಾನದ ಬಗ್ಗೆ ಕೆಟ್ಟದಾಗಿ ಮಾತನಾಡಿದ ರಾಮನಗರದ ವಕೀಲರ ವಿರುದ್ಧ ದೂರು ಸಲ್ಲಿಸಲಾಗಿದೆ. ಪ್ರತಿ ದೂರು ಸಲ್ಲಿಸುವ ಸಂದರ್ಭ 45 ವಕೀಲರ ವಿರುದ್ಧ ರಾಮನಗರದಲ್ಲಿ ಎಫ್‌ಐಆರ್ ಮಾಡಲಾಗಿದೆ. ಇದು ಸರಿಯಲ್ಲ ಎಂದು ಕಿಡಿಕಾರಿದರು.

    ಮಂಗಳೂರಿನಲ್ಲಿ ಎಸ್‌ಡಿಪಿಐ ಘಟಕ ಜ್ಞಾನವ್ಯಾಪಿ ವಿಚಾರದಲ್ಲಿ ನ್ಯಾಯಾಂಗ ವ್ಯವಸ್ಥೆ ಬಗ್ಗೆ ಟೀಕೆ ಮಾಡಿರುವುದು ಅಕ್ಷಮ್ಯ. ನ್ಯಾಯಾಂಗ ವ್ಯವಸ್ಥೆ ಎನ್ನುವುದು ಸ್ವತಂತ್ರ. ಇಂತಹ ವ್ಯವಸ್ಥೆ ವಿರುದ್ಧ ದೋಷಾರೋಪ ಮತ್ತು ಅವಹೇಳನಕಾರಿಯಾಗಿ ಮಾತನಾಡುವುದು ತಪ್ಪು. ಇದನ್ನು ಯಾವುದೇ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ ಎಂದು ಹೇಳಿದರು.

    ಸಂಘದ ಕಾರ್ಯದರ್ಶಿ ಕೆ.ಬಿ.ಮೋಹನ್, ಎಸ್.ಕೆ.ಮಂಜುನಾಥ್, ಪಿ.ಆರ್.ರಾಬಿನ್, ಜಿ.ಎಲ್.ಸವಿತಾ, ಕೆ.ಎಸ್.ರಾಘವೇಂದ್ರ, ಕೆ.ಪಿ.ಚಂದ್ರಿಕಾ, ವೈಶಾಲಿ, ಕೆ.ಜೆ.ನವೀನ್, ಬಿ.ಬಿ.ಚಂದನ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts