More

    ರಂಗಾಯಣ ಚಿಣ್ಣರ ಸಂತೆಯಲ್ಲಿ ಮಕ್ಕಳಿಂದ ಭರ್ಜರಿ ವ್ಯಾಪಾರ..!

    ಮೈಸೂರು: ಸದಾ ಅಮ್ಮನ ಸೆರಗು ಹಿಡಿದು ತಿಂಡಿ ತಿನಿಸುಗಳಿಗಾಗಿ ಮಕ್ಕಳು ರಚ್ಚೆ ಹಿಡಿಯುವುದು ಸಾಮಾನ್ಯ. ಆದರೆ, ಮಂಗಳವಾರ ರಂಗಾಯಣ ಚಿಣ್ಣರ ಮೇಳದ ಪ್ರಯುಕ್ತ ಹಮ್ಮಿಕೊಂಡಿದ್ದ ‘ಚಿಣ್ಣರ ಸಂತೆ’ಯಲ್ಲಿ ಮಕ್ಕಳು ತಿಂಡಿ ತಿನಿಸುಗೋಸ್ಕರ ರಚ್ಚೆ ಹಿಡಿಯಲಿಲ್ಲ. ಬದಲಾಗಿ ತಾವೇ ತಿಂಡಿ ತಿನಿಸು ಮಾರಾಟ ಮಾಡುವ ಮೂಲಕ ಗಮನ ಸೆಳೆದರು.

    ರಂಗಾಯಣ ಆವರಣದಲ್ಲಿ ಮಳಿಗೆಗಳನ್ನು ತೆರೆದು ಮಕ್ಕಳು ಭರ್ಜರಿ ವ್ಯಾಪಾರ ನಡೆಸಿದರು. ರಂಗಾಯಣ ಆವರಣಕ್ಕೆ ಆಗಮಿಸಿದ ಜನರನ್ನು ಮನವೊಲಿಸಿ ತಾವು ತಂದಿದ್ದ ವಸ್ತುಗಳನ್ನು ಖರೀದಿಸುವಂತೆ ಮಾಡುವಲ್ಲಿ ಯಶಸ್ವಿಯಾದರು. ಮಕ್ಕಳ ಕೋರಿಕೆಗೆ ಬಹುತೇಕರು ಇಲ್ಲ ಅನ್ನದೆ ಉತ್ಸಾಹದಿಂದ ಖರೀದಿಯಲ್ಲಿ ತೊಡಗಿದ್ದ ದೃಶ್ಯ ಕಂಡು ಬಂತು.

    ಮನೆಯಲ್ಲಿ ಅಮ್ಮ ತಯಾರಿಸಿಕೊಟ್ಟ ತಿಂಡಿಗಳು, ಅಂಗಡಿಗಳಿಂದ ಖರೀದಿಸಿದ ಕುರುಕಲು ತಿಂಡಿಗಳನ್ನು ಮಕ್ಕಳು ಮಾರಾಟ ಮಾಡಿದರು. ಬಿಸಿಲಿನ ತಾಪ ಹೆಚ್ಚಿದ್ದ ಹಿನ್ನೆಲೆಯಲ್ಲಿ ಮಕ್ಕಳು ಈ ಬಾರಿ ಮಜ್ಜಿಗೆ, ತಂಪು ಪಾನೀಯಗಳನ್ನು ಮಾರಾಟ ಮಾಡಿ ಗಮನ ಸೆಳೆದರು. ಮಕ್ಕಳು ರೈತರ ವೇಷತೊಟ್ಟು ಹಣ್ಣು, ಹಂಪಲುಗಳನ್ನು ಮಾರಾಟ ಮಾಡಿದ್ದು ವಿಶೇಷವಾಗಿತ್ತು. ಚಿಣ್ಣರ ಸಂತೆಯಲ್ಲಿ ಮಕ್ಕಳು ಪಾನಿಪುರಿ, ಚುರುಮುರಿ, ಬಾತ್, ಸಂಡಿಗೆ, ರವೆ ಉಂಡೆ, ಪುಳಿಯೊಗರೆ ಸೇರಿದಂತೆ ವಿವಿಧ ಪದಾರ್ಥಗಳನ್ನು ಮಾರಾಟ ಮಾಡಿ ಗಮನ ಸೆಳೆದರು.

    ಜಿಲ್ಲಾಧಿಕಾರಿ ಚಾಲನೆ:

    ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಚಿಣ್ಣರ ಸಂತೆಗೆ ಚಾಲನೆ ನೀಡಿ ಮಕ್ಕಳಿಂದ ಕೆಲವು ಪದಾರ್ಥಗಳನ್ನು ಖರೀದಿಸಿದರು. ಸಂತೆಯ ಎಲ್ಲ ಮಳಿಗೆಗಳಿಗೂ ಭೇಟಿ ನೀಡಿದ ಜಿಲ್ಲಾಧಿಕಾರಿ ಅವರು ವ್ಯಾಪಾರ ವಹಿವಾಟು ಹೇಗೆ ನಡೆಯುತ್ತಿದೆ ಎಂದು ವಿಚಾರಿಸಿದರು. ಜಿಲ್ಲಾಧಿಕಾರಿ ರಾಜೇಂದ್ರ ಅವರ ಪುತ್ರಿ ಆಧೃತಿ ಶಿಬಿರಾರ್ಥಿಯಾಗಿದ್ದು, ಅಧೃತಿ ಸ್ವೀಟ್ ಕಾರ್ನ್ ತಯಾರಿಸಿ ತಂದೆಗೆ ಮಾರಾಟ ಮಾಡಿ ಗಮನ ಸೆಳೆದಳು. ಇದೇ ಸಂದರ್ಭ ಜಿಲ್ಲಾಧಿಕಾರಿ ಮಾವಿನ ಹಣ್ಣನ್ನು ಖರೀದಿಸಿದರು.

    ಈ ಸಂದರ್ಭ ಮಾತನಾಡಿದ ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ, ಮಕ್ಕಳಿಗೆ ವ್ಯಾವಹಾರಿಕ ಜೀವನ ಹೇಗೆ ಇರುತ್ತದೆ ಎಂದು ತೋರಿಸಲು ರಂಗಾಯಣ ಚಿಣ್ಣರ ಸಂತೆ ಆಯೋಜಿಸಿರುವುದು ಸಂತಸದ ವಿಚಾರ. ಇದರಿಂದ ತಂದೆ, ತಾಯಂದಿರ ಕಷ್ಟ ಮಕ್ಕಳಿಗೂ ಅರ್ಥವಾಗುತ್ತದೆ ಎಂದು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts