More

    ಆರೋಗ್ಯದ ಬಗ್ಗೆ ಕಾಳಜಿ ವಹಿಸಿ

    ಯಾದಗಿರಿ: ದೇಶದೆಲ್ಲೆಡೆ ತಾಂಡವವಾಡುತ್ತಿರುವ ಕರೊನಾ ವೈರಸ್ ನಿಯಂತ್ರಣಕ್ಕಾಗಿ ಗುರುಮಠಕಲ್ ಪಟ್ಟಣದ ಸರ್ಕಾರಿ ಪದವಿ ಕಾಲೇಜು ಆವರಣದಲ್ಲಿ ಸ್ಥಳೀಯ ಜೆಡಿಎಸ್ ಶಾಸಕ ನಾಗನಗೌಡ ಕಂದಕೂರ ತಮ್ಮ ಸ್ವಂತ ಖಚರ್ಿನಿಂದ ನಿಮರ್ಾಣ ಮಾಡಲಾದ ಸ್ಯಾನಿಟೈಸರ್ ಸ್ಪ್ರೇ ಟನಲ್ಗೆ ಬುಧವಾರ ಖಾಸಾ ಮಠದ ಶ್ರೀ ಶಾಂತವೀರ ಮುರುಘಾರಾಜೇಂದ್ರ ಸ್ವಾಮೀಜಿ ಮತಾ ಮಾಣಿಕೇಶ್ವರಿ ಅಮ್ಮನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು.

    ನಂತರ ಮಾತನಾಡಿದ ಅವರು, ಶಾಸಕ ನಾಗನಗೌಡ ಕಂದಕೂರ ಅವರು ಕ್ಷೇತ್ರದ ಜನರ ಹಿತದೃಷ್ಠಿಯಿಂದ ಕಾಲೇಜು ಆವರಣದಲ್ಲಿ ಸ್ಪ್ರೇ ಟನಲ್ ನಿಮರ್ಾಣ ಮಾಡಿದ್ದಾರೆ. ಇಲ್ಲಿ ತರಕಾರಿ ಮಾರಾಟ ಮಾಡಲು ತಾಲೂಕು ಆಡಳಿತ ವ್ಯವಸ್ಥೆ ಮಾಡಿದ್ದು, ಈ ಟನಲ್ ಒಳಗಿನಿಂದ ಪ್ರವೇಶಿಸಿದ ಔಷಧಿ ಸಿಂಪಡಿಸಿಕೊಂಡು ತಮ್ಮ ಆರೋಗ್ಯ ಕಾಪಾಡಿಕೊಳ್ಳುವಂತೆ ಕಿವಿಮಾತು ಹೇಳಿದರು.

    ಇಡೀ ವಿಶ್ವದಾದ್ಯಂತ ಇಂದು ಮಹಾಮಾರಿ ಕರೊನಾ ವೈರಸ್ ಜನರನ್ನು ಭಯಭೀತರನ್ನಾಗಿ ಮಾಡಿದ್ದು, ಈ ಮಾರಕ ರೋಗಕ್ಕೆ ಸಾವಿರಾರು ಜನ ಬಲಿಯಾಗಿದ್ದಾರೆ. ಸಧ್ಯಕ್ಕೆ ಈ ವೈರಸ್ಗೆ ಯಾವುದೇ ಔಷಧಿ ಇಲ್ಲದ ಕಾರಣ ಜನತೆ ಮನೆಯಿಂದ ಹೊರಗಡೆ ಬರದೆ ಮುನ್ನೆಚ್ಚರಿಕೆ ವಹಿಸುವಂತೆ ಸಲಹೆ ನೀಡಿದರು.

    ಜೆಡಿಎಸ್ನ ರಾಜ್ಯ ಯುವ ಮುಖಂಡ ಶರಣಗೌಡ ಕಂದಕೂರ ಮಾತನಾಡಿ, ಕಾಲೇಜಿನ ಆವರಣದಲ್ಲಿ ತಾತ್ಕಾಲಿಕ ವ್ಯವಸ್ಥೆ ಮಾಡಿದ ತರಕಾರಿ ಮಾರುಕಟ್ಟೆಗೆ ಸಾವಿರಾರು ಜನ ಆಗಮಿಸುತ್ತಾರೆ. ಈ ವೇಳೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಅಗತ್ಯ ಇದೆ. ಎಲ್ಲೆಡೆ ಲಾಕ್ಡೌನ್ ಇರುವುದರಿಂದ ಕ್ಷೇತ್ರದ ಜನರು ಉಪವಾಸದಿಂದ ಇರಕೂಡದು ಎಂಬ ದೃಷ್ಠಿಯಿಂದ ನಮ್ಮ ಕಾರ್ಯಕರ್ತರು ಕಳೆದ 9 ದಿನಗಳಿಂದ ಉಚಿತ ಅನ್ನ ಸಂತರ್ಪಣೆ ಮಾಡುತ್ತಿದ್ದಾರೆ. ಪ್ರತಿಯೊಬ್ಬರು ಕಡ್ಡಾಯವಾಗಿ ಮಾಸ್ಕ್ ಧರಿಸಿಕೊಳ್ಳುವ ಮೂಲಕ ತಮ್ಮ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.

    ತಹಸೀಲ್ದಾರ್ ಸಂಗಮೇಶ ಜಿಡಗೆ, ಪುರಸಭೆ ಮುಖ್ಯಾಧಿಕಾರಿ ಜೀವನಕುಮಾರ ಕಟ್ಟಿಮನಿ, ಜೆಡಿಎಸ್ ಬ್ಲಾಕ್ ಅಧ್ಯಕ್ಷ ಶರಣು ಆವಂಟಿ, ಪಿಎಸ್ಐ ಶೀಲಾದೇವಿ, ಪ್ರಮುಖರಾದ ಪ್ರಕಾಶ ನಿರೆಟ್ಟಿ, ಪುರಸಭೆ ಸದಸ್ಯ ಪಾಪಣ್ಣ ಮನ್ನೆ, ಕೃಷ್ಣಾರಡ್ಡಿ ಪಾಟೀಲ್, ರವಿ ಪಾಟೀಲ್, ನರಸಪ್ಪ ವಕೀಲ, ಸಾಬಣ್ಣ ಮನ್ನೆ, ಶಿವಾಜಿ ವಿಶ್ವಕರ್ಮ, ಎಂ.ಗೋವಿಂದ, ಎ.ರಾಮು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts