More

    ಸಂರಕ್ಷಣಾ ಕಾಯ್ದೆ ಅನುಷ್ಠಾನಗೊಳಿಸಿ  -ಜಿಲ್ಲಾಡಳಿತಕ್ಕೆ ವಕೀಲರ ಸಂಘದ ಮನವಿ

    ದಾವಣಗೆರೆ: ಕಲಬುರಗಿಯಲ್ಲಿ ನಡೆದ ವಕೀಲ ಈರಣ್ಣಗೌಡ ಪಾಟೀಲ ಹತ್ಯೆ ಖಂಡಿಸಿ ಜಿಲ್ಲಾ ವಕೀಲರ ಸಂಘದ ಪದಾಧಿಕಾರಿಗಳು ಸೋಮವಾರ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.
    ಇದಕ್ಕೂ ಮುನ್ನ ವಕೀಲರ ಭವನದಲ್ಲಿ ಸಂಘದ ಸರ್ವ ಸದಸ್ಯರ ಸಭೆ ನಡೆಸಿ ಮೃತರ ಆತ್ಮಕ್ಕೆ ಶಾಂತಿ ಕೋರಿ ಮೌನಾಚರಿಸಲಾಯಿತು. ಈರಣ್ಣಗೌಡ ಪಾಟೀಲ ಹತ್ಯೆ ಬಗ್ಗೆ ಸೂಕ್ತ ತನಿಖೆ ನಡೆಸಿ ಹಂತಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಆಗ್ರಹಿಸಲಾಯಿತು.
    ಬೆಳಗಾವಿ ಅಧಿವೇಶನದಲ್ಲಿಯೇ ವಕೀಲರ ಸಂರಕ್ಷಣಾ ಕಾಯ್ದೆಯನ್ನು ಜಾರಿಗೊಳಿಸಲು ರಾಜ್ಯ ಸರ್ಕಾರ ಕ್ರಮ ವಹಿಸಿ, ವಕೀಲರ ರಕ್ಷಣೆಗೆ ಮುಂದಾಗಬೇಕು ಎಂದು ನಿರ್ಣಯಿಸಿದ್ದ ಮನವಿಯನ್ನು ಅಪರ ಜಿಲ್ಲಾಧಿಕಾರಿ ಪಿ.ಎನ್.ಲೋಕೇಶ್ ಅವರಿಗೆ ಸಲ್ಲಿಸಿದರು.
    ವಕೀಲರ ಸಂಘದ ಜಿಲ್ಲಾಧ್ಯಕ್ಷ ಎಲ್.ಎಚ್. ಅರುಣಕುಮಾರ್, ಉಪಾಧ್ಯಕ್ಷ ಜಿ.ಕೆ. ಬಸವರಾಜ್, ಕಾರ್ಯದರ್ಶಿ ಎಸ್. ಬಸವರಾಜ್, ಜಂಟಿ ಕಾರ್ಯದರ್ಶಿ ಎ.ಎಸ್.ಮಂಜುನಾಥ್, ಗುಮ್ಮನೂರು ಮಲ್ಲಿಕಾರ್ಜುನ್, ಆರ್. ಭಾಗ್ಯಲಕ್ಷ್ಮೀ, ಎಚ್. ಗುರುಮೂರ್ತಿ, ಮುಷ್ತಾಕ್ ಮಾಲ್ವಿ, ಪಿ.ಆರ್. ಗುರುಬಸವರಾಜ್, ಎನ್.ಜಯದೇವನಾಯ್ಕ, ಡಿ.ಪಿ.ಬಸವರಾಜ್, ವಾಗೀಶ ಕಟಗಿಹಳ್ಳಿಮಠ, ಎಲ್.ಎಂ.ಆಂಜನೇಯ, ಎಂ. ಚೌಡಪ್ಪ, ಸಂತೋಷ್, ಎಲ್. ನಾಗರಾಜ್, ಕೆ.ಎಂ. ನೀಲಕಂಠಯ್ಯ, ಎಂ. ರಾಘವೇಂದ್ರ, ನಾಗರಾಜು ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts