More

    ಮಹಾಲಿಂಗಪುರದಲ್ಲಿ ಅದ್ದೂರಿ ನವರಾತ್ರಿ ಉತ್ಸವ – 26ರಂದು ಚಾಲನೆ

    ಮಹಾಲಿಂಗಪುರ: ಕರೊನಾ ಮಹಾಮಾರಿಯಿಂದ ಪಟ್ಟಣದ ಬನಶಂಕರಿದೇವಿ ದೇವಸ್ಥಾನದಲ್ಲಿ ಕಳೆದ ಎರಡು ವರ್ಷ ನವರಾತ್ರಿ ಉತ್ಸವ ಕಳೆಗುಂದಿತ್ತು. ಈ ಬಾರಿ ಸೆ. 26 ರಿಂದ ಅ.4 ರವರೆಗೆ ವಿಜೃಂಭಣೆಯಿಂದ ಉತ್ಸವ ಆಚರಿಸಲು ನಿರ್ಧರಿಸಲಾಗಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿಯ ಡಾ.ಬಿ.ಡಿ.ಸೋರಗಾಂವಿ ಹೇಳಿದರು.

    ನವರಾತ್ರಿ ಉತ್ಸವ ಆಚರಣೆ ಹಿನ್ನೆಲೆಯಲ್ಲಿ ದೇವಸ್ಥಾನದಲ್ಲಿ ಸೋಮವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಉತ್ಸವದಲ್ಲಿ ಪ್ರವಚನ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದರು.

    ರನ್ನಬೆಳಗಲಿಯ ಮಹಾಲಿಂಗ ಶಾಸ್ತ್ರೀಗಳು ಪ್ರತಿದಿನ ಸಂಜೆ 7ರಿಂದ ಶ್ರೀದೇವಿ ಪುರಾಣ ಪ್ರವಚನ ಹೇಳುವರು. ಸಹಜಾನಂದ ಸ್ವಾಮಿಗಳು ಸಾನ್ನಿಧ್ಯ ವಹಿಸಲಿದ್ದು, ವಿಶೇಷ ಅತಿಥಿಗಳಾಗಿ ಅಕ್ಕಲಕೋಟದ ಚಿಕ್ಕರೇವಣಸಿದ್ಧ ಶರಣರು ಆಗಮಿಸುವರು ಎಂದರು.

    ಮುಖಂಡರಾದ ಮಲ್ಲಪ್ಪ ಭಾವಿಕಟ್ಟಿ, ಲಕ್ಕಪ್ಪ ಚಮಕೇರಿ, ಗುರುಪಾದ ಅಂಬಿ ಹಾಗೂ ಬಿ.ಸಿ.ಪೂಜಾರಿ ಮಾತನಾಡಿ, 26 ರಂದು ಬಸವಾನಂದ ಹಾಗೂ ಸಿ.ಕೆ.ಚಿಂಚಲಿ ಮತ್ತು ಜೆಸಿ ಶಾಲೆ ಮಕ್ಕಳಿಂದ ಸ್ವಾತಂತ್ರ್ಯ ಅಮೃತ ಮಹೋತ್ಸವದ ವಂದನೆ ಕಾರ್ಯಕ್ರಮ ನಡೆಯಲಿದೆ. 27 ರಂದು ಹೂವಿನಹಡಗಲಿಯ ಪ್ರಕಾಶ ಜೈನ ಅವರಿಂದ ತತ್ವಪದ, ಜನಪದ ಹಾಗೂ ರಂಗಗೀತೆ ಹಾಡುಗಳು ಮತ್ತು ಅನ್ನಪೂರ್ಣೇಶ್ವರಿ ನೇಕಾರ ಮಹಿಳಾ ಸಂಘದಿಂದ ಕುಂಕುಮಾರ್ಚನೆ ನಡೆಯಲಿವೆ. 28 ರಂದು ಕನ್ನಡ ಕೋಗಿಲೆ ಖ್ಯಾತಿಯ ಮಹನ್ಯಾ ಪಾಟೀಲ ಅವರಿಂದ ಸಂಗೀತ ಸಂಜೆ, 29 ರಂದು ಬೀದರನ ನವಲಿಂಗ ಪಾಟೀಲ ಮತ್ತು ಧಾರವಾಡದ ಶರಣು ಹಿರೇಮಠ ಅವರಿಂದ ಹಾಸ್ಯ ಸಂಜೆ, 30 ರಂದು ಹಳಿಯಾಳದ ಹೊಂಗಿರಣ ಗೊಂಬೆ ಆಟ ಕಲಾ ತಂಡದಿಂದ ಗೊಂಬೆ ಆಟ ಮತ್ತು ಪಟ್ಟಣದ ಕಾವ್ಯದರ್ಶಿನಿ ನೃತ್ಯ ತಂಡದಿಂದ ಸಂಸ್ಕೃತಿ ನೃತ್ಯ ಪ್ರದರ್ಶನ ಜರುಗಲಿವೆ ಎಂದು ತಿಳಿಸಿದರು.

    ಅ.1ರಂದು ಗದಗ ಕಲಾವಿದ ಶ್ರೀರಾಮ ಕಾಸರ ಅವರಿಂದ ಸುಗಮ ಸಂಗೀತ, 2 ರಂದು ಹೊಸಪೇಟೆಯ ನಾಟ್ಯ ನಾದ ಕಲಾ ಕೇಂದ್ರ ತಂಡದವರಿಂದ ನೃತ್ಯ, 3 ರಂದು ಹಿಂದುಸ್ತಾನಿ ಗಾಯಕ ರವೀಂದ್ರ ಸೋರಗಾಂವಿ ಅವರಿಂದ ಸುಗಮ ಸಂಗೀತ, 4 ರಂದು ಸ್ಥಳೀಯ ಕಲಾವಿದರಿಂದ ನೃತ್ಯ ಗಾಯನ ಪ್ರದರ್ಶನ ಜರುಗಲಿದೆ ಎಂದು ಮಾಹಿತಿ ನೀಡಿದರು.

    ಉತ್ಸವದಲ್ಲಿ ಹಾಲಿ ಮತ್ತು ಮಾಜಿ ಮಂತ್ರಿಗಳು, ಸಂಸದರು, ಶಾಸಕರು, ವಿರೋಧ ಪಕ್ಷದ ನಾಯಕರು, ರಾಜಕೀಯ ಗಣ್ಯರು, ಸಾಮಾಜಿಕ ಸಾಧಕರು ಭಾಗವಹಿಸಲಿದ್ದಾರೆ ಎಂದರು.

    ಪ್ರಭು ಬೆಳಗಲಿ, ಮಹಾಲಿಂಗಪ್ಪ ಅನಂತಪುರ, ನಾರಾಯಣ ಕಿರಗಿ, ಶ್ರೀಶೈಲಪ್ಪ ಬಾಡನವರ, ಜಯವಂತ ಕಾಗಿ, ಚಂದ್ರು ಕಾಗಿ, ಸುನೀಲ ಜಮಖಂಡಿ, ಚಂದ್ರಶೇಖರ ಹುಣಶ್ಯಾಳ, ಮಹಾದೇವ ಹುಣಶ್ಯಾಳ, ಶಿವಾನಂದ ಕಿತ್ತೂರು, ಮಹಾಲಿಂಗಪ್ಪ ಹಿಕಡಿ, ಮಲ್ಲಪ್ಪ ನಿಂಬರಗಿ, ಮಹಾಲಿಂಗಪ್ಪ ಹುಣಶ್ಯಾಳ, ಶಿದಗಿರೆಪ್ಪ ಕಾಗಿ, ಮುದುಕಪ್ಪ ಬೇವಿನಗಿಡದ, ಅಲ್ಲಪ್ಪ ಹುನ್ನೂರ, ಸುಭಾಷ ಭಾವಿಕಟ್ಟಿ, ಮಹಾಲಿಂಗಪ್ಪ ಬದ್ನಿಕಾಯಿ ಮುಂತಾದವರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts