More

    ನಿರ್ಬಂಧ ನಡುವೆಯೂ ಅದ್ದೂರಿ ಜಾತ್ರೆ

    ಚಾಮರಾಜನಗರ: ಕರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಸರ್ಕಾರ ಎಲ್ಲೆಡೆ ಜಾತ್ರೆ, ಸಭೆ, ಸಮಾರಂಭಗಳನ್ನು ನಿರ್ಬಂಧಿಸಿದ್ದರೂ ನಗರದ ಚನ್ನಿಪುರ ಮೋಳೆಯಲ್ಲಿ ಸೋಮವಾರ ಮಾರಮ್ಮನ ಜಾತ್ರೆ ಅದ್ದೂರಿಯಾಗಿ ನಡೆಯಿತು.

    ಜಿಲ್ಲೆಯಲ್ಲಿ ನಡೆಯಬೇಕಿದ್ದ ಹಲವು ಧಾರ್ಮಿಕ ಕಾರ್ಯಕ್ರಮ, ಸಭೆ, ಸಮಾರಂಭಗಳನ್ನು ಜಾಗೃತಿ ದೃಷ್ಟಿಯಿಂದ ಮುಂದೂಡಲಾಗಿತ್ತು. ಆದರೆ, ನಗರದಲ್ಲಿ ಮಾರಮ್ಮನ ಜಾತ್ರೆ ವಿಜೃಂಭಣೆಯಿಂದ ಜರುಗಿದೆ. ದೇವರ ಮೇಲೆ ಭಾರವಿಟ್ಟು ಬಂದಿದ್ದ ಸಾವಿರಾರು ಭಕ್ತರು ದೇವಿಯ ದರ್ಶನ ಪಡೆದು ಪೂಜೆ ಸಲ್ಲಿಸಿದರು. ಮಾರಮ್ಮನಿಗೆ ತಬ್ಬಿಟ್ಟಿನ ಆರತಿ ಎತ್ತಿ ಭಕ್ತಿ ಮೆರೆದರು.

    ದೇಗುಲದ ಆವರಣವನ್ನು ವಿದ್ಯುತ್ ದೀಪಗಳಿಂದ ಅಲಂಕಾರ ಮಾಡಲಾಗಿತ್ತು. ದೇವಸ್ಥಾನ ಹೂಗಳಿಂದ ಅಲಕೃತಗೊಂಡು ಕಂಗೊಳಿಸುತ್ತಿತ್ತು. ಮಾರಮ್ಮ ದೇವಿಗೆ ವಿಶೇಷ ಪೂಜಾ ಕೈಂಕರ್ಯ ನೆರವೇರಿಸಲಾಯಿತು. ನಂತರ ಕೊಂಡೋತ್ಸವ ನಡೆಯಿತು. ಸುತ್ತಮುತ್ತಲಿನ ಗ್ರಾಮಸ್ಥರು ಆಗಮಿಸಿ ಕೊಂಡೋತ್ಸವವನ್ನು ಕಣ್ತುಂಬಿಕೊಂಡರು. ರಾತ್ರಿಯಿಡಿ ಸರತಿ ಸಾಲಿನಲ್ಲಿ ನಿಂತ ಭಕ್ತರು ಮಾರಮ್ಮನ ದರ್ಶನ ಪಡೆದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts