More

    ಆರ್‌ಸಿಗೆ ಬೃಹತ್ ಗುರಿ ನೀಡಿದ ಗುಜರಾತ್ ಜೈಂಟ್ಸ್: ಬೆತ್ ಮೂನಿ-ಲೌರಾ ವೊಲ್ವಾರ್ಡ್ ದಾಖಲೆಯ ಜತೆಯಾಟ

    ನವದೆಹಲಿ: ನಾಯಕಿ ಬೆತ್ ಮೂನಿ (85* ರನ್, 51 ಎಸೆತ, 12 ಬೌಂಡರಿ, 1 ಸಿಕ್ಸರ್) ಹಾಗೂ ಲೌರಾ ವೊಲ್ವಾರ್ಡ್ (76 ರನ್, 45 ಎಸೆತ, 13 ಬೌಂಡರಿ) ಒದಗಿಸಿದ ಭರ್ಜರಿ ಆರಂಭದ ನೆರವಿನಿಂದ ಗುಜರಾತ್ ಜೈಂಟ್ಸ್ ವುಮೆನ್ಸ್ ಪ್ರೀಮಿಯರ್ ಲೀಗ್ 2ನೇ ಆವೃತ್ತಿಯಲ್ಲಿ ರನ್ ಮಳೆ ಹರಿಸಿ ಆರ್‌ಸಿಬಿ ತಂಡಕ್ಕೆ ಬೃಹತ್ ಗುರಿ ನೀಡಿದೆ. ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಇಳಿದ ಗುಜರಾತ್ ಜೈಂಟ್ಸ್, 5 ವಿಕೆಟ್‌ಗೆ 199 ರನ್‌ಗಳ ಬೃಹತ್ ಮೊತ್ತ ಕಲೆಹಾಕಿದೆ.

    ಆರಂಭಿಕರಾದ ಬೆತ್ ಮೂನಿ-ಲೌರಾ ವೊಲ್ವಾರ್ಡ್ ಡಬ್ಲುೃಪಿಎಲ್‌ನಲ್ಲಿ ಮೊದಲ ವಿಕೆಟ್‌ಗೆ ಗರಿಷ್ಠ ರನ್ ಪೇರಿಸಿದ 2ನೇ ಜೋಡಿ ಎನಿಸಿತು. ಆರ್‌ಸಿಬಿ ವಿರುದ್ಧವೇ ಶೆಾಲಿ ವರ್ಮ-ಮೆಗ್ ಲ್ಯಾನಿಂಗ್ 162 ರನ್‌ಗಳಿಸಿರುವುದು ಗರಿಷ್ಠ.

    ಗುಜರಾತ್ ಜೈಂಟ್ಸ್: 5 ವಿಕೆಟ್‌ಗೆ 199 (ಲೌರಾ ವೊಲ್ವಾರ್ಡ್ 76, ಬೆತ್ ಮೂನಿ 85*, ಪೋಬಿ ಲಿಚ್ಛಿಫೀಲ್ಡ್ 18, ವೇದಾ 1, ಕ್ಯಾಥರಿನ್ ಬ್ರೈಸ್ 1*, ಜಾರ್ಜಿಯಾ ವಾರೆಹ್ಯಾಂ 36ಕ್ಕೆ 1, ಮೂಲಿನೆಕ್ಸ್ 32ಕ್ಕೆ 1).

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts