More

    ಕೋರ್ಟ್​ನಿಂದ ಶಿಕ್ಷೆಗೆ ಒಳಗಾಗಿರುವ ಮುಂಬೈ ದಾಳಿಯ ಮಾಸ್ಟರ್​ ಮೈಂಡ್​ ಹಫೀಜ್​ ಸಯೀದ್​ನನ್ನು ಪಾಕ್​ ಜೈಲಿಗಟ್ಟುವ ಧೈರ್ಯ ತೋರುತ್ತದೆಯೇ?: ಭಾರತದ ಪ್ರಶ್ನೆ

    ನವದೆಹಲಿ: ಪಾಕಿಸ್ತಾನ ಭಯೋತ್ಪಾದನಾ ವಿರೋಧಿ ಕೋರ್ಟ್​ನಿಂದ ಶಿಕ್ಷೆಗೆ ಒಳಗಾಗಿರುವ ಮುಂಬೈ ದಾಳಿಯ ಸೂತ್ರಧಾರ ಹಫೀಜ್​ ಸಯೀದ್​ನನ್ನು ಜೈಲಿಗೆ ಕಳುಹಿಸುವ ನಿರ್ಧಾರವನ್ನು ಅಲ್ಲಿನ ಸರ್ಕಾರ ತೆಗೆದುಕೊಳ್ಳುವುದೇ ಎಂದು ಕೇಂದ್ರ ಸರ್ಕಾರಿ ಮೂಲಗಳು ಪ್ರಶ್ನಿಸಿವೆ.

    ಪಾಕಿಸ್ತಾನದಲ್ಲಿ ಕಾರ್ಯನಿರ್ವಹಿಸುತ್ತಿರುವ ಭಯೋತ್ಪಾದಕ ಸಂಘಟನೆಗಳ ವಿರುದ್ಧ ಅಲ್ಲಿನ ಸರ್ಕಾರ ಕೈಗೊಂಡ ಕ್ರಮಗಳ ಬಗ್ಗೆ ಜಾಗತಿಕ ಕಾವಲು ಸಂಸ್ಥೆ ಕೆಲವೆ ದಿನಗಳಲ್ಲಿ ಪರಿಶೀಲನೆ ನಡೆಸಲಿದೆ. ಈ ಹಿನ್ನೆಲೆಯಲ್ಲಿ ಪಾಕ್​ ಯಾವ ರೀತಿ ಕ್ರಮ ಕೈಗೊಳ್ಳುತ್ತದೆ ಎಂದು ಕಾದು ನೋಡಬೇಕಾಗಿದೆ ಎಂದು ಭಾರತ ತಿಳಿಸಿದೆ.

    2008 ರ ಮುಂಬೈ ಭಯೋತ್ಪಾದಕ ದಾಳಿಯ ಮಾಸ್ಟರ್ ಮೈಂಡ್ ಸಯೀದ್​​ಗೆ ಭಯೋತ್ಪಾದಕ ಹಣಕಾಸು ಅವ್ಯವಹಾರ ಸಂಬಂಧದ ಎರಡು ಪ್ರಕರಣಗಳಲ್ಲಿ 11 ವರ್ಷಗಳ ಜೈಲು ಶಿಕ್ಷೆಯನ್ನು ಪಾಕಿಸ್ತಾನ ಭಯೋತ್ಪಾದನ ವಿರೋಧಿ ನ್ಯಾಯಾಲಯ ಬುಧವಾರ ವಿಧಿಸಿದೆ. ಅಲ್ಲದೆ ಜಾಗತಿಕ ವಾಚ್​ಡಾಗ್​ ಫೈನಾನ್ಷಿಯಲ್ ಆಕ್ಷನ್ ಟಾಸ್ಕ್ ಫೋರ್ಸ್ (ಎಫ್​ಎಟಿಎಫ್​) ಉಗ್ರ ಹಫೀಜ್​ಗೆ ಶಿಕ್ಷೆ ವಿಧಿಸಲು ಕೇವಲ ನಾಲ್ಕು ದಿನಗಳು ಮಾತ್ರ ಇವೆ. ಹೀಗಾಗಿ ಪಾಕ್​ ಸರ್ಕಾರ ಏನು ಮಾಡುತ್ತದೆ ಎಂದು ನೋಡಬೇಕು ಎಂದು ಮೂಲಗಳು ತಿಳಿಸಿವೆ.

    ಕಳೆದ ವರ್ಷ ಎಫ್‌ಎಟಿಎಫ್ ಭಯೋತ್ಪಾದನಾ ವಿರೋಧಿ ಕ್ರಿಯಾ ಯೋಜನೆ ರೂಪಿಸಿ ಫೆಬ್ರವರಿ 2020 ರೊಳಗೆ ಸಂಪೂರ್ಣವಾಗಿ ಜಾರಿಗೆ ತರಬೇಕು. ಅಲ್ಲದೆ ಉಗ್ರರನ್ನು ಶಿಕ್ಷಿಸಬೇಕು ಎಂದು ಪಾಕ್​ಗೆ ಕೋರಿತ್ತು. ಆದರೆ ಎಫ್​ಎಟಿಎಫ್​ನ ಕ್ರಿಯಾ ಯೋಜನೆ ಜಾರಿಗೆ ತರಲು ಪಾಕ್​ ವಿಫಲವಾದ ಹಿನ್ನೆಲೆಯಲ್ಲಿ ಆ ರಾಷ್ಟ್ರವನ್ನು ಬೂದು ಪಟ್ಟಿಗೆ ಸೇರಿಸಲಾಗಿದೆ.

    “ಎಫ್‌ಎಟಿಎಫ್ ಸಭೆ ನಡೆಯುವ ನಡೆಯುವ ಹಿನ್ನೆಲೆಯಲ್ಲಿ ಕೋರ್ಟ್​ ಶಿಕ್ಷೆ ಪ್ರಕಟಿಸಿದೆ. ಹೀಗಾಗಿ ಇದನ್ನು ಭಾರತ ಗಮನಿಸುತ್ತಿದೆ. ಪಾಕ್​ ಸರ್ಕಾರ ಅಂತಿಮವಾಗಿ ಯಾವ ನಿರ್ಧಾರ ಮಾಡುತ್ತದೆ ಎಂದು ಕಾದು ನೋಡಬೇಕಾಗಿದೆ ಎಂದು ಭಾರತ ಹೇಳಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts