More

    ಅರಿಹಂತ ಸಹಕಾರಿ ಬಹುರಾಜ್ಯ ಕಾಯ್ದೆ ವ್ಯಾಪ್ತಿಗೆ

    ಬೋರಗಾಂವ: ಪಟ್ಟಣದ ಅರಿಹಂತ್ ಕ್ರೆಡಿಟ್ ಸೌಹಾರ್ದ ಸಂಸ್ಥೆಯನ್ನು ಕೇಂದ್ರ ಸರ್ಕಾರ ಬಹುರಾಜ್ಯ ಕಾಯ್ದೆಯಡಿ ತಂದು ವಿವಿಧ ರಾಜ್ಯಗಳಲ್ಲಿ ಶಾಖೆ ತೆರೆಯಲು ಕೇಂದ್ರ ಸರ್ಕಾರ ಅನುಮತಿ ನೀಡಿದ್ದು, ಶೀಘ್ರದಲ್ಲೇ ಮಹಾರಾಷ್ಟ್ರದ ಕೊಲ್ಲಾಪುರ-ಸಾಂಗಲಿ ಜಿಲ್ಲೆಗಳಿಗೂ ವ್ಯವಹಾರ ವಿಸ್ತರಿಸಲಾಗುತ್ತದೆ ಎಂದು ಸಂಸ್ಥಾಪಕ ಅಧ್ಯಕ್ಷ ರಾವಸಾಹೇಬ ಪಾಟೀಲ ತಿಳಿಸಿದರು.

    ಪಟ್ಟಣದ ಸಂಸ್ಥೆಯ ಆಡಳಿತ ಕಚೇರಿಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬೋರಗಾಂವ ಸುತ್ತಮುತ್ತಲಿನ ನಾಗರಿಕರಿಗೆ ಸಾಲ ನೀಡಲು 1990ರಲ್ಲಿ ಸ್ಥಾಪಿಸಿದ್ದ ಅರಿಹಂತ ಸಹಕಾರಿ ಸಂಸ್ಥೆ ಇಂದು ರಾಜ್ಯದಲ್ಲಿಯೇ ಮಾದರಿಯಾಗಿದೆ. ತನ್ನ ಸೇವೆ, ವಿಶ್ವಾಸ ಮತ್ತು ಪ್ರಗತಿಗೆ ಬದ್ಧವಾಗಿ ರಾಜ್ಯದ ಬೆಳಗಾವಿ, ಹುಬ್ಬಳ್ಳಿ-ಧಾರವಾಡ ಮತ್ತು ಬಾಗಲಕೋಟೆ ಜಿಲ್ಲೆಗಳ ಪ್ರಮುಖ ಶಾಖೆಗಳೊಂದಿಗೆ 54 ಶಾಖೆಗಳ ಮೂಲಕ ಕಾರ್ಯನಿರ್ವಹಿಸುತ್ತಿದೆ ಎಂದರು.

    ಆರಂಭದಲ್ಲಿ 870 ಸದಸ್ಯರು, 4.35 ಲಕ್ಷ ರೂ ಷೇರು ಬಂಡವಾಳ ಹೊಂದಿ, 5.25 ಲಕ್ಷ ರೂ. ಠೇವಣಿ ಸಂಗ್ರಹಿಸಿತ್ತು. ಮೊದಲ ವರ್ಷದಲ್ಲೇ 8.45 ಲಕ್ಷ ರೂ. ಸಾಲ ನೀಡಿತ್ತು. ಪ್ರಸ್ತುತ ಸಂಸ್ಥೆ 13,870 ಸದಸ್ಯರು, 5.51 ಕೋಟಿ ರೂ.ಷೇರು ಬಂಡವಾಳ ಹೊಂದಿದೆ. 67.63 ಕೋಟಿ ರೂ. ನಿಧಿ ಮತ್ತು 1104 ಕೋಟಿ ರೂ. ಠೇವಣಿಯಿದೆ. 179 ಕೋಟಿ ರೂ. ಹೂಡಿಕೆ ಮಾಡಿ 938 ಕೋಟಿ ರೂ. ಸಾಲ ವಿತರಿಸಿದೆ ಎಂದರು.

    ಸಾಲಗಾರರಿಗೆ 20 ಲಕ್ಷ ರೂ. ಮತ್ತು ನೌಕರರಿಗೆ 25 ಲಕ್ಷ ರೂ.ವರೆಗೆ ವಿಮೆ ಸೌಲಭ್ಯ ನೀಡುವ ಮೂಲಕ ಸದಸ್ಯರ ಮತ್ತು ನೌಕರರ ಕಲ್ಯಾಣಕ್ಕಾಗಿ ವಿವಿಧ ಯೋಜನೆಗಳನ್ನು ಕೈಗೊಳ್ಳಲಾಗಿದೆ. ಸಂಸ್ಥೆಯ ಪ್ರಗತಿಗೆ ಆಡಳಿತ ಮಂಡಳಿ, ಹಾಗೂ ರೈತರ, ಸದಸ್ಯರ, ಹಿತೈಷಿಗಳ, ಠೇವಣಿದಾರರ, ಸಾಲಗಾರರ ಹಾಗೂ ಪ್ರಾಮಾಣಿಕ ನೌಕರರ ಸಹಕಾರವೇ ಕಾರಣ ಎಂದರು.

    ಎಲ್ಲರ ನಂಬಿಕೆಗೆ ಪಾತ್ರವಾಗಿರುವ ಅರಿಹಂತ ಸಂಸ್ಥೆ ವಿವಿಧ ರಾಜ್ಯಗಳ ಹಲವರು ಆಗ್ರಹಿಸಿದ ಪರಿಣಾಮ ವಾರ್ಷಿಕ ಸಭೆಯಲ್ಲಿ ಠರಾವು ಮಾಡಲಾಗಿತ್ತು. ಸಂಸ್ಥೆಯ ಸ್ಥಿತಿ ಮತ್ತು ಪ್ರಗತಿಯನ್ನು ಪರಿಶೀಲಿಸಿದ ನಂತರ ಕರ್ನಾಟಕ,ಮಹಾರಾಷ್ಟ್ರ ಮತ್ತು ದೆಹಲಿಯ ಸಹಕಾರಿಗಳ ನಿಬಂಧಕರ ವಿಶೇಷ ಸಹಕಾರದಿಂದಾಗಿ ಬಹುರಾಜ್ಯ ಕಾಯ್ದೆಯಡಿ ಶಾಖೆ ತೆರೆಯಲು ಸರ್ಕಾರ ಅನುಮತಿಸಿದೆ ಎಂದರು.

    ಜಿಎಂ ಅಶೋಕ ಬಂಕಾಪುರೆ ಸ್ವಾಗತಿಸಿದರು. ಉಪಾಧ್ಯಕ್ಷ ಸುಭಾಷ ಶೆಟ್ಟಿ, ಸಂಚಾಲಕರಾದ ಅಭಿನಂದನ ಪಾಟೀಲ, ಜಯಗೊಂಡ ಪಾಟೀಲ, ಅಭಯಕುಮಾರ ಕರೋಲೆ, ಜಯಪಾಲ ನಾಗಾವೆ, ಅಪ್ಪಾಸಾಹೇಬ ಕಡೋಳೆ, ಪಿರಗೊಂಡ ಪಾಟೀಲ, ಭುಜಗೊಂಡ ಪಾಟೀಲ, ಶರದಕುಮಾರ ಲಾಡಗೆ, ಸತೀಶ ಪಾಟೀಲ, ಬಾಬಾಸಾಹೇಬ ಅರಾಜ, ಅಜಿತ ಕಾಂಬಳೆ, ಶ್ರೀಕಾಂತ ವಾಸವಾಡೆ, ನಿರ್ಮಲಾ ಬಳ್ಳೋಳೆ, ವಿಮಲ ಪಾಟೀಲ, ಶಾಂತಿನಾಥ ತೇರದಾಳೆ, ಅಭಿನಂದನ ಬೆನಾಡೆ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts