More

    ಭೂಸುಧಾರಣೆ ಕಾಯ್ದೆ ತಿದ್ದುಪಡಿ ವಾಪಸ್‌ ಪಡೆಯುವಂತೆ ಒತ್ತಾಯಿಸಿ ದಲಿತ ಹಕ್ಕುಗಳ ಸಮಿತಿ ಪ್ರತಿಭಟನೆ

    ಕೊಪ್ಪಳ: ದಲಿತ ವಿರೋಧಿ ಭೂಸುಧಾರಣೆ ಕಾಯ್ದೆ ತಿದ್ದುಪಡಿ ವಾಪಸ್ ಪಡೆಯುವಂತೆ ಒತ್ತಾಯಿಸಿ ದಲಿತ ಹಕ್ಕುಗಳ ಸಮಿತಿಯಿಂದ ಗುರುವಾರ ನಗರದ ತಹಸೀಲ್ದಾರ್ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು.

    ಭೂಸುಧಾರಣೆ ಕಾಯ್ದೆ ತಿದ್ದುಪಡಿಯಿಂದ ದಲಿತರಿಗೆ ಭೂಮಿ ಹಂಚಿಕೆ ಮಾಡಲು ತೊಡಕಾಗಲಿದೆ. ರಾಜ್ಯ ಸರ್ಕಾರ ತಿದ್ದುಪಡಿ ಕಾಯ್ದೆ ಜಾರಿ ಮಾಡಿ ಉಳುವವನನ್ನು ಭೂ ಒಡೆಯನಾಗಿಸಬೇಕೆಂಬ ದಲಿತರ ಕನಸನ್ನು ಮಣ್ಣು ಮಾಡಿದೆ, ಕಪ್ಪು ಹಣವುಳ್ಳ ಹಣವಂತರು ಮತ್ತು ಕಾರ್ಪೊರೇಟ್ ಕಂಪನಿಗಳು ಭೂಮಿ ಕಿತ್ತು ಕೊಳ್ಳುವ ಸುಗ್ರೀವಾಜ್ಞೆ ತಂದು ದಲಿತರನ್ನು ಬೀದಿಪಾಲು ಮಾಡಲಾಗುತ್ತಿದೆ. ದಲಿತರ ಭೂಮಿ ರಕ್ಷಣೆ ಹಕ್ಕನ್ನು ಕಿತ್ತುಕೊಳ್ಳುತ್ತಿದೆ. ಇಂತಹ ದಲಿತ ವಿರೋಧಿ ಭೂ ಸುಧಾರಣೆ ಕಾಯ್ದೆ ಹಿಂತೆಗೆಕೊಳ್ಳಬೇಕೆಂದು ಒತ್ತಾಯಿಸಿದರು.

    ಭೂಮಿ ಇಲ್ಲದ ದಲಿತರಿಗೆ 5 ಎಕರೆ ಭೂಮಿ ಕೊಡಿ. ದಲಿತರ ಮೇಲೆ ದೌರ್ಜನ್ಯ ಮಾಡಿದವರಿಗೆ ಉಗ್ರ ಶಿಕ್ಷೆಯಾಗಲಿ. ದಲಿತ ಮಹಿಳೆಯರ ಮೇಲೆ ಅತ್ಯಾಚಾರ, ಅಂತರ್ಜಾತಿ ವಿವಾಹ ಮರ್ಯಾದೆ ಹತ್ಯಗಳನ್ನು ತಡೆಗಟ್ಟಿ. ನೊಂದ ದಲಿತ ಕುಟುಂಬಗಳಿಗೆ ಸೂಕ್ತ ಪರಿಹಾರ ತಕ್ಷಣ ನೀಡಬೇಕು. ಕೋವಿಡ್-19 ಸಮಯದಲ್ಲಿ ಸಂಕಷ್ಟದಲ್ಲಿರುವ ದಲಿತರಿಗೆ ತಿಂಗಳಿಗೆ 7500ರೂ. ಪರಿಹಾರ ನೀಡಬೇಕು. ನರೇಗಾ ಯೋಜನೆಯಡಿ 200 ದಿನ ಕೆಲಸ, 600 ರೂ. ಕೂಲಿ ನೀಡಬೇಕು ಎಂದು ಆಗ್ರಹಿಸಿದರು. ಮುಖಂಡರಾದ ಸುಂಕಪ್ಪ ಗದಗ, ಹುಲಗಪ್ಪ ಗೋಕಾವಿ, ಹುಸೇನಸಾಬ ನದಾಫ್, ಅಮರವ್ವ ಗದಗ, ಫಕೀರಮ್ಮ ಮಿರಗನತಾಂಡಿ, ಮರಿಯಮ್ಮ ಅಲ್ಲಾನಗರ, ದುರಗಮ್ಮ ಕಂಪಸಾಗರ, ಹುಲಿಗೆಮ್ಮ ಕಂಪಸಾಗರ, ರಾಮಣ್ಣ ದೊಡ್ಡಮನಿ, ದೇವರಾಜ ವದಗನಾಳ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts