More

    ಗಣಕೀಕೃತ ವ್ಯವಸ್ಥೆಯಿಂದ ಭೂ ದಾಖಲೆಗಳು ಸುರಕ್ಷಿತ

    ತೀರ್ಥಹಳ್ಳಿ: ಭೂ ದಾಖಲೆಗಳ ಗಣಕೀಕೃತ ವ್ಯವಸ್ಥೆಯಿಂದ ದಾಖಲೆಗಳ ಸುರಕ್ಷಿತ ರಕ್ಷಣೆಯೊಂದಿಗೆ ತಾಲೂಕು ಕಚೇರಿಗಳಲ್ಲಿ ನಡೆಯುವ ಮಧ್ಯವರ್ತಿಗಳ ಹಾವಳಿಯನ್ನು ನಿಯಂತ್ರಿಸುವಲ್ಲಿ ಸಹಕಾರಿಯಾಗಿದೆ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.
    ತಾಲೂಕು ಕಚೇರಿಯಲ್ಲಿ ಬುಧವಾರ ನಡೆದ ಭೂ ದಾಖಲೆಗಳ ಗಣಕೀಕೃತ ಯೋಜನೆಗೆ ಚಾಲನೆ ನೀಡಿ ಮಾತನಾಡಿ, ರಾಜ್ಯಾದ್ಯಂತ ಉದ್ಘಾಟನೆಗೊಳ್ಳುತ್ತಿರುವ ಈ ಯೋಜನೆ ಜಿಲ್ಲೆಯಲ್ಲಿ ಪ್ರಥಮವಾಗಿ ತೀರ್ಥಹಳ್ಳಿಯಲ್ಲಿ ಪ್ರಾರಂಭವಾಗುತ್ತಿದೆ. ಈ ಅತ್ಯಾಧುನಿಕ ವ್ಯವಸ್ಥೆಯಿಂದ ಭೂ ದಾಖಲೆಗಳ ರಕ್ಷಣೆಗೆ ಪೂರಕವಾಗಿದೆ. ಬಹಳ ಮುಖ್ಯವಾಗಿ ದಾಖಲೆ ನಾಶಪಡಿಸುವ ಮತ್ತು ತಿದ್ದುವ ಯತ್ನಗಳಿಗೆ ಕಡಿವಾÀಣ ಬೀಳುವುದಲ್ಲದೆ ನಕಲಿ ದಾಖಲೆ ಸೃಷ್ಟಿಯನ್ನೂ ತಡೆಯಬಹುದಾಗಿದೆ ಎಂದರು.
    ಮಧ್ಯವರ್ತಿಗಳ ಹಾವಳಿಯಿಂದ ತಾಲೂಕು ಕಚೇರಿ ಘನತೆಗೇ ಮಸಿ ಬಳಿಯುವಂತಾಗಿದೆ. ಈ ಕಚೇರಿಯಲ್ಲಿ ಕೆಲವು ಅಽಕಾರಿಗಳು ಮಧ್ಯವರ್ತಿ ಜತೆ ಸೇರಿ ಮಾಡಿರುವ ದುರಾಚಾರದಿಂದಾಗಿ ಮೂಲ ದಾಖಲೆಗಳೇ ಮಾಯವಾಗಿವೆ. ಮಧ್ಯವರ್ತಿಗಳ ಸಹಕಾರವಿಲ್ಲದೇ ಶ್ರೀಸಾಮಾನ್ಯರ ಕೆಲಸಗಳು ನಡೆಯುವುದಿಲ್ಲ ಎಂಬ ಆರೋಪವೂ ಇದೆ. ಕೆಲವೇ ಜನರಿಂದ ಆಗುವ ಇಂತಹ ಭ್ರಷ್ಟಾಚಾರದಿಂದ ಇಲಾಖೆಗೆ ಕೆಟ್ಟ ಹೆಸರು ಬರುವಂತಾಗಿದೆ ಎಂದೂ ಹೇಳಿದರು.
    -ೆ.೧೦ರಂದು ಬೆಳಗ್ಗೆ ೧೦ ಗಂಟೆಗೆ ಪಟ್ಟಣದ ಗೋಪಾಲಗೌಡ ರಂಗಮAದಿರದಲ್ಲಿ ಗ್ಯಾರಂಟಿ -Àಲಾನುಭವಿಗಳ ಸಮಾವೇಶ ನಡೆಯಲಿದೆ. -É. ೧೪ ರಿಂದ ೧೯ರವರೆಗೆ ಸಂವಿಧಾನದ ಬಗ್ಗೆ ಜನಜಾಗೃತಿ ಮೂಡಿಸಲು ತಾಲೂಕಿನ ಎಲ್ಲ ಗ್ರಾಪಂ ಮಟ್ಟದಲ್ಲಿ ಎರಡು ಸಂವಿಧಾನ ಜಾಗೃತಿ ರಥ ಸಂಚರಿಸುವುದಾಗಿಯೂ ತಿಳಿಸಿದರು. ತಹಸೀಲ್ದಾರ್ ಜಕ್ಕನಗೌಡರ್, ತಾಪಂ ಕಾರ್ಯನಿರ್ವಹಣಾಽಕಾರಿ ಎಂ.ಶೈಲಾ, ಶಿರಸ್ತೆದಾರ್ ಸತ್ಯಮೂರ್ತಿ, ಗ್ರಾಮಲೆಕ್ಕಿಗ ಸುಽÃರ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts