More

    ಪ್ಲಾಸ್ಟಿಕ್ ತ್ಯಜಿಸಿದರೆ ಮಾತ್ರ ಭೂಮಿ ಸುರಕ್ಷಿತ

    ಮಂಗಳೂರು: ದಿನದಿಂದ ದಿನಕ್ಕೆ ಭೂಮಿ ತನ್ನ ಮೂಲತ್ವವನ್ನು ಕಳೆದುಕೊಳ್ಳುತ್ತಿದ್ದು, ಮುಖ್ಯವಾಗಿ ಪ್ಲಾಸ್ಟಿಕ್ ತ್ಯಜಿಸಿದರೆ ಮಾತ್ರ ಭೂಮಿ ಸುರಕ್ಷಿತ ಎಂದು ವಿವಿ ಐಕ್ಯುಏಸಿ ಸಂಯೋಜಕ ಡಾ. ಸಿದ್ದರಾಜು ಎಂ. ಎನ್ ಹೇಳಿದರು

    ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ಐಕ್ಯೂಎಸಿ ಸಹಯೋಗದಲ್ಲಿ ನಡೆದ ವಿಶ್ವ ಭೂದಿನ ಕಾರ್ಯಕ್ರಮದಲ್ಲಿ ಮಾತನಾಡಿದರು.

    ಐಕ್ಯುಏಸಿ ಸಂಯೋಜಕ ಡಾ. ಸಿದ್ದರಾಜು ಎಂ. ಎನ್., ವಿಶ್ವ ಭೂ ದಿನದ ಮಹತ್ವ ಮತ್ತು ಪ್ರಪಂಚದಾದ್ಯಂತ ಆಚರಣೆ ಮಾಡುವ ಅಗತ್ಯತೆ ಇದೆ. 1969ರಲ್ಲಿ ಅಮೆರಿಕಾದಲ್ಲಿ ಕಚ್ಚಾ ತೈಲ ಬಾವಿಯೊಂದರ ಸೋರಿಕೆಯ ಪರಿಣಾಮ ಸುಮಾರು 9000 ಜೀವರಾಶಿಗಳು ಪ್ರಾಣ ತೆರಬೇಕಾಯಿತು. ಅಂದಿನ ಸೆನೆಟರ್ ಜಿ ನೆಲ್ಸನ್ ಪ್ರಾರಂಭ ಮಾಡಿದ ಜನಾಂದೋಲನ ಇಂದು ವಿಶ್ವ ಭೂದಿನವನ್ನಾಗಿ ಆಚರಣೆ ಮಾಡಲಾಗುತ್ತಿದೆ ಎಂದರು.

    ವಿಶ್ವ ಭೂ ದಿನದ ಅಂಗವಾಗಿ ಕಾಲೇಜಿನಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ವಿದ್ಯಾರ್ಥಿನಿ ಸುನಿತಾ, ಸ್ವಾತಿ ಮತ್ತು ತಂಡದವರು ರಸಪ್ರಶ್ನೆ ಕಾರ್ಯಕ್ರಮದ ಮೂಲಕ ಭೂ ದಿನಕ್ಕೆ ಸಂಬಂಧಿಸಿದಂತೆ ಅನೇಕ ಕೌತಕ ವಿಷಯಗಳನ್ನು ತಿಳಿಸಿಕೊಟ್ಟರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts