More

    ಸಾಗುವಳಿ ಮಂಜೂರಾತಿಗೆ ತಾಲೂಕು ಆಡಳಿತ ವಿಫಲ ; ಮಾಜಿ ಶಾಸಕ ಜಿ.ವಿ.ಶ್ರೀರಾಮರೆಡ್ಡಿ ಆರೋಪ

    ಬಾಗೇಪಲ್ಲಿ : ಭೂ ಮಂಜೂರಾತಿ ಸಮಿತಿ ಸ್ಥಾಪಿಸಿ ಬಡವರಿಗೆ ಭೂಮಿ ಹಂಚಿಕೆ ಮಾಡುವಲ್ಲಿ ಬಾಗೇಪಲ್ಲಿ ಶಾಸಕರು ಸಂಪೂರ್ಣ ವಿಫಲರಾಗಿದ್ದಾರೆ, ಬಗುರ್‌ಹುಕುಂ ಸಾಗುವಳಿ ಚೀಟಿಗಾಗಿ ರೈತರಿಂದ ಸಲ್ಲಿಕೆಯಾದ 10 ಸಾವಿರ ಅರ್ಜಿಗಳು ತಹಸೀಲ್ದಾರ್ ಕಚೇರಿಯಲ್ಲಿ ಧೂಳು ಹಿಡಿಯುತ್ತಿವೆ ಎಂದು ಪಿಎಸ್‌ಎಸ್ ಜಿಲ್ಲಾ ಸಂಚಾಲಕ, ಮಾಜಿ ಶಾಸಕ ಜಿ.ವಿ.ಶ್ರೀರಾಮರೆಡ್ಡಿ ಆರೋಪಿಸಿದರು.

    ಬಗರ್‌ಹುಕುಂ ಸಾಗುವಳಿ ಮಂಜೂರಾತಿಗೆ ಆಗ್ರಹಿಸಿ ಆ.2ರಂದು ಪ್ರಜಾ ಸಂಘರ್ಷ ಸಮಿತಿ ತಾಲೂಕು ಸಮಿತಿ ಹಮ್ಮಿಕೊಂಡಿರುವ ಬೃಹತ್ ಪ್ರತಿಭಟನೆಯ ಪ್ರಚಾರಕ್ಕೆ ಗುರುವಾರ ಪಟ್ಟಣದ ಡಿವಿಜಿ ಮುಖ್ಯರಸ್ತೆಯಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿ ಎದುರು ಚಾಲನೆ ನೀಡಿ ಮಾತನಾಡಿದರು.

    ತಾಲೂಕು ವ್ಯಾಪ್ತಿಯ ಸರ್ಕಾರಿ ಕಚೇರಿಗಳಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ. ಕೆಲಸಗಳು ಸಕಾಲಕ್ಕೆ ಆಗದೆ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. 7 ವರ್ಷಗಳಿಂದ ಜನಪ್ರತಿನಿಧಿಗಳು ಹಾಗೂ ಜಿಲ್ಲಾ ಮತ್ತು ತಾಲೂಕುಮಟ್ಟದ ಅಧಿಕಾರಿಗಳು ತಾಲೂಕಿನಲ್ಲಿ ಭೂ ಮಂಜೂರಾತಿ ಸಮಿತಿ ರಚಿಸದ ಹಿನ್ನೆಲೆಯಲ್ಲಿ ಭೂ ಹಂಚಿಕೆ ಸಾಧ್ಯವಾಗಿಲ್ಲ ಎಂದು ದೂರಿದರು.

    2018-19ರಿಂದ 2020-21ನೇ ಸಾಲಿನ ಅವಧಿಯಲ್ಲಿ ವಿವಿಧ ವಸತಿ ಯೋಜನೆಗಳ ಲಾನುಭವಿಗಳಿಗೆ ಮನೆಗಳು ಮಂಜೂರಾಗಿದ್ದು, ಮನೆಗಳ ನಿರ್ಮಾಣ ಪೂರ್ಣಗೊಂಡು ಮೂರು ವರ್ಷಗಳಾದರೂ ಬಿಲ್ ಪಾವತಿ ಆಗಿಲ್ಲ. ಹೊಸ ಮನೆಗಳಿಗೆ ಮಂಜೂರಾತಿ ಇಲ್ಲದ ಕಾರಣ ಲಾನುಭವಿಗಳು ಬೀದಿಗೆ ಬಿದ್ದಿದ್ದು, ಜನರ ಸಮಸ್ಯೆಗಳ ಪರಿಹಾರಕ್ಕಾಗಿ ಪ್ರಜಾ ಸಂಘರ್ಷ ಸಮಿತಿ ಹೋರಾಟಕ್ಕೆ ಮುಂದಾಗಿದೆ ಎಂದರು.

    ಮುಖಂಡರಾದ ಜಿ.ಎಂ.ರಾಮಕೃಷ್ಣಪ್ಪ, ಎಲ್.ಆರ್.ಚಂದ್ರಶೇಖರರೆಡ್ಡಿ, ಎಲ್.ವೆಂಕಟೇಶ್, ನಾರಾಯಣಸ್ವಾಮಿ, ಸಿ.ಕೆ.ನರಸಿಂಹಪ್ಪ, ಪ್ರಮೀಳಮ್ಮ, ರಾಮಾಂಜಿನಪ್ಪ, ಪೆದ್ದಮುನಿಯಪ್ಪ, ಬೈರಾರೆಡ್ಡಿ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts