More

    ‘ಸೆರೆಮನೆ’ಯಿಂದಲೇ ರಾಜಕೀಯ- ಎನ್​ಡಿಎ ಶಾಸಕರಿಗೆ ಲಾಲು ‘ಬಲೆ’ !

    ಪಟನಾ: ಮೇವು ಹಗರಣದ ಅಪರಾಧಿ ಮಾಜಿ ಸಚಿವ ಲಾಲು ಪ್ರಸಾದ್ ಯಾದವ್ ಸೆರೆಮನೆಯಲ್ಲಿದ್ದುಕೊಂಡೇ ರಾಜ್ಯದ ಅಧಿಕಾರ ಚುಕ್ಕಾಣಿ ಹಿಡಿಯುವ ಪ್ರಯತ್ನ ನಡೆಸಿದ್ದಾರೆ. ಹೀಗೊಂದು ಗಂಭೀರ ಹಾಗೂ ನೇರ ಆರೋಪವನ್ನು ಮಾಜಿ ಡಿಸಿಎಂ ಸುಶೀಲ್ ಕುಮಾರ್ ಮೋದಿ ಮಾಡಿದ್ದಾರೆ.

    ಟ್ವೀಟ್​ನಲ್ಲಿ ಅವರು ಹೇಳಿರುವುದಿಷ್ಟು

    ಲಾಲು ಯಾದವ್ ರಾಂಚಿಯಿಂದ ಎನ್​ಡಿಎ ಶಾಸಕರಿಗೆ ಫೋನ್ (8051216302) ಕರೆ ಮಾಡುತ್ತಿದ್ದಾರೆ. ಅವರಿಗೆ ಸಚಿವ ಸ್ಥಾನದ ಆಮಿಷವನ್ನು ಒಡ್ಡುತ್ತಿದ್ದಾರೆ. ಯಾವಾಗ ನಾನು ಇದೇ ನಂಬರಿಗೆ ಕರೆಮಾಡಿದೆನೋ ಆಗ ಖುದ್ದು ಲಾಲು ಅವರೇ ಫೋನ್ ರಿಸೀವ್ ಮಾಡಿದರು. ಜೈಲಿನಲ್ಲಿದ್ದುಕೊಂಡು ಇಂಥ ಕೊಳಕು ರಾಜಕೀಯ ಮಾಡಬೇಡಿ. ಯಶಸ್ವಿಯಾಗಲ್ಲ ಎಂದು ನಾನವರಿಗೆ ಹೇಳಿದೆ – ಸುಶೀಲ್ ಮೋದಿ 

    ಮೇವು ಹಗರಣದಲ್ಲಿ ಸೆರೆವಾಸ ಅನುಭವಿಸುತ್ತಿರುವ ಆರ್​ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಸದ್ಯ ರಾಂಚಿಯಲ್ಲಿ ರಿಮ್ಸ್ ಹಾಸ್ಪಿಟಲ್​ನಲ್ಲಿದ್ದಾರೆ. ಹೋಟ್ವಾರ್ ಸೆಂಟ್ರಲ್ ಜೈಲಿನಲ್ಲಿದ್ದ ಲಾಲು, ಅನಾರೋಗ್ಯದ ಕಾರಣ ನೀಡಿ ರಾಂಚಿಯ ಆಸ್ಪತ್ರೆಗೆ ಸ್ಥಳಾಂತರವಾಗಿದ್ದರು. ಈಗ್ಗೆ ಕೆಲವು ದಿನಗಳ ಹಿಂದೆ ಲಾಲು ರಿಮ್ಸ್ ನಿರ್ದೇಶಕರ ಬಂಗಲೆಯಲ್ಲಿ ಐಷಾರಾಮಿ ಜೀವನ ನಡೆಸುತ್ತಿರುವ ದೃಶ್ಯಗಳು ವೈರಲ್ ಆಗಿದ್ದವು. ಸೆರೆವಾಸದಲ್ಲಿದ್ದರೂ ವಿಐಪಿ ಆತಿಥ್ಯ ಸಿಗುತ್ತಿದೆ ಎಂಬ ಆರೋಪವೂ ಕೇಳಿಬಂದಿತ್ತು.

    ಇದನ್ನೂ ಓದಿ: ನಿತೀಶ್​ಕುಮಾರ್​ಗೆ ಮತ್ತೆ ಒಲಿದ ಬಿಹಾರ ಸಿಎಂ ಗಾದಿ

    ಈಗ ಅದಕ್ಕೆ ಪೂರಕವಾಗಿ ಲಾಲು ಪ್ರಸಾದ್ ವ್ಯವಸ್ಥೆಯೊಳಗಿನ ಭ್ರಷ್ಟತನವನ್ನು ಬಳಸಿಕೊಂಡು ಮತ್ತೆ ಅಧಿಕಾರ ಚುಕ್ಕಾಣಿ ಹಿಡಿಯಲು ಪ್ರಯತ್ನಿಸಿರುವುದು ಬೆಳಕಿಗೆ ಬಂದಿದೆ. ಮಾಜಿ ಡಿಸಿಎಂ ಸುಶೀಲ್ ಕುಮಾರ್ ಮೋದಿ ಈ ವಿಷಯವನ್ನು ಟ್ವೀಟ್ ಮಾಡಿದ್ದು, ಅವರ ಜತೆಗೆ ಮಾತನಾಡಿದ ಫೋನ್ ನಂಬರ್ ಕೂಡ ಬಹಿರಂಗಪಡಿಸಿ ಸಂಚಲನ ಮೂಡಿಸಿದ್ದಾರೆ.

    ಪ್ರಭಾವಿ ಕಾಂಗ್ರೆಸ್ ನಾಯಕ ಅಹ್ಮದ್ ಪಟೇಲ್ ಇನ್ನಿಲ್ಲ: ಗಣ್ಯರ ಸಂತಾಪ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts