More

    ಮಗಳಿಂದ ಲಾಲು ಕಿಡ್ನಿ ಪಡೆದು ಲಂಚವಾಗಿ ಟಿಕೆಟ್​ ನೀಡಿದ್ದಾರೆ: ಬಿಹಾರ ಡಿಸಿಎಂ ಲೇವಡಿ

    ಪಟ್ನಾ: ಲೋಕಸಭೆ ಚುನಾವಣೆಯ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಚುನಾವಣಾ ದಿನಾಂಕ ಘೋಷಣೆಯಾದ ಬೆನ್ನಲ್ಲೇ ರಾಜಕೀಯ ಪಕ್ಷಗಳು ಭರ್ಜರಿ ತಯಾರಿ ಆರಂಭಿಸಿವೆ.ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಕುಟುಂಬ ರಾಜಕಾರಣ ಹೆಚ್ಚು ಸದ್ದು ಮಾಡುತ್ತಿದ್ದು, ಅದಕ್ಕೆ ಪೂರವೆಂಬಂತೆ ಬಿಹಾರ ಮಾಜಿ ಮುಖ್ಯಮಂತ್ರಿ ಲಾಲೂ ಪ್ರಸಾದ್​ ಯಾದವ್​ ಅವರ ಪುತ್ರಿ ರೋಹಿಣಿ ಚುನಾವಣಾ ರಾಜಕೀಯಕ್ಕೆ ಪ್ರವೇಶಿಸಲಿದ್ದಾರೆ ಎಂದು ಹೇಳಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಬಿಹಾರದ ಡಿಸಿಎಂ ಸಾಮ್ರಾಟ್​ ಚೌಧರಿ ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದು, ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ.

    ಪಟ್ನಾದಲ್ಲಿ ಈ ಕುರಿತು ಮಾತನಾಡಿದ ಚೌಧರಿ, ಲಾಲು ಪ್ರಸಾದ್​ ಯಾದವ್​ ಅವರು ಚುನಾವಣೆ ಸಂದರ್ಭದಲ್ಲಿ ಟಿಕೆಟ್​ಗಳನ್ನು ಮಾರಾಟ ಮಾಡುವ ನಿಪುಣ ರಾಜಕಾರಣಿ ಎಂದು ಹೇಳಬಹುದಾಗಿದೆ. ಇದಕ್ಕೆ ಪೂರಕವೆಂಬಂತೆ ಅವರು ತಮ್ಮ ಸ್ವಂತ ಮಗಳಿಂದ ಕಿಡ್ನಿ ಪಡೆದು ಆಕೆಗೆ ಸರನ್​ ಲೋಕಸಭೆ ಕ್ಷೇತ್ರದ ಕೊಟ್ಟಿದ್ದಾರೆ ಎಂದು ಹೇಳುವ ಮೂಲಕ ವಿವಾದದ ಕಿಡಿ ಹೊತ್ತಿಸಿದ್ದಾರೆ.

    ಇದನ್ನೂ ಓದಿ: ನೀನು ಟಿವಿಯಲ್ಲಿ ಬರ್ತಿದ್ದಿಯಾ…; ಸೋನು ಗೌಡ ಕೊಟ್ಟ ರಿಪ್ಲೈಗೆ ದಂಗಾದ ಪೊಲೀಸರು

    ಇತ್ತ ಸಾಮ್ರಾಟ್​ ಚೌಧರಿ ಹೇಳಿಕೆಗೆ ರಾಜಕೀಯ ವಲಯದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗುತ್ತಿದ್ದು, ಈ ರೀತಿಯ ಹೇಳಿಕೆಗಳನ್ನು ನೀಡುವ ಮೂಲಕ ನೀವು ಕುಶ್ವಾಹ ಸಮಾಜದ ಮರ್ಯಾದೆಯನ್ನು ತೆಗೆಯುತ್ತಿದ್ದೀರಾ. ನಮ್ಮ ಸಮಾಜವು ಎಂದಿಗೂ ಇಂತಹ ಅಗ್ಗದ ಹೇಳಿಕೆಗಳ ಪರವಾಗಿಲ್ಲ ಅಥವಾ ಅಂತಹ ಭಾಷೆಯನ್ನು ಬೆಂಬಲಿಸುವುದಿಲ್ಲ ಎಂದು ಹಿರಿಯ ಮುಖಂಡರೊಬ್ಬರು ಹೇಳಿದ್ದಾರೆ.

    ಸಿಂಗಾಪುರದಲ್ಲಿ ನೆಲೆಸಿರುವ ಲಾಲು ಪ್ರಸಾದ್ ಯಾದವ್ ಪುತ್ರಿ ಡಾ. ರೋಹಿಣಿ ಆಚಾರ್ಯ ಬಿಹಾರದ ಸರನ್​ ಲೋಕಸಬೆ ಕ್ಷೇತ್ರದಿಂದ ಕಣಕ್ಕಿಳಿಯುತ್ತಾರೆ ಎಂದು ತಿಳಿದು ಬಂದಿದೆ. ಒಂದು ವೇಳೆ ರೋಹಿಣಿ ಸರನ್​ ಲೋಕಸಭೆ ಕ್ಷೇತ್ರದಿಂದ ಕಣಕ್ಕಿಳಿದರೆ ಲಾಲು ಕುಟುಂಬದ ನಾಲ್ಕನೇ ಕುಡಿ ರಾಜಕೀಯ ಪ್ರವೇಶಿಸಿದಂತಾಗುತ್ತದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts