More

    ಧರ್ಮಸ್ಥಳ ಲಕ್ಷದೀಪೋತ್ಸವ ಸಂಪನ್ನ

    ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಸೋಮವಾರ ರಾತ್ರಿ ಭಗವಾನ್ ಶ್ರೀ ಮಂಜುನಾಥ ಸ್ವಾಮಿಯ ಲಕ್ಷದೀಪೋತ್ಸವ ಸಂಪನ್ನಗೊಂಡಿತು. ನಾಡಿನೆಲ್ಲೆಡೆಯಿಂದ ಆಗಮಿಸಿದ ಭಕ್ತರು ಉತ್ಸವವನ್ನು ವೀಕ್ಷಿಸಿ ಧನ್ಯತೆ ಹೊಂದಿದರು. ಶಂಖ, ಜಾಗಟೆ, ಕೊಂಬು, ಕಹಳೆ, ವೀರಗಾಸೆ ಮೊದಲಾದ ಜಾನಪದ ಕಲಾವಿದರು ಕಲಾಸೇವೆ ಅರ್ಪಿಸಿದರು. ಬೆಂಗಳೂರಿನ ಭಕ್ತರು ಸ್ವಯಂಸೇವಕರಾಗಿ ರಾತ್ರಿ ಅನ್ನದಾನದ ವ್ಯವಸ್ಥೆ ಮಾಡಿದರು. ಕರೊನಾ ನಿಯಮಗಳನ್ನು ಎಲ್ಲ ಕಡೆ ಕಟ್ಟುನಿಟ್ಟಾಗಿ ಪಾಲಿಸಲಾಗಿತ್ತು. ಎಲ್ಲ ಕಾರ್ಯಕ್ರಮಗಳನ್ನು ಸರಳವಾಗಿ ಆಯೋಜಿಸಿದ್ದು, ಸೀಮಿತ ಸಂಖ್ಯೆಯಲ್ಲಿ ಜನರು ಭಾಗವಹಿಸಿದ್ದರು. ಲಕ್ಷಾಂತರ ಮಂದಿ ಮನೆಯಲ್ಲೇ ಕುಳಿತು ಯುಟ್ಯೂಬ್ ಮತ್ತು ಫೇಸ್‌ಬುಕ್‌ನಲ್ಲಿ ಎಲ್ಲ ಕಾರ್ಯಕ್ರಮ ವೀಕ್ಷಿಸಿದರು.

    ಭಗವಾನ್ ಶ್ರೀ ಚಂದ್ರನಾಥ ಸ್ವಾಮಿ ಸಮವಸರಣ ಪೂಜೆ: ಮಂಗಳವಾರ ಸಂಜೆಯಿಂದ ಶ್ರೀ ಚಂದ್ರನಾಥ ಸ್ವಾಮಿ ಬಸದಿಯಲ್ಲಿ ಸಮವಸರಣ ಪೂಜಾ ಕಾರ್ಯಕ್ರಮ ನಡೆಯಿತು. ಊರ ಪರವೂರ ಶ್ರಾವಕ-ಶ್ರಾವಕಿಯರು ವೀಕ್ಷಿಸಿ ಪುಣ್ಯ ಸಂಚಯ ಮಾಡಿಕೊಂಡರು. ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತ್ತು ಕುಟುಂಬಸ್ಥರ ಮಾರ್ಗದರ್ಶನದಲ್ಲಿ ಭಗವಾನ್ ಶ್ರೀ ಚಂದ್ರನಾಥ ಸ್ವಾಮಿಯ ಸಮವಸರಣ ಪೂಜೆಯೊಂದಿಗೆ ಸ್ವಾಮಿಗೆ ಪಂಚ ನಮಸ್ಕಾರ ಮಂತ್ರ ಪಠಣ, ಅಷ್ಟವಿಧಾರ್ಚನೆ ಪೂಜೆ, ಸಂಗೀತ ಪೂಜೆ ಇತ್ಯಾದಿ ಧಾರ್ಮಿಕ ವಿಧಿವಿಧಾನಗಳು ನೆರವೇರಿದವು. ಎಸ್‌ಡಿಎಂ ತಂಡದವರಿಂದ ಜಿನ ಭಜನೆ ಪ್ರಸ್ತುತಗೊಂಡಿತು. ಸ್ಥಳೀಯ ಶ್ರಾವಕ-ಶ್ರಾವಿಕೆಯರಿಂದ ಭಜನೆ, ಸ್ತೋತ್ರ, ಪೂಜಾ ಮಂತ್ರ ಪಠಣ, ಅಷ್ಟವಿಧಾರ್ಚನೆ ಪೂಜೆ ನೆರವೇರಿತು.

    ಹೇಮಾವತಿ ವಿ.ಹೆಗ್ಗಡೆ, ಡಿ.ಸುರೇಂದ್ರ ಕುಮಾರ್, ಡಿ.ಹರ್ಷೇಂದ್ರ ಕುಮಾರ್, ಅನಿತಾ ಸುರೇಂದ್ರ ಕುಮಾರ್, ಸುಪ್ರಿಯಾ ಹರ್ಷೇಂದ್ರ ಕುಮಾರ್, ಅಮಿತ್ ಬೆಂಗಳೂರು, ಶ್ರದ್ಧಾ ಅಮಿತ್, ಡಿ.ಶ್ರೇಯಸ್ ಕುಮಾರ್, ಡಿ.ನಿಶ್ಚಲ್ ಕುಮಾರ್, ಡಾ.ಬಿ.ಯಶೋವರ್ಮ, ಸೋನಿಯಾ ವರ್ಮ ಮೊದಲಾದವರು ಪೂಜೆಯಲ್ಲಿ ಭಾಗವಹಿಸಿದರು. ಸ್ಥಳೀಯ ಬಾಹುಬಲಿ ಸೇವಾ ಸಮಿತಿಯ ಶ್ರಾವಕ- ಶ್ರಾವಕಿಯರು ಸಹಕರಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts