More

    ಜಿಲ್ಲೆಯ ಅತಿದೊಡ್ಡ ಪಂಚಾಯಿತಿ ಲಕ್ಕುಂಡಿ

    ಗದಗ: ಜಿಲ್ಲೆಯ 117 ಗ್ರಾಪಂಗಳ 602 ಕ್ಷೇತ್ರಗಳಿಗೆ 1696 ಸದಸ್ಯರ ಆಯ್ಕೆಗೆ ಎರಡು ಹಂತದಲ್ಲಿ ಚುನಾವಣೆ ಘೊಷಣೆಯಾಗಿದೆ. ಮೊದಲ ಹಂತದಲ್ಲಿ (ಡಿ. 22) ಗದಗ, ಶಿರಹಟ್ಟಿ, ಲಕ್ಷೆ್ಮೕಶ್ವರ ತಾಲೂಕುಗಳಲ್ಲಿ ಹಾಗೂ ಮುಂಡರಗಿ, ರೋಣ, ನರಗುಂದ, ಗಜೇಂದ್ರಗಡ ತಾಲೂಕುಗಳಲ್ಲಿ ಎರಡನೇ ಹಂತದಲ್ಲಿ (ಡಿ. 27) ಚುನಾವಣೆ ನಡೆಯಲಿದೆ.

    ಜಿಲ್ಲೆಯ 7 ತಾಲೂಕುಗಳಲ್ಲಿ 122 ಗ್ರಾಪಂಗಳು ಅಸ್ತಿತ್ವದಲ್ಲಿದ್ದು, ಲಕ್ಷೆ್ಮೕಶ್ವರ ತಾಲೂಕಿನ ಬಟ್ಟೂರು, ಗದಗ ತಾಲೂಕಿನ ಹರ್ಲಾಪೂರ, ಗಜೇಂದ್ರಗಡ ತಾಲೂಕಿನ ಶಾಂತಗೇರಿ ಹಾಗೂ ಕುಂಟೋಜಿ ಹಾಗೂ ಮುಂಡರಗಿ ತಾಲೂಕಿನ ಮುರಡಿ ಸೇರಿ ಒಟ್ಟು 5 ಗ್ರಾಮ ಪಂಚಾಯಿತಿಗಳ ಸದಸ್ಯರ ಅಧಿಕಾರವಧಿ 2021ಕ್ಕೆ ಪೂರ್ಣಗೊಳ್ಳಲಿದ್ದು, ಹೀಗಾಗಿ ಈ ಐದು ಗ್ರಾಪಂ ಹೊರತು ಪಡಿಸಿ ಉಳಿದ ಎಲ್ಲಾ ಗ್ರಾಮ ಪಂಚಾಯಿತಿಗಳಿಗೆ ಚುನಾವಣೆ ನಡೆಯಲಿದೆ.

    ಗದಗ ತಾಲೂಕಿನ ಲಕ್ಕುಂಡಿ ಅತಿ ದೊಡ್ಡ ಗ್ರಾಮ ಪಂಚಾಯಿತಿ ಎನಿಸಿದ್ದು, 30 ಸದಸ್ಯ ಬಲವನ್ನು ಹೊಂದಿದೆ. ಮುಂಡರಗಿ ತಾಲೂಕಿನ ಡಂಬಳ ಗ್ರಾಪಂ 29, ಗದಗ ತಾಲೂಕಿನ ಹುಲಕೋಟಿ ಗ್ರಾಪಂ 28, ಲಕ್ಷೆ್ಮೕಶ್ವರ ತಾಲೂಕಿನ ಶಿಗ್ಲಿ ಗ್ರಾಪಂ 28, ಗದಗ ತಾಲೂಕಿನ ಕುರ್ತಕೋಟಿ ಗ್ರಾಪಂ 27, ನರಗುಂದ ತಾಲೂಕಿನ ಕೊಣ್ಣೂರ ಗ್ರಾಪಂ 25, ಶಿರೋಳ ಗ್ರಾಪಂ 23, ಗದಗ ತಾಲೂಕಿನ ಚಿಂಚಲಿ 22, ರೋಣ ತಾಲೂಕಿನ ಅಬ್ಬಿಗೇರಿ ಗ್ರಾಪಂ 22, ಗದಗ ತಾಲೂಕಿನ ಹೊಂಬಳ, ಸೊರಟೂರ, ಶಿರಹಟ್ಟಿ ತಾಲೂಕಿನ ಬೆಳ್ಳಟ್ಟಿ, ಮುಂಡರಗಿ ತಾಲೂಕಿನ ಮೇವುಂಡಿ, ಗಜೇಂದ್ರಗಡ ತಾಲೂಕಿನ ರಾಜೂರ ಮತ್ತು ರೋಣ ತಾಲೂಕಿನ ಹೊಳೆಆಲೂರ ಗ್ರಾಮ ಪಂಚಾಯಿತಿ ತಲಾ 21 ಸದಸ್ಯರ ಬಲವನ್ನು ಹೊಂದಿವೆ.

    ಗದಗ ತಾಲೂಕಿನ ತಿಮ್ಮಾಪೂರ, ಲಿಂಗಧಾಳ, ಲಕ್ಷೆ್ಮೕಶ್ವರ ತಾಲೂಕಿನ ಗೋವನಾಳ, ನರಗುಂದ ತಾಲೂಕಿನ ರೆಡ್ಡೇರ ನಾಗನೂರ, ವಾಸನ, ಸುರಕೋಡ ಗ್ರಾಮ ಪಂಚಾಯಿತಿಗಳು ಅತಿ ಚಿಕ್ಕ ಗ್ರಾಮ ಪಂಚಾಯಿತಿಗಳಾಗಿದ್ದು, ತಲಾ 8 ಸದಸ್ಯರ ಬಲವನ್ನು ಹೊಂದಿವೆ. ನಂತರ ಲಕ್ಷೆ್ಮೕಶ್ವರ ತಾಲೂಕಿನ ಹುಲ್ಲೂರ, ಪುಟಗಾಂವ ಬಡ್ನಿ, ರೋಣ ತಾಲೂಕಿನ ಡಸ ಹಡಗಲಿ, ಹುನಗುಂದ ಮತ್ತು ನರಗುಂದ ತಾಲೂಕಿನ ಭೈರನಹಟ್ಟಿ ಗ್ರಾ.ಪಂ.ಗಳು ತಲಾ 9 ಸದಸ್ಯ ಸ್ಥಾನ ಹೊಂದಿವೆ. ಜಿಲ್ಲೆಯಲ್ಲಿ ಬಹುತೇಕ ಗ್ರಾಪಂಗಳು 10ರಿಂದ 14 ಸ್ಥಾನಗಳನ್ನು ಹೊಂದಿವೆ. ಕೆಲವು ಗ್ರಾಪಂಗಳು ಒಂದೇ ಗ್ರಾಮ ಹೊಂದಿದ್ದರೆ, ಕೆಲ ಗ್ರಾಪಂಗಳು ಎರಡರಿಂದ ಮೂರು ಗ್ರಾಮಗಳನ್ನೊಳಗೊಂಡಿವೆ.

    2 ಹಂತದ ಚುನಾವಣೆ: ಮೊದಲನೇ ಹಂತದಲ್ಲಿ ಗದಗ ತಾಲೂಕಿನಲ್ಲಿ ಒಟ್ಟು 26 ಗ್ರಾಮ ಪಂಚಾಯಿತಿಗಳ 146 ಕ್ಷೇತ್ರಗಳು, ಲಕ್ಷೆ್ಮೕಶ್ವರ ತಾಲೂಕಿನಲ್ಲಿ 13 ಗ್ರಾಪಂಗಳ ಪೈಕಿ 61 ಕ್ಷೇತ್ರಗಳು, ಶಿರಹಟ್ಟಿ ತಾಲೂಕಿನ 14 ಗ್ರಾ.ಪಂ.ಗಳ 75 ಕ್ಷೇತ್ರಗಳು ಸೇರಿ ಒಟ್ಟು 53 ಗ್ರಾಪಂಗಳಲ್ಲಿ 282 ಕ್ಷೇತ್ರಗಳಿಗೆ ಚುನಾವಣೆ ನಡೆಯಲಿವೆ. ಎರಡನೇ ಹಂತದಲ್ಲಿ ಮುಂಡರಗಿ ತಾಲೂಕಿನ 18 ಗ್ರಾಪಂಗಳ 95 ಕ್ಷೇತ್ರಗಳು, ರೋಣ ತಾಲೂಕಿನ 24 ಗ್ರಾಪಂಗಳ 120 ಕ್ಷೇತ್ರಗಳು, ಗಜೇಂದ್ರಗಡ ತಾಲೂಕಿನ 9 ಗ್ರಾಮ ಪಂಚಾಯಿತಿಗಳ 49 ಕ್ಷೇತ್ರಗಳು ಹಾಗೂ ನರಗುಂದ ತಾಲೂಕಿನ 13 ಗ್ರಾಪಂಗಳ 56 ಕ್ಷೇತ್ರಗಳು ಸೇರಿ ಒಟ್ಟು 64 ಗ್ರಾಪಂಗಳ 320 ಕ್ಷೇತ್ರಗಳಿಗೆ ಚುನಾವಣೆ ನಡೆಯಲಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts