More

    ಇದು ಮಾನವೀಯ ‘ಮೌಲ್ಯ’ : ಅಂಧ ವ್ಯಕ್ತಿಗೆ ಬಸ್ ಹತ್ತಲು ಸಹಾಯ ಮಾಡಿದಾಕೆಗೆ ಸಿಕ್ಕಿದ್ದು ಅನೂಹ್ಯ ಪ್ರತಿಫಲ

    ವ್ಯಕ್ತಿಯೊಬ್ಬನ ಗುಣ-ದುರ್ಗಣಗಳೇ ಆತನ ಬಾಳಿನ ಏರಿಳಿತಕ್ಕೆ ಕಾರಣವಾಗುತ್ತವೆ ಎಂಬ ಮಾತೊಂದಿದೆ. ನಮ್ಮ ಬದುಕಿನಲ್ಲಿ ನಾವು ಏನು ಮಾಡುತ್ತೇವೆಯೋ ಆ ಕರ್ಮದ ಪ್ರತಿಫಲವನ್ನೇ ನಾವು ಪಡೆಯುತ್ತೇವೆ ಎಂಬುದಕ್ಕೆ ಇಲ್ಲೊಂದು ಉದಾಹರಣೆ ಇದೆ ನೋಡಿ.
    ಇಲ್ಲೊಬ್ಬ ಅಂಧ ವ್ಯಕ್ತಿಗೆ ಬಸ್ ಹತ್ತಲು ಸಹಾಯ ಮಾಡಿದ ಕೇರಳದ ಮಹಿಳೆಗೆ ಅಂತರ್ಜಾಲದ ತುಂಬ ಪ್ರಶಂಸೆಯ ಸುರಿಮಳೆಯೇ ಹರಿದುಬಂದಿದೆ. ಅಷ್ಟೇ ಅಲ್ಲ ಮತ್ತೊಂದು ಅಚ್ಚರಿ ಕೂಡ ಇದೆ.

    ಒಬ್ಬ ಮಹಿಳೆ ಚಲಿಸುತ್ತಿದ್ದ ಬಸ್ ಕಡೆಗೆ ಓಡಿಹೋಗಿ ಅದನ್ನು ನಿಲ್ಲಿಸುವಂತೆ ಚಾಲಕನಿಗೆ ತಿಳಿಸಿ. ನಂತರ ಆ ಅಂಧ ವ್ಯಕ್ತಿ ಬಳಿ ಬಂದು ಬಸ್ ಹತ್ತಲು ಸಹಾಯಮಾಡಿದ್ದಾರೆ.
    ಜುಲೈ 8 ರಂದು ವಿಜಯ ಕುಮಾರ್ ಎಂಬ ಪೊಲೀಸ್ ಅಧಿಕಾರಿಯು ಈ ವಿಡಿಯೋವನ್ನು ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
    ಈ ಹೃದಯಸ್ಪರ್ಶಿ ವೀಡಿಯೊವನ್ನು ನೆಟ್ಟಿಗರು ವ್ಯಾಪಕವಾಗಿ ಹಂಚಿಕೊಂಡಿದ್ದಾರೆ. ಶೀಘ್ರ ವೈರಲ್‌ ಆಗಿದೆ. ಇದನ್ನು ಅಂದಾಜು 1.9 ಮಿಲಿಯನ್ ಬಾರಿ ವೀಕ್ಷಿಸಲಾಗಿದೆ.
    ಇಂದಿನ ಯಾಂತ್ರಿಕ ಯುಗದಲ್ಲಿ ದಯೆ ಮತ್ತು ಸಹಾನುಭೂತಿ ಬಹಳ ಮನುಷ್ಯರಿಂದ ಬಹುದೂರವೇ ಹೋಗುತ್ತಿದೆ ಎಂಬ ಮಾತು ಆಗಾಗ ಕೇಳಿಬರುತ್ತದೆ. ಆದರೆ ಮಾನವೀಯ ಗುಣಗಳು ಎಲ್ಲೆಡೆ ಪ್ರಶಂಸೆಗೆ ಪಾತ್ರವಾಗುತ್ತವೆ. ಇಲ್ಲಿಯೂ ಹಾಗೆಯೇ ಆಗಿದೆ. ಪ್ರಸಿದ್ಧ ‘ಜಾಯಲ್ಲುಕಾಸ್’ನ ಅಧ್ಯಕ್ಷ ಆ ಮಹಿಳೆಯನ್ನು ತಮ್ಮ ಮನೆಗೆ ಆಹ್ವಾನಿಸಿ ಅವರಿಗೆ ಮನೆಯೊಂದನ್ನು ಬಹುಮಾನವಾಗಿ ನೀಡಿದ್ದಾರೆ.

    ಇದನ್ನು ಓದಿ:  ರಕ್ತನೂ ಕೊಟ್ಟು, ಚಿಕಿತ್ಸೆಯನ್ನೂ ಮಾಡಿ ಜೀವ ಉಳಿಸಿದ ವೈದ್ಯ

    ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರ ಮಾಧ್ಯಮ ಸಲಹೆಗಾರ ಅಮರ್ ಪ್ರಸಾದ್ ರೆಡ್ಡಿ ಟ್ವೀಟರ್​​​ನಲ್ಲಿ ಈ ವಿಷಯ ತಿಳಿಸಿದ್ದಾರೆ.
    ಆ ಪೋಸ್ಟ್​​ ಜತೆಗೆ ಅವರು “ಕೆಲವು ದಿನಗಳ ಹಿಂದೆ ಅಂಧವ್ಯಕ್ತಿಯೊಬ್ಬರಿಗೆ ಬಸ್ ಹತ್ತಲು ಸಹಾಯ ಮಾಡಿದ ಮಹಿಳೆಯನ್ನು ಜಾಯಲ್ಲುಕಾಸ್ ಅಧ್ಯಕ್ಷರು ಮನೆಗೆ ಆಹ್ವಾನಿಸಿದ್ದು, ಮತ್ತು ಅವರಿಗೆ ವಸತಿ ಮನೆ ಉಡುಗೊರೆಯಾಗಿ ನೀಡಲಾಗಿದೆ” ಎಂದು ಬರೆದಿದ್ದಾರೆ.
    ಈ ಸುದ್ದಿ ನೆಟ್​​ನಲ್ಲಿ ಸಂತೋಷದ ವಾತಾವರಣ ಸೃಷ್ಟಿಸಿದೆ. “ಉತ್ತಮ ಕಾರ್ಯಗಳು ಯಾವಾಗಲೂ ಉತ್ತಮ ಪ್ರತಿಫಲವನ್ನೇ ನೀಡುತ್ತವೆ” ಎಂದು ಒಬ್ಬ ಬಳಕೆದಾರರು ಪ್ರತಿಕ್ರಿಯಿಸಿದ್ದಾರೆ.
    ದಯೆ ಯಾವಾಗಲೂ ಪ್ರತಿಫಲ ನೀಡುತ್ತದೆ. ಅದು ಯಾವಾಗಲೂ ನಿರ್ಲಕ್ಷ್ಯಗೊಳ್ಳುವಂಥದ್ದಲ್ಲ. ಪ್ರಪಂಚದಾದ್ಯಂತ ಇಂತಹ ಅನೇಕ ದಯಾಪರ ಜನರಿದ್ದಾರೆ. ನಾವು ಅಂಥವರನ್ನು ಪ್ರೀತಿಸಬೇಕಾದುದು ಮುಖ್ಯ ಎಂದಿದ್ದಾರೆ.

    ಪೂರ್ಣಾವಧಿ ಸೇವೆ: ಸೇನಾ ವನಿತೆಯರ ಇಚ್ಛೆಗೆ ಕೇಂದ್ರದ ಗ್ರೀನ್‌ ಸಿಗ್ನಲ್‌

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts