More

    ಪೂರ್ಣಾವಧಿ ಸೇವೆ: ಸೇನಾ ವನಿತೆಯರ ಇಚ್ಛೆಗೆ ಕೇಂದ್ರದ ಗ್ರೀನ್‌ ಸಿಗ್ನಲ್‌

    ನವದೆಹಲಿ: ಭಾರತೀಯ ಸೇನೆಯಲ್ಲಿ ಮಹಿಳೆಯರಿಗೆ ಇತ್ತೀಚಿನ ವರ್ಷಗಳಲ್ಲಿ ನೇಮಕ ಮಾಡಿಕೊಳ್ಳಲಾಗುತ್ತಿದೆ. ಸೇನೆಯ ಎಲ್ಲಾ ವಿಭಾಗಗಳಲ್ಲಿಯೂ ಮಹಿಳೆಯರು ನೇಮಕಗೊಂಡಿರುವ ಕಾರಣ, ಇಡೀ ವಿಶ್ವಕ್ಕೆ ಭಾರತೀಯ ಸೇನೆ ಮಾದರಿಯಾಗಿ ನಿಂತಿದೆ.

    ಇದರ ಬೆನ್ನಲ್ಲೇ ಸೇನೆಯಲ್ಲಿ ಅಲ್ಪಾವಧಿ ಸೇವೆ ಸಲ್ಲಿಸುತ್ತಿರುವ ಮಹಿಳಾ ಅಧಿಕಾರಿಗಳಿಗೆ ಕಾಯಂ ಸೇವೆಯ ಅವಕಾಶ (ಪರ್ಮನೆಂಟ್‌ ಕಮಿಷನ್‌) ನೀಡುವ ಸಂಬಂಧ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಭಾರತೀಯ ಸೇನೆಯ ಎಲ್ಲಾ 10 ವಿಭಾಗಗಳ ಷಾರ್ಟ್ ಸರ್ವಿಸ್ ಕಮಿಷನ್ಡ್ (ಎಸ್‌ಎಸ್‌ಸಿ) ವಿಭಾಗದ ಮಹಿಳಾ ಅಧಿಕಾರಿಗಳಿಗೂ ಈ ಆದೇಶ ಅನ್ವಯ ಆಗಲಿದೆ. ಇದರಿಂದಾಗಿ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಮಹಿಳೆಯರ ವರ್ಷಗಳ ಕನಸು ನನಸಾಗಿದೆ.

    ಸೇನಾ ವಾಯು ರಕ್ಷಣಾ (ಎಎಡಿ), ಸಿಗ್ನಲ್‌ಗಳು, ಇಂಜಿನಿಯರ್ಸ್‌, ಆರ್ಮಿ ಏವಿಯೇಷನ್, ಎಲೆಕ್ಟ್ರಾನಿಕ್ಸ್ ಮತ್ತು ಮೆಕ್ಯಾನಿಕಲ್ ಇಂಜಿನಿಯರ್ಸ್‌ (ಇಎಂಇ), ಆರ್ಮಿ ಸರ್ವಿಸ್ ಕಾರ್ಪ್ಸ್ ( ಎಎಸ್ಸಿ), ಆರ್ಮಿ ಆರ್ಡನೆನ್ಸ್ ಕಾರ್ಪ್ಸ್ (ಎಒಸಿ), ಮತ್ತು ಇಂಟೆಲಿಜೆನ್ಸ್ ಕಾರ್ಪ್ಸ್ ಜತೆಗೆ ಅಸ್ತಿತ್ವದಲ್ಲಿರುವ ನ್ಯಾಯಾಧೀಶರು ಮತ್ತು ಅಡ್ವೊಕೇಟ್ ಜನರಲ್ (ಜೆಎಜಿ) ಮತ್ತು ಆರ್ಮಿ ಎಜುಕೇಷನಲ್ ಕಾರ್ಪ್ಸ್‌ಗಳಿಗೆ (ಎಇಸಿ) ಇದು ಅನ್ವಯ ಆಗಲಿದೆ.

    ಇದನ್ನೂ ಓದಿ: ಪ್ಯಾಂಗಾಂಗ್​ ತ್ಸೊ ಮತ್ತು ಗೋಗ್ರಾ ಪೋಸ್ಟ್​ ನಮ್ಮದು, ಇಲ್ಲಿಂದ ಹಿಂದೆ ಸರಿಯಲ್ಲ ಎನ್ನುತ್ತಿದೆ ಚೀನಾ

    ಭಾರತೀಯ ಸೇನೆಯಲ್ಲಿ ಮಹಿಳಾ ಅಧಿಕಾರಿಗಳಿಗೂ ಕಮಾಂಡರ್ ಸ್ಥಾನ ಕೊಡಬೇಕು. ಮಹಿಳೆಯರಿಗೂ ಶಾಶ್ವತ ಸೇವೆಯ ಅವಕಾಶ ನೀಡಬೇಕು, ಕಮಾಂಡ್‌ ಹುದ್ದೆಯನ್ನೂ ನೀಡಬೇಕು ಎಂಬ ಐತಿಹಾಸಿಕ ತೀರ್ಪನ್ನು ಸುಪ್ರೀಂ ಕೋರ್ಟ್‌ ಫೆಬ್ರುವರಿ 17ರಂದು ನೀಡಿತ್ತು.

    14 ವರ್ಷ ಅಥವಾ 20 ವರ್ಷ ಸೇವೆ ಮುಗಿಸಿದ್ದಾರೆ ಎಂಬ ಯಾವ ಮಾನದಂಡವನ್ನೂ ಲೆಕ್ಕಿಸದೆ, ಅಲ್ಪಾವಧಿ ಸೇವೆಯಲ್ಲಿರುವ ಎಲ್ಲಾ ಅಧಿಕಾರಿಗಳನ್ನು ಕಾಯಂ ಸೇವೆಗೆ ಪರಿಗಣಿಸುವ ಪ್ರಕ್ರಿಯೆಯನ್ನು ಮೂರು ತಿಂಗಳೊಳಗೆ ಪೂರ್ಣಗೊಳಿಸಬೇಕು ಎಂದು ಕೋರ್ಟ್‌ ಈ ಹಿಂದೆ ಸೂಚಿಸಿತ್ತು. ಈ ತೀರ್ಪಿನ ಅನ್ವಯ ಈಗ ಸರ್ಕಾರದಿಂದ ಆದೇಶ ಹೊರಟಿದೆ.

    ಸರ್ಕಾರದ ಈ ಆದೇಶವು ಸೈನ್ಯದಲ್ಲಿ ಮಹಿಳೆಯರಿಗೆ ದೊಡ್ಡ ಹುದ್ದೆಗಳನ್ನು ನಿರ್ವಹಿಸಲು ಅವಕಾಶ ಮಾಡಿಕೊಡುವ ಮೂಲಕ ಮಹಿಳಾ ಸಬಲೀಕರಣಗೊಳಿಸಲು ದಾರಿ ಮಾಡಿಕೊಟ್ಟಿದೆ ಎಂದು ಸೇನೆಯ ವಕ್ತಾರ ಕರ್ನಲ್ ಅಮನ್ ಆನಂದ್ ಅವರು ಹೇಳಿದ್ದಾರೆ.

    ಅಮ್ಮಾ ಕ್ಷಮಿಸಿಬಿಡು, ಅವನೂ ನನ್ನ ಮದ್ವೆ ಆಗಲ್ಲ, ಬೇರೆಯವರನ್ನೂ ಆಗಲು ಬಿಡಲ್ಲ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts