More

    ಲೋಕಸಭೆ ಚುನಾವಣೆಯಲ್ಲಿತಕ್ಕ ಪಾಠ ಖಚಿತ; ಸಚಿವ ಜೋಶಿಗೆ ಲಾಡ್ ತಿರುಗೇಟು

    ಧಾರವಾಡ: ಮುಖ್ಯಮಂತ್ರಿ ಸಿದ್ದರಾಮಯ್ಯ ಆಡಳಿತವನ್ನು ಐಸಿಸ್‌ಗೆ ಹೋಲಿಸಿರುವ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಕ್ಷಮೆ ಯಾಚಿಸಬೇಕು. ಇಲ್ಲದಿದ್ದರೆ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಜನ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ತಿರುಗೇಟು ನೀಡಿದರು.
    ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೋಶಿಯವರು ಸುಶಿಕ್ಷಿತರ ಜಿಲ್ಲೆಯನ್ನು ೪ ಬಾರಿ ಸಂಸದರಾಗಿ ಪ್ರತಿನಿಽಸಿದ್ದಾರೆ. ಸಿದ್ದರಾಮಯ್ಯನವರು ಎಲ್ಲಿಂದಲೋ ಹಾರಿಕೊಂಡು ಮುಖ್ಯಮಂತ್ರಿಯಾಗಿದ್ದಾರೆ ಎಂದಿರುವುದು ತಪ್ಪು. ಸಿದ್ದರಾಮಯ್ಯನವರು ಬುದ್ಧ, ಬಸವೇಶ್ವರ, ಅಂಬೇಡ್ಕರ್ ತತ್ವ- ಸಿದ್ಧಾಂತ ಪಾಲಿಸುತ್ತ ಕಳೆದ ೫೦ ವರ್ಷಗಳಿಂದ ರಾಜಕಾರಣದಲ್ಲಿದ್ದವರು. ಹೀಗಾಗಿ ೨ನೇ ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿದ್ದಾರೆ ಎಂದರು.
    ಇದು ಸಿಎಂ ವಿರುದ್ಧ ಮಾತನಾಡುವ ವಿಷಯವೇ ಅಲ್ಲ. ಇಲ್ಲಿ ಐಸಿಸ್ ಆಡಳಿತ ನಡೆಯುತ್ತಿದ್ದರೆ ಅವರೂ ಸೇರಿ ಪ್ರಧಾನಮಂತ್ರಿ ರಾಜೀನಾಮೆ ಕೊಡಬೇಕು. ಇಲ್ಲದಿದ್ದರೆ ಹೇಳಿದ ಮಾತನ್ನು ವಾಪಸ್ ಪಡೆದು ಕ್ಷಮೆ ಯಾಚಿಸಬೇಕು ಎಂದರು.
    ಅವರಿಗೆ ಹಿಂದುತ್ವ ಅಜೆಂಡಾ ಬಿಟ್ಟರೆ ಬೇರೆನೂ ಇಲ್ಲ. ಕೋವಿಡ್‌ನಲ್ಲಿ ದೇಶಾದ್ಯಂತ ೪೫ ಲಕ್ಷ ಜನ ಮೃತಪಟ್ಟರು. ದೇಶದ ಹಲವೆಡೆ ಹಿಂದುಗಳನ್ನು ಅವರ ವಿಽವಿಧಾನದಂತೆ ಮುಸಲ್ಮಾನರು ಶವಸಂಸ್ಕಾರ ಮಾಡಿದರು. ಆಗ ಹಿಂದುತ್ವವಾದಿಗಳು ಎಲ್ಲಿದ್ದರು? ಎಂದು ಲಾಡ್ ಪ್ರಶ್ನಿಸಿದರು.

    ಇಟ್ಟಿಗೆಗಳ ಲೆಕ್ಕೆ ಕೊಡಿ:
    ಹುಬ್ಬಳ್ಳಿಯ ಶ್ರೀಕಾಂತ ಪೂಜಾರಿ ವಿರುದ್ಧ ೨೫ಕ್ಕೂ ಹೆಚ್ಚು ಪ್ರಕರಣಗಳಿವೆ. ಅವರಿಗೆ ನೋಬೆಲ್ ಅಥವಾ ಪರಮವೀರ ಚಕ್ರ ಪ್ರಶಸ್ತಿ ಬಂದಿದೆಯೇ? ನಾನು ಹಿಂದು. ಕಳೆದ ವರ್ಷಗಳಲ್ಲಿ ಹಿಂದುಗಳಿಗೆ ಆದ ಅನುಕೂಲ ಏನು? ಬಿಜೆಪಿ, ಬಿಜೆಪಿ ಕಾರ್ಯಕರ್ತರು, ಕೆಲ ಉದ್ಯಮಿಗಳನ್ನು ಹೊರತುಪಡಿಸಿದರೆ ಹಿಂದುಗಳಿಗೆ ಯಾವುದೇ ಅನುಕೂಲವಾಗಿಲ್ಲ. ಹಿಂದುತ್ವ, ರಾಮನ ಹೆಸರಲ್ಲಿ ಕಳೆದ ೩೦ ವರ್ಷಗಳಿಂದ ಪಡೆದುಕೊಂಡ ಇಟ್ಟಿಗೆಗಳ ಲೆಕ್ಕ ಕೊಡಿ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts