More

    ಮಾಹಿತಿ ಕೊರತೆಯಿಂದ ಕೃಷಿಯಲ್ಲಿ ಹಿನ್ನಡೆ

    ಶೃಂಗೇರಿ: ಕೃಷಿಯಲ್ಲಿ ಮಾಹಿತಿ ಕೊರತೆಯಿಂದ ರೈತರು ನಿರೀಕ್ಷಿತ ಸಲು ಪಡೆಯಲು ಸಾಧ್ಯವಾಗುತ್ತಿಲ್ಲ ಎಂದು ಅಡಕೆ ಸಂಶೋಧನಾ ಕೇಂದ್ರದ ಸಲಹಾ ಮಂಡಳಿ ಸದಸ್ಯ ಕೆ.ಎನ್.ಗೋಪಾಲ ಹೆಗ್ಡೆ ಹೇಳಿದರು.
    ಪಟ್ಟಣಕ್ಕೆ ಸಮೀಪದ ಆನೆಗುಂದದ ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರದಲ್ಲಿ ಗುರುವಾರ ಏರ್ಪಡಿಸಿದ್ದ ಕೃಷಿಯಲ್ಲಿ ಜೈವಿಕ ಗೊಬ್ಬರ ಹಾಗೂ ಜೈವಿಕ ನಿಯಂತ್ರಕಗಳ ಪ್ರಾಮುಖ್ಯತೆ ಮತ್ತು ಬಳಕೆ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ರಸಗೊಬ್ಬರ ಬಳಕೆ ಕಡಿಮೆ ಮಾಡಲು ಜೈವಿಕ ಗೊಬ್ಬರದ ಬಳಕೆ ಮತ್ತು ಮಾಹಿತಿ ಅಗತ್ಯ ಎಂದರು.
    ನವಿಲೆ ಕೃಷಿ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ.ನಂದೀಶ್ ಮಾತನಾಡಿ, ಹಸಿರುಕ್ರಾಂತಿ ನಂತರ ಆಧುನಿಕ ಬೇಸಾಯ ಪದ್ದತಿಯಲ್ಲಿ ರಾಸಾಯನಿಕ ಗೊಬ್ಬರ ಮತ್ತು ಕೀಟನಾಶಕ ಬಳಕೆ ಹೆಚ್ಚಾಗಿದೆ. ಮಣ್ಣಿನ ಲವತ್ತತೆ ಕಾಪಾಡಲು ಜೈವಿಕ ಗೊಬ್ಬರ ಬಳಕೆ ಸೂಕ್ತ. ಜೈವಿಕ ಗೊಬ್ಬರದಲ್ಲಿ ಸಸ್ಯಗಳಿಗೆ ಅಗತ್ಯವಾದ ಸೂಕ್ಷ್ಮ ಜೀವಿಗಳಾದ ಸಾರಜನಕ ಸ್ವೀಕರಿಸುವ, ರಂಜಕ ಕರಗಿಸುವ, ಪೊಟ್ಯಾಷ್, ಗಂಧಕ ಹಾಗೂ ಇತರೆ ಪೋಷಾಕಾಂಶ ಗಿಡಕ್ಕೆ ಒದಗಿಸುತ್ತದೆ. ಜೈವಿಕ ಗೊಬ್ಬರವು ಸಾವಯವ ಕೃಷಿಯ ಚಕ್ರಗಳಿಂತಿದ್ದು, ಬೆಳೆಯ ಸಮಗ್ರ ಪೋಷಾಕಾಂಶ ನಿರ್ವಹಣೆಯಲ್ಲಿ ಮಹತ್ತರ ಪಾತ್ರ ನಿರ್ವಹಿಸುತ್ತದೆ ಎಂದರು.
    ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರದ ಮುಖ್ಯಸ್ಥ ನಾರಾಯಣ ಸ್ವಾಮಿ ಮಾತನಾಡಿ, ಜೈವಿಕ ಗೊಬ್ಬರ ಪರಿಸರ ಮಾಲಿನ್ಯವಾಗದಂತೆ ಕಾಪಾಡುವ ಜತೆಗೆ ಮಣ್ಣಿನ ಲವತ್ತತೆ ಹೆಚ್ಚಿಸಿ, ಸುದೀರ್ಘವಾಗಿ ಕಾಪಾಡಲು ಸಹಕರಿಸುತ್ತದೆ. ಆದರೆ ಜೈವಿಕ ಗೊಬ್ಬರವನ್ನು ರಾಸಾಯನಿಕ ಗೊಬ್ಬರ ಮತ್ತು ಕ್ರಿಮಿ, ಕೀಟನಾಶಕದೊಂದಿಗೆ ಮಿಶ್ರ ಮಾಡಬಾರದು. ಯಾವಾಗಲೂ ತಂಪು ಮಾಡಿದ ಅಂಟು ದ್ರಾವಣದಲ್ಲಿ ಮಿಶ್ರ ಮಾಡಬೇಕು ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts