More

    ಪ್ರಕೃತಿಯಲ್ಲಿ ದೇವರನ್ನು ಕಂಡ ಮಹಾನ್ ಕವಿ ಕುವೆಂಪು

    ಎನ್.ಆರ್.ಪುರ: ಪ್ರಕೃತಿಯಲ್ಲಿ ದೇವರನ್ನು ಕಂಡ ಮಹಾನ್ ಕವಿ ಕುವೆಂಪು ಎಂದು ಸೀಗುವಾನಿ ಶಾಲೆ ಶಿಕ್ಷಕಿ ಸವಿನಾ ಕಾಂತರಾಜ್ ಹೇಳಿದರು.
    ಸೋಮವಾರ ಸಂಜೆ ರೋಟರಿ ಹಾಲ್‌ನಲ್ಲಿ ಶ್ರೀಮತಿ ರಾಮಕ್ಕ.ಆರ್.ಪೆರುಮಯ್ಯ ಬಾಗೂರು ಇವರ ನೆನಪಿಗಾಗಿ ಆಯೋಜಿಸಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಕುವೆಂಪು ಅವರ ಸಾಹಿತ್ಯದಲ್ಲಿ ಮಲೆನಾಡಿನ ನೈಜ ಚಿತ್ರಣ ವಿಷಯದ ಬಗ್ಗೆ ಉಪನ್ಯಾಸ ನೀಡಿ, ಕುವೆಂಪು ಅವರು ಈ ದೇಶಕ್ಕೆ ನಾಡಗೀತೆ, ರೈತಗೀತೆ ನೀಡಿದ ಶ್ರೇಷ್ಠ ಕವಿಯಾಗಿದ್ದಾರೆ. ಮಲೆನಾಡ ಚಿತ್ರಗಳು ಪುಸ್ತಕದಲ್ಲಿ ಮಲೆನಾಡಿ ಸಂಪೂರ್ಣ ಚಿತ್ರಣವನ್ನು ಬಿತ್ತರಿಸಿದ್ದಾರೆ ಎಂದರು.
    ಕಾನೂರು ಹೆಗ್ಗಡತಿ ಅವರ ಮೊದಲ ಕಾದಂಬರಿ. ಹೆಚ್ಚು ಜ್ಞಾನ ಪಡೆಯಬೇಕಾದರೆ ಅವರ ಎಲ್ಲ ಕೃತಿಗಳನ್ನು ಓದುಬೇಕು. ನೆನಪಿನ ದೋಣಿ ಅವರ ಜೀವನ ಚಿತ್ರಣವನ್ನು ತೋರಿಸುತ್ತದೆ. ಇವರಂತೆ ಸಾಹಿತ್ಯ ರಚನೆ ಮಾಡುವ ಮತ್ತೊಬ್ಬ ಮಲೆನಾಡ ಕವಿ ಇಲ್ಲ. ನಮ್ಮ ಮಲೆನಾಡಿನ ಕವಿಯಾಗಿ ರಾಷ್ಟ್ರ ಕವಿಯಾಗಿ ಬೆಳೆದವರು. ಇವರಿಗೆ ಮಲೆನಾಡಿನ ಬಗ್ಗೆ ಅಪಾರವಾದ ಪ್ರೇಮ. ಮಲೆಗಳಲ್ಲಿ ಮದುಮಗಳು ಪುಸ್ತಕದಲ್ಲಿ ಒಕ್ಕಲಿಗ ಸಮುದಾಯದ ಚಿತ್ರಣವನ್ನು ಅತ್ಯಂತ ಅರ್ಥರ್ಪೂಣವಾಗಿ ಬರೆದಿದ್ದಾರೆ ಎಂದು ಹೇಳಿದರು.
    ಕಸಾಪ ಜಿಲ್ಲಾ ಸಾಂಸ್ಕೃತಿಕ ರಾಯಭಾರಿ ಕಣಿವೆ ವಿನಯ್ ಮಾತನಾಡಿ, ಕುವೆಂಪು ಅವರು ಈಗಿನ ರಾಜಕೀಯ ವ್ಯವಸ್ಥೆ ಬಗ್ಗೆ ಅಂದೇ ಬರೆದಿದ್ದಾರೆ. ವಿಶ್ವ ಮಾನವ ಸಂದೇಶವನ್ನು ನೀಡಿದ ಮೇರು ಕವಿಯಾಗಿದ್ದಾರೆ. ಆಡಂಬರದ ಮದುವೆ, ಸಮಾರಂಭಗಳನ್ನು ವಿರೋಧಿಸಿ ತಮ್ಮ ಮಗನ ಮದುವೆಯನ್ನು ಅತ್ಯಂತ ಅರಳವಾಗಿ ಮಂತ್ರ ಮಾಂಗಲ್ಯ ಮೂಲಕ ಮಾಡುವ ಮೂಲಕ ಮಂತ್ರ ಮಾಂಗಲ್ಯಕ್ಕೆ ಆದ್ಯತೆ ನೀಡಿದವರು ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts