More

    ಧಾರ್ಮಿಕ ಮೂಲಭೂತವಾದ ವಿಜೃಂಭಿಸುತ್ತಿದೆ; ಬರಗೂರು ರಾಮಚಂದ್ರಪ್ಪ ಅಭಿಮತ

    ಬೆಂಗಳೂರು: ಧಾರ್ಮಿಕ ಮೂಲಭೂತವಾದ ವಿಜೃಂಭಿಸುತ್ತಿರುವ ಕಾಲಟ್ಟದಲ್ಲಿ ನಾವಿದ್ದೇವೆ. ಒಂದೆಡೆ ದ್ವೇಷೋತ್ಪಾದನೆ ಇದ್ದರೆ, ಮತ್ತೊಂದೆಡೆ ಭಯೋತ್ಪಾದನೆ ಇದೆ. ಈ ಸಂದರ್ಭದಲ್ಲಿ ಕುವೆಂಪು ಅವರ ‘ಸರ್ವಜನಾಂಗದ ಶಾಂತಿಯ ತೋಟ’ ಎಂಬ ನಾಡಗೀತೆಯ ಸಾಲು ಮುಖ್ಯವಾಗುತ್ತದೆ ಎಂದು ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪ ಅಭಿಪ್ರಾಯಪಟ್ಟಿದ್ದಾರೆ.

    ಬಂಡಾಯ ಸಾಹಿತ್ಯ ಸಂಟನೆ ಬೆಂಗಳೂರು ಘಟಕ ಹಾಗೂ ಸರ್ಕಾರಿ ಕಲಾ ಕಾಲೇಜಿನ ಕನ್ನಡ ವಿಭಾಗ ಬುಧವಾರ ಕಲಾ ಕಾಲೇಜಿನ ಬಾಪೂಜಿ ಸಂಭಾಗಣದಲ್ಲಿ ಆಯೋಜಿಸಿದ್ದ ಕುವೆಂಪು ವಿಚಾರಗೋಷ್ಠಿ ಹಾಗೂ ಡಾ.ಜಿ.ಎನ್​.ಉಪಾಧ್ಯ ಅವರ ‘ಕುವೆಂಪು: ವಿಚಾರ ಸಾಹಿತ್ಯ ನಿರ್ಮಾಪಕರು’ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.

    ಸಮಾಜದಲ್ಲಿ ಜಾತ್ಯಾತಿತ ತತ್ವಕ್ಕೆ ಧಕ್ಕೆ ಉಂಟಾಗುತ್ತಿದೆ. ಜತ್ಯಾತಿತ ಎಂಬ ಹೆಸರು ಹೇಳಲು ಹಿಂಜರಿಯುತ್ತಿರುವ ಜನರಿದ್ದಾರೆ. ಒಂದು ವೇಳೆ ಜತ್ಯಾತಿತ ಎಂಬ ಪದ ಹೇಳಿದರೆ ಅಪಹಾಸ್ಯ ಮಾಡುವ ವಾತಾವರಣ ಸೃಷ್ಟಿಯಾಗಿದೆ. ಈ ಕಾರಣದಿಂದ ಕುವೆಂಪು ಅವರು ತಮ್ಮ ಕಾವ್ಯ, ವೈಚಾರಿಕ ಲೇಖನಗಳಲ್ಲಿ ಹೇಳಿರುವ ಜಾತ್ಯಾತಿತ ತತ್ವ ಮುಖ್ಯವಾಗುತ್ತದೆ. ಹೀಗಾಗಿ ಸಮಕಾಲೀನ ಸಂದರ್ಭದಲ್ಲಿ ಕುವೆಂಪು ಪ್ರಸ್ತುತವಾಗುತ್ತಾರೆ ಎಂದರು.

    ರಚನಾತ್ಮಕ ಸಂಗತಿಗಳನ್ನು ಹೇಳಿದಾಗ ಹೇಗೆ ಪ್ರತಿಕ್ರಿಯಿಸುತ್ತೇವೆ ಎಂಬುದು ಮುಖ್ಯ. ಯಾರನ್ನಾದರು ಟೀಕೆ ಮಾಡಿ ಲೇಖನ ಬರೆದರೆ, ಎಷ್ಟು ಚೆನ್ನಾಗಿದೆ ಎನ್ನುತ್ತಾರೆ. ವಿಶ್ಲೇಷಣೆ ಮಾಡಿದರೆ ಏನೂ ಪ್ರತಿಕ್ರಿಯಿಸದೆ ಸುಮ್ಮನಿರುತ್ತಾರೆ. ಇಂಥಾ ಸಂದರ್ಭದಲ್ಲಿ ಕುವೆಂಪು ಅವರ ಕಾವ್ಯ, ವೈಚಾರಿಕ ಪ್ರಜ್ಞೆಯನ್ನು ಚಿಂತನೆ ಮಾಡಬೇಕಾಗ ಅಗತ್ಯವಿದೆ.

    ಕುವೆಂಪು ನಾಡಗೀತೆ ಬರೆಯುವುದಕ್ಕಿಂತ ಮುಂಚೆ, ಅದಕ್ಕೆ ಪ್ರೇರಣೆಯಾಗುವುದು ಮೂಲಕ ಗೀತೆಯೊಂದನ್ನು ಬರೆದಿದ್ದಾರೆ. ಅದನ್ನು ಈ ಕೃತಿಯಲ್ಲಿ ಸಂಪೂರ್ಣವಾಗಿ ಉಲ್ಲೇಖ ಮಾಡಲಾಗಿದೆ. ನಾವಿಂದು ಎಲ್ಲ ಕಡೆಗಳಲ್ಲಿ ನಾಡಗೀತೆಯನ್ನು ಹಾಡುತ್ತಿದ್ದೇವೆ. ಈ ಸಂದರ್ಭದಲ್ಲಿ ಗೀತೆಯ ಆಶಯವನ್ನು ಎಷ್ಟು ಅನುಸರಿಸುತ್ತಿದ್ದೇವೆ ಎಂಬುದು ಮುಖ್ಯ. ಇಂದಿನ ಕಾಲಟ್ಟದಲ್ಲಿ ನಾಡಗೀತೆಯ ಆಶಯವನ್ನು ಅನುಸರಿಸುತ್ತಿರುವವರು ನಿಜಾರ್ಥದ ಪ್ರಜಾಪ್ರಭುತ್ವವಾದಿಯಾಗಿರುತ್ತಾರೆ. ಜತೆಗೆ ಒಕ್ಕೂಟ ವ್ಯವಸ್ಥೆಯನ್ನು ಗೌರವಿಸುತ್ತಾರೆ ಎಂದು ಹೇಳಿದರು.

    ಪ್ರಭುತ್ವದ ಜತೆಗೆ ಹೇಗೆ ಇರಬೇಕು ಎಂಬುದಕ್ಕೆ ಕುವೆಂಪು ಅವರೇ ದೊಡ್ಡ ಉದಾಹರಣೆ. ನಮ್ಮ ಇಷ್ಟದ ಸರಕಾರ ಅಧಿಕಾರದಲ್ಲಿದ್ದಾಗ ಕೂಡ, ಆ ಸರ್ಕಾರದಿಂದ ಒಂದು ಹಂತದ ದೂರ ಕಾಯ್ದುಕೊಳ್ಳಬೇಕು. ಆ ಸರ್ಕಾರ ತಪು$್ಪ ಮಾಡಿದಾಗ ಟೀಕೆ ಮಾಡುವ ಸ್ವಾತಂತ್ರ್ಯ ಉಳಿಸಿಕೊಳ್ಳಬೇಕು. ಆಗ ಮಾತ್ರ ನಮಗೊಂದು ಸೃಜನಶೀಲ ಸ್ವಾತಂತ್ರ್ಯ ಇದೆ ಎಂದು ಭಾವಿಸಬಹುದು. ಈ ಮಾತನ್ನು ಕುವೆಂಪು ಅಂದೇ ಹೇಳಿದ್ದರು. ಈ ದೃಷ್ಟಿಕೋನ ಕಾರಣಕ್ಕೆ ಅವರು ಮುಖ್ಯರಾಗುತ್ತಾರೆ.

    ಅರಮನೆಗೆ ಬಂದು ರಾಜಕುಮಾರನಿಗೆ ಪಾಠ ಮಾಡಿ ಎಂದು ಹೇಳಿದಾಗ, ‘ನಾನು ಅರಮನೆಗೆ ಬಂದು ಪಾಠ ಮಾಡುವುದಿಲ್ಲ. ಬೇಕಿದ್ದರೆ ತರಗತಿಗೆ ಬಂದು ಕುಳಿತುಕೊಳ್ಳಲಿ’ ಎಂದು ಕುವೆಂಪು ಅವರು ಹೇಳಿದ್ದರು. ಈ ಟನೆಯಲ್ಲಿ ಪ್ರಜಾಪ್ರಭುತ್ವದ ಮೌಲ್ಯ ಅಡಗಿದೆ. ಯಾರೇ ಅಗಲಿ, ವಿದ್ಯಾರ್ಥಿಯಾದವ ಗುರುವಿನಲ್ಲಿಗೆ ಬರಬೇಕು ಎಂದು ಹೇಳಿರುವುದು ಪ್ರಜಾಸತ್ತಾತ್ಮಕವಾದ ಮೌಲ್ಯ ಎಂದು ಬರಗೂರು ರಾಮಚಂದ್ರಪ್ಪ ಹೇಳಿದರು.

    ಕುವೆಂಪು ಬ್ರಾಹ್ಮಣ ದ್ವೇಷಿಯಾಗಿದ್ದರು ಎಂಬುದು ಪ್ರಚಲಿತದಲ್ಲಿದೆ. ಪುರೋಹಿತಶಾಹಿ ಎಂಬುದು ಬ್ರಾಹ್ಮಣರನ್ನು ಒಳಗೊಂಡಂತೆ, ಶೂದ್ರರಲ್ಲಿಯೂ ಇರಬಹುದಾದಾ ಒಂದು ಮನೋಧರ್ಮ. ಪುರೋಹಿತಶಾಹಿ ಎಂಬುದು ಜಾತಿ ಅಲ್ಲ. ಕುವೆಂಪು ಅವರ ವೈಚಾರಿಕ ಲೇಖನಗಳನ್ನು ಓದಿದಾಗ ಅವರು ಪುರೋಹಿತಶಾಹಿಯನ್ನು ವಿರೋಧಿಸಿದ್ದರು ಎಂಬುದು ಅರ್ಥವಾಗುತ್ತದೆ ಎಂದು ತಿಳಿಸಿದರು.

    ಬಿ.ಎಂ.ಶ್ರೀ. ಪ್ರತಿಷ್ಠಾನದ ಅಧ್ಯಕ್ಷ ಡಾ.ಬೈರಮಂಗಲ ರಾಮೇಗೌಡ, ಉಪನ್ಯಾಸಕಿ ಡಾ.ಎಲ್​.ಜಿ.ಮೀರಾ, ಕಲಾ ಕಾಲೇಜಿನ ಪ್ರಾಂಶುಪಾಲ ಪ್ರೊ.ಶ್ರೀನಿವಾಸ ನಾಯಕ್​, ಬಂಡಾಯ ಸಾಹಿತ್ಯ ಸಂಟನೆಯ ಜಿಲ್ಲಾ ಸಂಚಾಲಕ ಜಿ.ರಾಜಶೇಖರಮೂರ್ತಿ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts