More

    ಕುಷ್ಟಗಿಯ ವಿಮುಕ್ತ ದೇವದಾಸಿ ಕುಟುಂಬಕ್ಕೆ ನೆರವಿನ ಹಸ್ತ: ತಾಡಪತ್ರಿ, ಅಗತ್ಯ ದಿನಸಿ ಸಾಮಗ್ರಿ ವಿತರಣೆ, ಬಿದ್ದ ಗೋಡೆ ನಿರ್ಮಾಣ ಭರವಸೆ

    ಕುಷ್ಟಗಿ: ತಾಲೂಕಿನ ಗುಡಿಕಲಕೇರಿ ಗ್ರಾಮದ ವಿಮುಕ್ತ ದೇವದಾಸಿ ಲಕ್ಷ್ಮವ್ವ ಹರಿಜನ ಮನೆಗೆ ಇನ್ನರ್ ವ್ಹೀಲ್ ಕ್ಲಬ್ ಸದಸ್ಯರು, ಮಾದಿಗ ಸಮುದಾಯದ ಪ್ರಮುಖರು ಹಾಗೂ ಸಂವಿಧಾನ ಸಂರಕ್ಷಣಾ ವೇದಿಕೆ ಸದಸ್ಯರು ಭಾನುವಾರ ಭೇಟಿ ನೀಡಿ ನೆರವಿನ ಹಸ್ತ ಚಾಚಿದರು.

    ಇನ್ನರ್ ವ್ಹೀಲ್ ಕ್ಲಬ್ ಸದಸ್ಯರು ತಾಡಪತ್ರಿ, ಅಗತ್ಯ ದಿನಸಿ ವಸ್ತುಗಳು ಹಾಗೂ ಆರ್ಥಿಕ ನೆರವು ನೀಡಿದರು. ಕ್ಲಬ್ ಅಧ್ಯಕ್ಷೆ ಶಾರದಾ ಶೆಟ್ಟರ್, ಕುಟುಂಬ ಸದಸ್ಯರಿಗೆ ಆತ್ಮಸ್ಥೈರ್ಯ ತುಂಬಿದರು. ಮಾದಿಗ ಸಮುದಾಯದ ಪ್ರಮುಖ ಸುಖರಾಜ ತಾಳಕೇರಿ, ಬಿದ್ದ ಗೋಡೆ ನಿರ್ಮಿಸಿಕೊಡುವುದಾಗಿ ಹೇಳಿ ಕಟ್ಟಡ ಕಾರ್ಮಿಕರಿಗೆ ಸೂಚಿಸಿದರು. ರೈತ ಸಂಘದ ಜಿಲ್ಲಾಧ್ಯಕ್ಷ ನಜೀರಸಾಬ್ ಮೂಲಿಮನಿ, ಪ್ರಮುಖರಾದ ಗವಿಯಪ್ಪ ಕಟ್ಟಿಮನಿ, ಚಿದಾನಂದ ಇಂಡಿ, ಚಂದ್ರಶೇಖರ ಹಿರೇಮನಿ, ಮಂಜುನಾಥ ಕಟ್ಟಿಮನಿ, ದೇವರಾಜ ಹಜಾಳ ಇತರರಿದ್ದರು. ಬಿದ್ದ ಮನೆಯಲ್ಲಿ ವಿಮುಕ್ತ ದೇವದಾಸಿ ಕುಟುಂಬ ವಾಸ ಮಾಡುತ್ತಿರುವ ಕುರಿತು ವಿಜಯವಾಣಿ ಜೂ.4ರಂದು ‘ವಿಮುಕ್ತ ದೇವದಾಸಿಗಿಲ್ಲ ಸೂರು’ ಶೀರ್ಷಿಕೆ ಅಡಿ ವರದಿ ಪ್ರಕಟಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts