More

    ಪಾರದರ್ಶಕ ಪ್ರಕ್ರಿಯೆಗೆ ಸಕಲ ಸಿದ್ಧತೆ

    ಕುಷ್ಟಗಿ: ವಿಧಾನಸಭಾ ಚುನಾವಣೆಗೆ ಸಕಲ ಸಿದ್ಧತೆ ಕೈಗೊಳ್ಳಲಾಗಿದೆ ಎಂದು ಚುನಾವಣಾಧಿಕಾರಿ ಚಿದಾನಂದಪ್ಪ ಹೇಳಿದರು.

    ರಾಜಕೀಯ ಪ್ರಮುಖರು, ವಿವಿಧ ಅಂಗಡಿಕಾರರ ಸಭೆ ನಡೆಸಿ ಸೂಚನೆ ನೀಡಲಾಗಿದ್ದು, ಶಾಂತಿಯುತ ಹಾಗೂ ಪಾರದರ್ಶಕ ಮತದಾನಕ್ಕೆ ಮುಂಜಾಗೃತ ಕ್ರಮ ಕೈಗೊಳ್ಳಲಾಗಿದೆ ಎಂದು ಗುರುವಾರ ಸುದ್ದಿಗಾರರಿಗೆ ಮಾಹಿತಿ ನೀಡಿದರು.

    ಮತಗಟ್ಟೆಗಳಲ್ಲಿ ಕುಡಿವ ನೀರು, ರ‌್ಯಾಂಪ್, ಶೌಚಗೃಹ ಸೇರಿ ಅಗತ್ಯ ಮೂಲ ಸೌಕರ್ಯ ಕಲ್ಪಿಸಲು ಆಯಾ ಗ್ರಾಪಂಗಳಿಗೆ ಸೂಚಿಸಲಾಗಿದೆ. ತಾಲೂಕಿನ ಬಾದಿಮನಾಳ ಕ್ರಾಸ್, ಕಿಲಾರಹಟ್ಟಿ ಹಾಗೂ ಕ್ಯಾದಿಗುಪ್ಪ ಕ್ರಾಸ್ ಬಳಿ ಚೆಕ್‌ಪೋಸ್ಟ್ ಸ್ಥಾಪಿಸಿ ದಾಖಲೆ ರಹಿತ ಹಣ ಹಾಗೂ ವಸ್ತುಗಳ ಸಾಗಣೆ ಮೇಲೆ ನಿಗಾ ವಹಿಸಲಾಗುತ್ತಿದೆ. 80 ವರ್ಷ ಮೇಲ್ಪಟ್ಟ ಹಾಗೂ ವಿಕಲಚೇತನತರಿಗೆ ಮನೆಯಿಂದಲೇ ಮತದಾನ ಮಾಡಲು ವ್ಯವಸ್ಥೆ ಮಾಡಲಾಗಿದೆ ಎಂದರು.

    ತಾಲೂಕಿನ 197 ಕಟ್ಟಡಗಳಲ್ಲಿ 278 ಮತಗಟ್ಟೆ ಸ್ಥಾಪಿಸಲಾಗಿದೆ. ಒಂದು ಮತಗಟ್ಟೆ ಹೊಂದಿರುವ 135 ಕಟ್ಟಡ, 2 ಮತಗಟ್ಟೆ ಹೊಂದಿರುವ 47, 3 ಮತಗಟ್ಟೆ ಹೊಂದಿರುವ 11 ಹಾಗೂ 4 ಮತಗಟ್ಟೆ ಹೊಂದಿರುವ 4 ಕಟ್ಟಡಗಳಿದ್ದು, 1,16,738 ಪುರುಷ ಮತದಾರರು ಸೇರಿ ಒಟ್ಟು 2,31,851 ಮತದಾರರು ಹಕ್ಕು ಚಲಾಯಿಸಲಿದ್ದಾರೆ.

    2,791ವಿಕಲಚೇತನರು ಹಾಗೂ 80 ವರ್ಷ ಮೇಲ್ಪಟ್ಟ 3205 ಮತದಾರರಿಗೆ ಅಂಚೆ ಮತದಾನದ ವ್ಯವಸ್ಥೆ ಮಾಡಲಾಗಿದೆ. ಮಾದರಿ ನೀತಿ ಸಂಹಿತೆ ಹಾಗೂ ಚುನಾವಣಾ ವೆಚ್ಚ ವೀಕ್ಷಣೆಗೆ ವಿವಿಧ ತಂಡ ರಚಿಸಲಾಗಿದೆ. ಚುನಾಚಣಾ ಸಂಬಂಧಿತ ದೂರುಗಳಿಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಹಾಯವಾಣಿ (1950) ಸ್ಥಾಪಿಸಲಾಗಿದೆ. ಸಾರ್ವಜನಿಕರು ದೂರು ಸಲ್ಲಿಸಬಹುದಾಗಿದೆ ಎಂದು ತಿಳಿಸಿದರು. ಸಿಪಿಐ ನಿಂಗಪ್ಪ ರುದ್ರಪ್ಪಗೋಳ, ಚುನಾವಣಾ ಸಿಬ್ಬಂದಿ ಅಜಿತ್ ಇದ್ದರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts