More

  ಶಿಕ್ಷಕರು ಕ್ರಿಯಾಶೀಲರಾಗಿ ಕಾರ್ಯನಿರ್ವಹಿಸಲಿ: ಕುಷ್ಟಗಿ ಬಿಇಒ ಸುರೇಂದ್ರ ಕಾಂಬ್ಳೆ ಕಿವಿಮಾತು

  ಕುಷ್ಟಗಿ: ಶಿಕ್ಷಕರು ನಿರಂತರ ಅಧ್ಯಯದ ಜತೆಗೆ ಕ್ರಿಯಾಶೀಲರಾಗಿ ಕಾರ್ಯನಿರ್ವಹಿಸಬೇಕು ಎಂದು ಬಿಇಒ ಸುರೇಂದ್ರ ಕಾಂಬ್ಳೆ ಹೇಳಿದರು.

  ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಶಿಕ್ಷಕರ ಕಲ್ಯಾಣ ನಿಧಿ ಸಹಯೋಗದೊಂದಿಗೆ ಪಟ್ಟಣದ ಹರಿಪ್ರಿಯಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸರ್ಕಾರಿ, ಅನುದಾನಿತ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರಿಗೆ ಗುರುವಾರ ಏರ್ಪಡಿಸಿದ್ದ ತಾಲೂಕು ಮಟ್ಟದ ಸಹಪಠ್ಯ ಚಟುವಟಿಕೆಗಳ ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡಿದರು. ಬೋಧನಾ ಕೌಶಲಗಳನ್ನು ಬಳಸಿಕೊಂಡು ಬೋಧಿಸಿದಾಗ ಮಾತ್ರ ಮಕ್ಕಳ ಕಲಿಕೆ ಪರಿಣಾಮಕಾರಿಯಾಗಿರುತ್ತದೆ. ಆಯಾ ವಿಷಯಕ್ಕೆ ತಕ್ಕಂತೆ ಪ್ರಯೋಗ, ಅಭಿನಯ, ಹಾಡುಗಾರಿಕೆ ಮುಖಾಂತರ ಕಲಿಸಬೇಕು. ಮಕ್ಕಳು ಸಹಪಠ್ಯ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಂತಾಗಲು ಶಿಕ್ಷಕರು ಅಂತಹ ಚಟುವಟಿಕೆಗಳಲ್ಲಿ ಪರಿಣಿತರಾಗಿರಬೇಕು. ಹೀಗಾಗಿ ಶಿಕ್ಷಕರಿಗಾಗಿ ಸಹಪಠ್ಯ ಚಟುವಟಿಕೆ ಸ್ಪರ್ಧೆ ಏರ್ಪಡಿಸಲಾಗುತ್ತಿದೆ ಎಂದರು.

  ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮಲ್ಲಪ್ಪ ಕುದರಿ, ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ನೀಲನಗೌಡ ಹೊಸಗೌಡ್ರ, ಪ್ರಧಾನ ಕಾರ್ಯದರ್ಶಿಗಳಾದ ಹೈದರಲಿ ಜಾಲಿಹಾಳ, ಶಾಕೀರ್ ಬಾಬಾ, ನೋಡಲ್ ಅಧಿಕಾರಿ ತಿಮ್ಮಣ್ಣ ಹಿರೇಹೊಳಿ, ಅಕ್ಷರ ದಾಸೋಹ ಅಧಿಕಾರಿ ಕೆ.ಶರಣಪ್ಪ, ಸಿಆರ್‌ಪಿ ಅಯ್ಯಪ್ಪ ಸುರಳ, ಶಿಕ್ಷಕರಾದ ಲಕ್ಷ್ಮಣ ಪೂಜಾರ್, ಅಹ್ಮದ್ ಹುಸೇನ್, ದಂಡಪ್ಪ ಹೊಸಮನಿ, ಶರಣಪ್ಪ ತೆಮ್ಮಿನಾಳ, ರಾಜೇಸಾಬ್ ನದಾಫ್, ಮೆಹಬೂಬಸಾಬ್ ಕಂದಗಲ್ ಇತರರಿದ್ದರು. 200 ಶಿಕ್ಷಕರು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.

  ರಾಜ್ಯೋತ್ಸವ ರಸಪ್ರಶ್ನೆ - 23

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts