More

    ಆರೋಗ್ಯ ಸುಧಾರಣೆಗೆ ಯೋಗಾಭ್ಯಾಸ ಮುಖ್ಯ; ತಾಪಂ ಇಒ ಶಿವಪ್ಪ ಸುಬೇದಾರ್ ಸಲಹೆ

    ಕುಷ್ಟಗಿ: ಒತ್ತಡದ ಜೀವನ ಹಾಗೂ ಆಹಾರ ಪದ್ಧತಿಯ ವ್ಯವಸ್ಥೆಯಿಂದ ಆರೋಗ್ಯ ಸುಧಾರಿಸಿಕೊಳ್ಳಲು ಪ್ರತಿಯೊಬ್ಬರು ಯೋಗಾಭ್ಯಾಸ ಮಾಡಬೇಕು ಎಂದು ತಾಪಂ ಇಒ ಶಿವಪ್ಪ ಸುಬೇದಾರ್ ಹೇಳಿದರು.

    ಪಟ್ಟಣದ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳ ವಸತಿ ನಿಲಯಕ್ಕೆ ಬುಧವಾರ ಭೇಟಿ ನೀಡಿ ಮಕ್ಕಳಿಗೆ ಯೋಗದ ಮಹತ್ವ ಕುರಿತು ಮಾಹಿತಿ ನೀಡಿದರು. ಋತುಮಾನಕ್ಕೆ ತಕ್ಕಂತೆ ಸುಲಭವಾಗಿ ಜೀರ್ಣವಾಗಬಲ್ಲ ಆಹಾರದ ಜತೆಗೆ ವಿವಿಧ ಹಣ್ಣು, ತರಕಾರಿ ಸೇವಿಸಬೇಕು. ಆಯುಷ್ ಇಲಾಖೆ ಸೂಚನೆಯಂತೆ ಯೋಗವು 45 ನಿಮಿಷದ ಅಭ್ಯಾಸವಾಗಿದ್ದು, ಆರಂಭದ 2 ನಿಮಿಷ ಪ್ರಾರ್ಥನೆಯೊಂದಿಗೆ ಆರಂಭಿಸಬೇಕು. ನಿತ್ಯ ಪ್ರಾಣಾಯಾಮ, ರಾಜಯೋಗ ಮಾಡುವುದರಿಂದ ಮಾನಸಿಕ ನೆಮ್ಮದಿ, ಶಾಂತಿ ಲಭಿಸುತ್ತದೆ. ಲವಲವಿಕೆಯಿಂದ ಕೆಲಸ ಕಾರ್ಯಗಳಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುತ್ತದೆ ಎಂದರು.

    ಬಾಲಕಿಯರ ಸರ್ಕಾರಿ ಪ್ರೌಢಶಾಲೆಯ ದೈಹಿಕ ಶಿಕ್ಷಕ ನಾಗಪ್ಪ ಬಿಳಿಯಪ್ಪನವರ್ ಯೋಗಭ್ಯಾಸ ಮಾಡಿಸಿದರು. ತಾಪಂ ಸಹಾಯಕ ನಿದೇರ್ಶಕ ಹನುಮಂತಗೌಡ ಪೊಲೀಸ್ ಪಾಟೀಲ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಬಾಲಚಂದ್ರ ಸಂಗನಾಳ, ವಸತಿ ನಿಲಯದ ಮೇಲ್ವಿಚಾರಕ ದ್ಯಾಮಣ್ಣ ಕರೇಕಲ್, ತಾಲೂಕು ಐಇಸಿ ಸಂಯೋಜಕ ದೇವರಾಜ ಪತ್ತಾರ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts