More

    ತ್ವರಿತ, ಸಮರ್ಪಕ ಅನುಷ್ಠಾನವಾಗಲಿ- ಜಿಪಂ ಸಿಇಒ ಫೌಜಿಯಾ ತರುನಮ್ ಸೂಚನೆ

    ಕುಷ್ಟಗಿ: ಬಹುಗ್ರಾಮ ಕುಡಿವ ನೀರು ಯೋಜನೆ ಅನುಷ್ಠಾನದಲ್ಲಿ ಎದುರಾದ ತಾಂತ್ರಿಕ ತೊಂದರೆಗಳನ್ನು ನಿವಾರಿಸಿ ಜನರಿಗೆ ಶೀಘ್ರ ನೀರು ಪೂರೈಸಲು ಕ್ರಮ ಕೈಗೊಳ್ಳಬೇಕಿದೆ. ಇದಕ್ಕಾಗಿ ಜಲ ಜೀವನ್ ಮಿಷನ್ ಯೋಜನೆಯನ್ನು ತ್ವರಿತವಾಗಿ ಹಾಗೂ ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕೆಂದು ಅಧಿಕಾರಿಗಳಿಗೆ ಜಿಪಂ ಸಿಇಒ ಫೌಜಿಯಾ ತರುನಮ್ ಸೂಚಿಸಿದರು.

    ತಾಲೂಕಿನ ತಳುವಗೇರಾ ಗ್ರಾಮದಲ್ಲಿ ಸೋಮವಾರ ಜಲಜೀವನ್ ಮಿಷನ್ ಕಾಮಗಾರಿ ಪರಿಶೀಲಿಸಿ ಮಾತನಾಡಿದರು. ಜಲಜೀವನ್ ಮಿಷನ್ ಕಾಮಗಾರಿ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಗುತ್ತಿಗೆದಾರರ ಸಭೆ ಕರೆದು ಮಾಹಿತಿ ಪಡೆಯಲಾಗುವುದು. ಯೋಜನೆಯಂತೆ ಕಾಮಗಾರಿ ನಡೆಯದಿದ್ದಲ್ಲಿ ಬಿಲ್ ಪಾವತಿ ತಡೆ ಹಿಡಿದು ಕ್ರಮ ಕೈಗೊಳ್ಳಲಾಗುವುದು. ನಲ್ಲಿ ಸಂಪರ್ಕದಿಂದ ಜನರಿಗೆ ನೀರು ಪೂರೈಕೆ ಆಗುವವರೆಗೆ ಸ್ಥಳೀಯ ಅಧಿಕಾರಿಗಳು ಮೇಲ್ವಿಚಾರಣೆ ನಡೆಸಬೇಕ ಎಂದು ತಾಕೀತು ಮಾಡಿದರು.

    ತಾಪಂ ಇಒ ಜಯರಾಮ್ ಚವ್ಹಾಣ್, ನೀರು ಮತ್ತು ನೈರ್ಮಲ್ಯ ಇಲಾಖೆಯ ಇಇ ಸುಬಾನ್ ಸಾಹೇಬ್, ಎಇಇ ಶ್ಯಾಮಣ್ಣ ನಾರಿನಾಳ, ಪಿಡಿಒ ಶಿವಪುತ್ರಪ್ಪ ಬರದೆಲಿ ಹಾಗೂ ಇತರ ಅಧಿಕಾರಿಗಳು, ಗುತ್ತಿಗೆದಾರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts