More

    ನರೇಗಾ ಯೋಜನೆಯಡಿ ಕೆಲಸ ನೀಡಿ

    ಕುಷ್ಟಗಿ: ನರೇಗಾ ಯೋಜನೆಯಡಿ ಕೆಲಸ ನೀಡುವುದೂ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ತಾಲೂಕಿನ ನಾಗರಾಳ ಗ್ರಾಮದ ಕೂಲಿಕಾರರು ಸಿಐಟಿಯು ನೇತೃತ್ವದಲ್ಲಿ ಗುಮಗೇರಾ ಗ್ರಾಪಂ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಿದರು.

    ಗ್ರಾಮದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದ ಕೂಲಿಕಾರರು, ನಂತರ ಗ್ರಾಪಂ ಕಚೇರಿ ಎದುರು ಧರಣಿನಿರತರಾದರು. ಬರಗಾಲ ಇರುವುದರಿಂದ ನರೇಗಾ ಯೋಜನೆಯಡಿ ಕೆಲಸ ನೀಡಿ ಕೂಲಿ ಪಾವತಿಸಿದರೆ ಗುಳೇ ಹೋಗುವುದು ತಪ್ಪುತ್ತದೆ.

    2023-2024ನೇ ಸಾಲಿನ ಆರಂಭದ ಕೆಲ ದಿನಗಳು ಮಾತ್ರ ಕೆಲಸ ನೀಡಿಲಾಗಿತ್ತು. ಅದಾದ ನಂತರ ಈವರೆಗೆ ಕೆಲಸ ನೀಡಿಲ್ಲ. ಗ್ರಾಮದಲ್ಲಿ ಕುಡಿವ ನೀರಿನ ಸಮಸ್ಯೆ ಇದೆ. ಚರಂಡಿ ವ್ಯವಸ್ಥೆ ಇಲ್ಲದೆ ಮಲಿನತೆ ಮನೆ ಮಾಡುತ್ತಿದೆ. ಹಲವು ಬಾರಿ ಸಮಸ್ಯೆ ಹೇಳಿಕೊಂಡರೂ ಗ್ರಾಪಂ ಅಧಿಕಾರಿಗಳಾಗಲಿ, ಸದಸ್ಯರಾಗಲಿ ಸ್ಪಂದಿಸುತ್ತಿಲ್ಲ ಎಂದು ಕೂಲಿಕಾರರು ದೂರಿದರು.

    ಪ್ರತಿಭಟನೆಯಲ್ಲಿ ಪ್ರಮುಖರಾದ ಕರಿಯಪ್ಪ ತಳವಾರ, ಶರಣಪ್ಪ ಅಳ್ಳಳ್ಳಿ, ಬಸಪ್ಪ ಬನ್ನಾಪುರ, ಕೋಮಾರೆಪ್ಪ ಗುಮಗೇರಾ, ಪಕ್ಕೀರಪ್ಪ ಹಳ್ಳಿ, ಯಮನೂರಪ್ಪ ಅಂಗಡಿ, ಸೋಮನಗೌಡ ಗೌಡ್ರ, ನಿಂಗಮ್ಮ ಅಂಗಡಿ, ಬಾಲಮ್ಮ ಹುಲೇಗುಡ್ಡ, ಗಂಗಮ್ಮ ಅಳ್ಳಳ್ಳಿ ಹಾಗೂ ನೂರಾರು ಕೂಲಿಕಾರರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts