More

    ವಿದ್ಯಾರ್ಥಿಗಳು ಇರುವಲ್ಲಿಗೇ ಶಿಕ್ಷಕರು!

    ವಠಾರ ಶಾಲೆಗಳಗಳಿಂದ ಅನುಕೂಲ

    ಕುಷ್ಟಗಿ: ಕರೊನಾ ಹಿನ್ನೆಲೆ ಶಾಲೆ ತೆರೆಯದ ಕಾರಣಕ್ಕೆ ಆಯಾ ಗ್ರಾಮಗಳಲ್ಲಿ ವಠಾರ ಶಾಲೆ ಆರಂಭಿಸಲಾಗಿದೆ. ಆದರೆ, ತಾಲೂಕಿನ ನವಲಹಳ್ಳಿ ಶಾಲೆಯ ಶಿಕ್ಷಕರು ವಿನೂತನ ಪ್ರಯೋಗಕ್ಕೆ ಮುಂದಾಗಿದ್ದು, ವಿದ್ಯಾರ್ಥಿಗಳು ವಾಸವಿರುವ ಗ್ರಾಮಗಳಿಗೆ ತೆರಳಿ ಪಾಠ ಮಾಡಿ ಬರುತ್ತಿದ್ದಾರೆ.

    ಸರ್ಕಾರಿ ಶಾಲೆಯಾದರೂ ಗುಣಮಟ್ಟದ ಶಿಕ್ಷಣ ದೊರೆಯುವುದೆಂಬ ಕಾರಣದಿಂದ ಸುತ್ತಲಿನ 10ಕಿಮೀ ವ್ಯಾಪ್ತಿಯ ವಿವಿಧ ಗ್ರಾಮದ ವಿದ್ಯಾರ್ಥಿಗಳು ಈ ಶಾಲೆಗೆ ದಾಖಲಾಗುತ್ತಿದ್ದಾರೆ. ಪ್ರತಿ ವರ್ಷ 300ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಲಿಯುವ ಈ ಶಾಲೆಯಲ್ಲಿ ಹಂಚಿನಾಳ, ಗುಮಗೇರಾ ಹಾಗೂ ನಂದಾಪುರ ಗ್ರಾಮಗಳಿಂದ ನೂರಾರು ವಿದ್ಯಾರ್ಥಿಗಳು ದಾಖಲಾಗುತ್ತಿದ್ದಾರೆ. ವಿದ್ಯಾರ್ಥಿಗಳಿಗೆ ಅನುಕೂಲವಾಗಲೆಂದು ಶಾಲೆಯ ಶಿಕ್ಷಕರು ಆಯಾ ಗ್ರಾಮಕ್ಕೆ ತೆರಳಿ ಬೋಧನೆ ಮಾಡುತ್ತಿದ್ದಾರೆ.

    8ನೇ ತರಗತಿಗೆ ಇನ್ನೂ ಪ್ರವೇಶ ಪ್ರಾರಂಭವಾಗಿಲ್ಲ. ಸದ್ಯ 9ನೇ ತರಗತಿಯಲ್ಲಿ 90ಹಾಗೂ 10ನೇ ತರಗತಿಯಲ್ಲಿ 128ವಿದ್ಯಾರ್ಥಿಗಳಿದ್ದಾರೆ. 10ನೇ ತರಗತಿಯ ವಿದ್ಯಾರ್ಥಿಗಳಲ್ಲಿ ಗುಮಗೇರಾ ಗ್ರಾಮದಿಂದ 40ಹಾಗೂ ಹಂಚಿನಾಳ ಗ್ರಾಮದಿಂದ 25ವಿದ್ಯಾರ್ಥಿಗಳು ಬರುತ್ತಿದ್ದಾರೆ. ಪರೀಕ್ಷೆ ದೃಷ್ಟಿಯಿಂದ ಆಯಾ ಗ್ರಾಮಕ್ಕೆ ತೆರಳಿ ಪಾಠ ಬೋಧನೆ ಮಾಡುತ್ತಿದ್ದೇವೆಂದು ಶಿಕ್ಷಕರು ಹೇಳುತ್ತಿದ್ದಾರೆ. ಬೆಳಗ್ಗೆ 9ರಿಂದ ಮಧ್ಯಾಹ್ನ 2ರವರೆಗೆ ಬೋಧನೆ ಮಾಡುವ ಶಿಕ್ಷಕರು ಗ್ರಾಮದಿಂದ ಗ್ರಾಮಕ್ಕೆ ತೆರಳಿ ವಿಷಯವಾರು ಬೋಧನೆ ಮಾಡುತ್ತಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts