More

    ಕಡ್ಡಾಯ ಹಾಜರಾತಿಗೆ ತಾಂತ್ರಿಕ ಸಮಸ್ಯೆ: ಉದ್ಯೋಗ ಖಾತ್ರಿ ಕೂಲಿಕಾರ್ಮಿಕರಿಗೆ ಎದುರಾದ ತೊಂದರೆ

    ಕುಷ್ಟಗಿ: ನರೇಗಾ ಯೋಜನೆಯಡಿ ಕೆಲಸ ಮಾಡುವ ಕೂಲಿಕಾರರ ಹಾಜರಾತಿ ಕಡ್ಡಾಯಗೊಳಿಸಲಾಗಿದೆ. ಈ ಸಂಬಂಧ ಮೊಬೈಲ್ ಆ್ಯಪ್ ಬಿಡುಗಡೆಗೊಳಿಸಿರುವ ಕೇಂದ್ರ ಸರ್ಕಾರ ಕೂಲಿಕಾರರ ಫೋಟೋ ಸಮೇತ ಹಾಜರಾತಿ ದೃಢೀಕರಿಸುವಂತೆ ಸೂಚಿಸಿದೆ. ಯೋಜನೆಯ ಪಾರದರ್ಶಕ ಅನುಷ್ಠಾನಕ್ಕೆ ಆ್ಯಪ್ ಸಹಕಾರಿಯಾಗಿದ್ದರೂ ತಾಂತ್ರಿಕ ಕಾರಣಗಳಿಂದ ಕೂಲಿಕಾರರು ತೊಂದರೆ ಎದುರಿಸುವಂತಾಗಿದೆ.

    ಈ ಮೊದಲು ಕೂಲಿಕಾರರು ಹಾಗೂ ಅವರ ಕೆಲಸದ ದಿನಗಳನ್ನು ತಂತ್ರಾಂಶದಲ್ಲಿ ಅಳವಡಿಸಿ ಕೂಲಿ ಪಾವತಿಸಲಾಗುತ್ತಿತ್ತು. ಇದರಿಂದ ಕೆಲವರು ಯೋಜನೆಯನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದರು. ಕೆಲ ಮಧ್ಯವರ್ತಿಗಳು ಕೂಲಿಕಾರರ ಜತೆ ಒಪ್ಪಂದ ಮಾಡಿಕೊಂಡು ಕೆಲವು ಕಾಮಗಾರಿಗಳಿಗೆ ಯಂತ್ರ ಬಳಸಿದರೆ ಕೆಲವೊಮ್ಮೆ ಕೆಲಸ ನಡೆಯದಿದ್ದರೂ ಕೂಲಿ ಹಣ ಪರಸ್ಪರ ಹಂಚಿಕೊಳ್ಳುತ್ತಿದ್ದರು. ಇದನ್ನು ಮನಗಂಡ ಕೇಂದ್ರ ಸರ್ಕಾರ ಜಿಪಿಎಸ್ ಆಧಾರಿತ ಹಾಜರಾತಿ ಪಡೆಯಲು ತಂತ್ರಜ್ಞಾನದ ಮೊರೆ ಹೋಗಿದೆ.

    ಯೋಜನೆಯಡಿ ಕಾಮಗಾರಿ ನಡೆಯುವ ಸ್ಥಳದಲ್ಲಿ ತಲಾ 20 ಕೂಲಿಕಾರರಂತೆ ಬೆಳಗ್ಗೆ 11ರೊಳಗೆ ಹಾಗೂ ಮಧ್ಯಾಹ್ನ 2ರ ನಂತರ ಫೋಟೋ ಸಮೇತ ಎನ್‌ಎಂಎಂಎಸ್ (ನ್ಯಾಷನಲ್ ಮೊಬೈಲ್ ಮಾನಿಟರಿಂಗ್ ಸಾಫ್ಟ್‌ವೇರ್) ತಂತ್ರಾಂಶದಲ್ಲಿ ಅಪಲೋಡ್ ಮಾಡಬೇಕಿದೆ. ತಾಂತ್ರಿಕ ಸಮಸ್ಯೆಯ ಕಾರಣದಿಂದಾಗಿ ಕಾಮಗಾರಿ ನಡೆಯುವ ಬಹುತೇಕ ಕಡೆ ಕೂಲಿಕಾರರು ತೊಂದರೆ ಅನುಭವಿಸುತ್ತಿದ್ದಾರೆ. ಹಾಜರಾತಿ ಸಿಗುವುದಿಲ್ಲ ಎಂಬ ಕಾರಣಕ್ಕೆ ಕೂಲಿಕಾರರು ಅರ್ಧಕ್ಕೆ ಕೆಲಸ ಬಿಟ್ಟು ಮನೆಗೆ ತೆರಳುತ್ತಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts