More

    ಕೃಷಿಯಲ್ಲಿ ತಂತ್ರಜ್ಞಾನ ಅಳವಡಿಸಿಕೊಳ್ಳಿ: ರೈತರಿಗೆ ಶಾಸಕ ಅಮರೇಗೌಡ ಪಾಟೀಲ್ ಬಯ್ಯಪುರ ಸಲಹೆ

    ಕುಷ್ಟಗಿ: ಸಹಾಯಧನದಡಿ ವಿತರಿಸಲಾಗುವ ಕೃಷಿ ಸಲಕರಣೆಗಳನ್ನು ರೈತರು ಸದುಪಯೋಗ ಪಡೆಯಬೇಕು ಎಂದು ಶಾಸಕ ಅಮರೇಗೌಡ ಪಾಟೀಲ್ ಬಯ್ಯಪುರ ಹೇಳಿದರು.

    ಪಟ್ಟಣದ ಪಶು ಆಸ್ಪತ್ರೆಯಲ್ಲಿ ರೈತರಿಗೆ ಮೇವು ಕತ್ತರಿಸುವ ಯಂತ್ರ ವಿತರಿಸಿ ಮಂಗಳವಾರ ಮಾತನಾಡಿದರು. ಹಾಲು ಉತ್ಪಾದಕರನ್ನು ಪ್ರೋತ್ಸಾಹಿಸಲು ಮೇವು ಕತ್ತರಿಸುವ ಯಂತ್ರ ವಿತರಿಸಲಾಗುತ್ತಿದೆ. ಶೇ.50ರ ಸಹಾಯಧನದಲ್ಲಿ ತಾಲೂಕಿನ 13 ರೈತರಿಗೆ ಯಂತ್ರ ನೀಡಲಾಗುತ್ತಿದೆ. ಜತೆಗೆ ದನಗಳ ಮ್ಯಾಟ್ ಕೂಡ ವಿತರಿಸಲಾಗಿದೆ. ಕೃಷಿಯಲ್ಲಿ ತಂತ್ರಜ್ಞಾನ ಅಳವಡಿಸಿಕೊಂಡು ಉತ್ತಮ ಆದಾಯ ಕಂಡುಕೊಳ್ಳಬೇಕಿದೆ ಎಂದರು. ಪಶು ಇಲಾಖೆಯ ಪ್ರಭಾರ ಸಹಾಯಕ ನಿರ್ದೇಶಕ ಸಿದ್ದಪ್ಪ ಚವ್ಹಾಣ್, ಪಶು ವೈದ್ಯಾಧಿಕಾರಿ ಸಂತೋಷ ಕುದರಿ, ಹಿರಿಯ ಪಶು ವೈದ್ಯ ಪರೀಕ್ಷಕ ಈರಣ್ಣ ಜೈನಾಪುರ, ಜಾನುವಾರು ಅಭಿವೃದ್ಧಿ ಅಧಿಕಾರಿ ಹನುಮಮಂತರಾಯ್ ನಾಯಕ್ ಇತರರಿದ್ದರು.

    ರೈತರಿಂದ ಆಕ್ರೋಶ ವ್ಯಕ್ತ: ಸದ್ಯ ಜಾನುವಾರುಗಳಿಗೆ ಚರ್ಮಗಂಟು ರೋಗ ಕಂಟಕವಾಗಿ ಪರಿಣಮಿಸಿದ್ದು, ಪಶು ವೈದ್ಯರಿಲ್ಲದೆ ಸಾಯುತ್ತಿವೆ. ರೋಗಪೀಡಿತ ಜಾನುವಾರುಗಳನ್ನು ಗ್ರಾಮಗಳಿಂದ ಪಟ್ಟಣಕ್ಕೆ ಕರೆತರುವುದು ಕಷ್ಟವಾಗುತ್ತಿದೆ. ಇಡೀ ತಾಲೂಕಿಗೆ ಇಬ್ಬರೇ ಪಶು ವೈದ್ಯರಿದ್ದಾರೆ. ಈ ಕುರಿತು ಸರ್ಕಾರದ ಗಮನಕ್ಕೆ ತರಬೇಕೆಂದು ಶಾಸಕರನ್ನು ರೈತರು ಆಗ್ರಹಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ಬಯ್ಯಪುರ, ಚರ್ಮಗಂಟು ರೋಗ ನಿಯಂತ್ರಣ ಹಾಗೂ ಮುಂಜಾಗ್ರತೆಗೆ ಸರ್ಕಾರ ಕ್ರಮ ಕೈಗೊಂಡಿದೆ. ಪಶು ವೈದ್ಯಕೀಯ ಪದವಿ ಪಡೆದವರು ಬೇರೆ ವೃತ್ತಿ ಅರಸಿ ಹೋಗುತ್ತಿದ್ದಾರೆ. ಇದರಿಂದ ಸಮಸ್ಯೆಯಾಗುತ್ತಿದೆ ಎಂದು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts