More

    ಕೂಲಿ ಕಾರ್ಮಿಕರ ಗುಳೆ ತಡೆಗೆ ಕ್ರಿಯಾಯೋಜನೆ ಸಿದ್ಧತೆ: ಶಾಸಕ ಜೆ ಎನ್. ಗಣೇಶ್ ಹೇಳಿಕೆ

    ಕುರುಗೋಡು: ಬೇಸಿಗೆಯಲ್ಲಿ ಹಳ್ಳಿ ಜನರು ಗುಳೆ ಹೋಗದಂತೆ ಸ್ಥಳೀಯವಾಗಿ ಕೆಲಸ ನೀಡಲು ನರೇಗಾದಡಿ ಕ್ರಿಯಾಯೋಜನೆ ರೂಪಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಶಾಸಕ ಜೆ ಎನ್.ಗಣೇಶ್ ಹೇಳಿದರು.

    ತಾಲೂಕಿನ ಗೆಣಿಕೆಹಾಳು ಗ್ರಾಮದಲ್ಲಿ ಅಟಲ್ ಜೀ ಜನಸ್ನೇಹಿ ಕೇಂದ್ರ ಕಟ್ಟಡ ನಿರ್ಮಾಣ ಕಾಮಗಾರಿಗೆ ಗುರುವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ಕಳೆದ ವರ್ಷ ಬೇಸಿಗೆಯಲ್ಲಿ ಕರೊನಾ ಪರಿಣಾಮ ಉದ್ಯೋಗವಿಲ್ಲದೆ ಕಾರ್ಮಿಕರು ತೊಂದರೆಗೆ ಸಿಲುಕಿದ್ದರು. ಈ ಬಾರಿ ಕಾರ್ಮಿಕರು ದುಡಿಯುವ ಹುಮ್ಮಸ್ಸಿನಲ್ಲಿದ್ದಾರೆ. ಸ್ಥಳೀಯವಾಗಿ ಉದ್ಯೋಗ ನೀಡಲು ಎಲ್ಲ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಸ್ಥಳೀಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

    ತಾಪಂ ಇಒ ಮಡಗಿನ ಬಸಪ್ಪ ಮಾತನಾಡಿ, ಬೇಸಿಗೆಯಲ್ಲಿ ಸ್ಥಳೀಯವಾಗಿ ಉದ್ಯೋಗ ನೀಡಲು ಖಾತ್ರಿ ಯೋಜನೆಯಲ್ಲಿ ಸಿದ್ಧತೆ ಮಾಡಿಕೊಳ್ಳಲಾಗಿದೆ. ದಮ್ಮೂರು, ಹಂದ್ಯಾಳು, ಶ್ರೀಧರಗಟ್ಟೆ ಗ್ರಾಮಗಳಲ್ಲಿ ಗ್ರಾಪಂ ಕಟ್ಟಡಗಳ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿವೆ. ಮುಂದಿನ ದಿನಗಳಲ್ಲಿ ಗೆಣಿಕೆಹಾಳು, ಯರಿಂಗಳಿಗಿ ಹಾಗೂ ಸೋಮಸಮುದ್ರ ಗ್ರಾಮಗಳಲ್ಲಿ ಗ್ರಾಪಂ ಕಚೇರಿ ಕಟ್ಟಡ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ ಎಂದರು. ಮುಖಂಡರಾದ ಕುರಿ ಪಂಪಣ್ಣ, ರಾಜಾಸಾಬ್, ಎನ್.ದೊಡ್ಡಬಸಪ್ಪ, ಎನ್.ಶೇಖರ್, ಕ್ಯಾದಿಗೆಹಾಳು ಶೇಖರ್, ಕೆ.ಸಿದ್ದರಾಮಪ್ಪ, ಅಬ್ದುಲ್‌ಸಾಬ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts