More

    ಹಾಳಾದ ಫಸಲಿಗೆ ಕೂಡಲೇ ಪರಿಹಾರ ಕೊಡಿ: ತುಂಗಭದ್ರಾ ರೈತ ಸಂಘ ಮನವಿ

    ಕುರುಗೋಡು: ಮಳೆಗೆ ಹಳ್ಳ ಕೊಳ್ಳಗಳು ತುಂಬಿ ಹೆಚ್ಚಿನ ಹೊಲ ಗದ್ದೆಗಳಿಗೆ ಹರಿದು ಬೆಳೆಗಳು ಸಂಪೂರ್ಣ ಹಾಳಾಗಿದ್ದು, ತಕ್ಷಣ ಪರಿಹಾರ ನೀಡಬೇಕೆಂದು ಒತ್ತಾಯಿಸಿ ತಹಸೀಲ್ದಾರ್ ರಾಘವೇಂದ್ರರಾವ್‌ಗೆ ಮನವಿ ಸಲ್ಲಿಸಿತು.

    ಸಂಘದ ಜಿಲ್ಲಾಧ್ಯಕ್ಷ ದರೂರು ಪುರುಷೋತ್ತಮ ಗೌಡ ಮಾತನಾಡಿ, ಅಪಾರ ಮಳೆಗೆ ನೀರು ಹರಿದು ಬಂದು ತಾಲೂಕಿನ ಅನೇಕ ಹಳ್ಳಿಗಳ ಎಲ್ಲ ಬೇಳೆಗಳು ಹಾಳಾಗಿವೆ. ಮೆಣಸಿನ ಗಿಡ, ಹತ್ತಿ, ಭತ್ತ, ಸೂರ್ಯಕಾಂತಿ, ಮೆಕ್ಕೆಜೋಳ, ಬೆಳೆಗಳು ಹಾನಿಗೀಡಾಗಿವೆ. ಮನೆಗಳು ಬಿದ್ದಿವೆ. ಸಿಡಿಲಿನಿಂದ ದನ, ಕರುಗಳು, ಕುರಿ, ಮೇಕೆಗಳು ಸತ್ತಿವೆ, ಹಾನಿಗೀಡಾದ ಸಂಪೂರ್ಣ ಮಾಹಿತಿಯನ್ನು ಸರ್ಕಾರಕ್ಕೆ ಒಪ್ಪಿಸಿ ವಿಶೇಷ ಪರಿಹಾರವನ್ನು ರೈತರಿಗೆ ಕೊಡಿಸಬೇಕು ಎಂದು ಒತ್ತಾಯಿಸಿದರು.

    ತಾಲೂಕು ಅಧ್ಯಕ್ಷ ಮುಷ್ಟಗಟ್ಟೆ ಭೀಮನಗೌಡ ಮಾತನಾಡಿ, ಮಳೆಯಿಂದ ಹಾಳಾಗಿರುವ ಸಂಪರ್ಕ ರಸ್ತೆಗಳು, ಬಿದ್ದಿರುವ ವಿದ್ಯುತ್ ಕಂಬಗಳು, ಕುರುಗೋಡು ಗೆಣಿಕೆಹಾಳು ರಸ್ತೆಯ ಎಲ್‌ಎಲ್‌ಸಿ ಕಾಲುವೆ ಸೇತುವೆಗೆ ಬಿದ್ದಿರುವ ರಂಧ್ರ. ಆಯಾ ಇಲಾಖೆಗಳ ಮುಖಾಂತರ ಶೀಘ್ರವೇ ಇವುಗಳನ್ನೆಲ್ಲ ಅಭಿವೃದ್ಧಿಪಡಿಸಬೇಕು ಎಂದು ಒತ್ತಾಯಿಸಿದರು.

    ಸಂಘದ ಪದಾಧಿಕಾರಿಗಳಾದ ಗೆಣಿಕೆಹಾಳ್ ಶರಣನಗೌಡ, ಉ.ಒ.ಬಸಯ್ಯ ಸ್ವಾಮಿ, ಪಂಪಾಪತಿ, ಕಗ್ಗಲ್ ಮಲ್ಲಾರೆಡ್ಡಿ, ಮೂಗ್ತಿ ಮಹೇಶ್‌ಗೌಡ, ಪ್ರಭುಗೌಡ, ಎಚ್.ವೀರಾಪುರ ಬಸವರಾಜ್ ಗೌಡ, ಖಾಜಾಸಾಬ್, ಮಾರುತಿ ಕ್ಯಾಂಪ್ ಮಾರುತಿರಾವ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts