More

    ಸಾಂತ್ವನ ಹೇಳುವುದು ಎಲ್ಲರ ಜವಾಬ್ದಾರಿ ಎಂದ ಡಿವೈಎಸ್ಪಿ ಎಂ.ಜಿ.ಸತ್ಯನಾರಾಯಣ ರಾವ್

    ಕರೊನಾದಿಂದ ಮೃತಪಟ್ಟ ಕುಟುಂಬಗಳಿಗೆ ಪಡಿತರ ಕಿಟ್

    ಕುರುಗೋಡು: ತಾಲೂಕಿನಲ್ಲಿ ಕರೊನಾದಿಂದ ಮೃತಪಟ್ಟವರ 40 ಕುಟುಂಬಗಳ ಸದಸ್ಯರಿಗೆ ಮಲಬಾರ್ ಗೋಲ್ಡ್ ಸಂಸ್ಥೆ ಹಾಗೂ ಸನ್ಮಾರ್ಗ ಗೆಳೆಯರ ಬಳಗದ ವತಿಯಿಂದ ಶುಕ್ರವಾರ ಪಡಿತರ ಕಿಟ್‌ಗಳನ್ನು ವಿತರಿಸಲಾಯಿತು.

    ಪಟ್ಟಣದ ಪೊಲೀಸ್ ಠಾಣೆ ಆವರಣದಲ್ಲಿ ಏರ್ಪಡಿಸಿದ್ದ ಪಡಿತರ ಕಿಟ್‌ಗಳ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳ್ಳಾರಿ ಗ್ರಾಮೀಣ ವಲಯದ ಡಿವೈಎಸ್ಪಿ ಎಂ.ಜಿ.ಸತ್ಯನಾರಾಯಣ ರಾವ್, ಮೃತಪಟ್ಟ ವ್ಯಕ್ತಿಗಳನ್ನು ಮತ್ತೆ ತಂದುಕೊಡಲು ಯಾರಿಂದಲೂ ಸಾಧ್ಯವಿಲ್ಲ. ಆದರೆ, ಅವಲಂಬಿತರಿಗೆ ಸಾಂತ್ವನ ಹೇಳಬೇಕಾದ ಜವಾಬ್ದಾರಿ ಎಲ್ಲರ ಮೇಲಿದೆ. ಮಲಬಾರ್‌ಗೋಲ್ಡ್ ಹಾಗೂ ಸನ್ಮಾರ್ಗ ಗೆಳೆಯರ ಬಳಗ ಸದಸ್ಯರು ಸಾಂತ್ವನದ ಜತೆಗೆ ಪಡಿತರ ಕಿಟ್‌ಗಳನ್ನು ವಿತರಿಸಿರುವುದು ಉತ್ತಮ ಕಾರ್ಯ ಎಂದು ಶ್ಲಾಘಿಸಿದರು.

    ತಹಸೀಲ್ದಾರ್ ಕೆ.ರಾಘವೇಂದ್ರ ರಾವ್ ಮಾತನಾಡಿ, ಕರೊನಾದಿಂದ ಮೃತಪಟ್ಟ ವ್ಯಕ್ತಿಯ ಕುಟುಂಬದ ಅವಲಂಬಿತರಿಗೆ ಸರ್ಕಾರದಿಂದ 1 ಲಕ್ಷ ರೂ. ಪರಿಹಾರ ನೀಡಲಾಗುವುದು. ಅಗತ್ಯ ದಾಖಲೆ ಸಲ್ಲಿಸಿ ಯೋಜನೆಯ ಸದುಪಯೋಗ ಪಡಿಸಿಕೊಳ್ಳಬೇಕು. ಎರಡನೇ ಅಲೆ ಮುಗಿದು ಮೂರನೇ ಅಲೆ ಪ್ರಾರಂಭಗೊಂಡಿದೆ. ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸಿ ಅಂತರ ಕಾಪಾಡಿಕೊಂಡು ಸೋಂಕಿನಿಂದ ರಕ್ಷಣೆ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು. ಮಲಬಾರ್‌ಗೋಲ್ಡ್ ಸಂಸ್ಥೆಯ ಮಾರುಕಟ್ಟೆ ವ್ಯವಸ್ಥಾಪಕ ಸುರೇಶ್ ಕುಮಾರ್, ಮುಖ್ಯ ಶಿಕ್ಷಕ ಮೆಹತಾಬ್ ಮಾತನಾಡಿದರು.ಗ್ರೇಡ್-2 ತಹಸೀಲ್ದಾರ್ ಮಲ್ಲೇಶಪ್ಪ, ಸಿಪಿಐ ಚಂದನ್‌ಗೋಪಾಲ್, ಪಿಎಸ್‌ಐ ಮೌನೇಶ್ ಯು.ರಾಥೋಡ್, ಶಾಂತಪ್ಪ, ಸನ್ಮಾರ್ಗ ಗೆಳೆಯರ ಬಳಗದ ಸದಸ್ಯರಾದ ಚಂದ್ರಶೇಖರ್ ಆಚಾರಿ, ಎರಿಸ್ವಾಮಿ, ವಾಗೀಶ್ ಆಶಾಪುರ, ಚೇಗೂರು ಷಣ್ಮುಖ, ಜಿ. ಮಂಜುನಾಥ, ಎಚ್.ಹುಸೇನ್ ಬಾಷಾ, ಮೌಲಾಲಿ, ಬಾಷಾ, ಪಂಪಾಪತಿ, ರುಕ್ಮಾಂಗದ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts