More

    ಹಾಳಾಗುತ್ತಿದೆ ಕಟಾವು ಮಾಡಿದ ಬೆಳೆ

    ಕುರುಗೋಡು: ಕಳೆದ ಮೂರ್ನಾಲ್ಕು ದಿನಗಳಿಂದ ಸುರಿಯುತ್ತಿರುವ ಮಳೆ ಕಾಟಕ್ಕೆ ಕಟಾವು ಮಾಡಿದ ಬೆಳೆಗಳು ಹಾಳಾಗುತ್ತಿವೆ. ಇವನ್ನು ಉಳಿಸಿಕೊಳ್ಳಲು ರೈತರು ಇನ್ನಿಲ್ಲದ ಹರಸಾಹಸ ಪಡುತ್ತಿದ್ದಾರೆ. ಉತ್ತಮ ಬೆಲೆ ಕಾರಣಕ್ಕೆ ಭತ್ತ ಕಟಾವು ಮಾಡಿ, ರಾಶಿ ಹಾಕಲಾಗಿದೆ. ಸತತ ಮಳೆಗೆ ತಾಡಪಾಲಿನಿಂದ ರಕ್ಷಿಸಿದ್ದಾರೆ. ಆದರೆ, ಮಳೆಯ ರಭಸಕ್ಕೆ ತಾಡಪಾಲು ಒಳಗೆ ಮಳೆ ನೀರು ಹೊಕ್ಕು ಭತ್ತ ಹಾಗೂ ಮೆಕ್ಕೆಜೋಳ ರಾಶಿ ಹಾಳಾಗುತ್ತಿವೆ.

    ಕಳೆದ ಮೂರು ತಿಂಗಳಿಂದ ಹವಾಮಾನ ವೈಪರಿತ್ಯದಿಂದಾಗಿ ಮೆಣಸಿನಕಾಯಿ ಬೆಳೆಗೆ ಬ್ಲಾಕ್ ಥ್ರಿಬ್ಸ್ ಜತೆ ಎಲೆ ಮುದುರು ರೋಗದಿಂದಾಗಿ ಗಿಡಗಳು ಸಂಪೂರ್ಣ ಹಾಳಾಗಿದ್ದು, ಬೆಳೆ ಕಾಪಾಡಲು ರೈತರು ಎಲ್ಲ ಬಗೆಯ ಕೀಟ ನಾಶಕ ಸಿಂಪರಣೆ ಮಾಡಿದ್ದಾರೆ. ಆದರೂ ಹತೋಟಿ ಸಿಗದೆ ಕೆಲ ರೈತರು ಬೆಳೆ ನಾಶ ಮಾಡಿದ್ದರು. ಪರ್ಯಾಯವಾಗಿ ಮೆಕ್ಕೆಜೋಳ, ಜೋಳ, ಉದ್ದು, ಶೇಂಗಾದಂತಹ ಅಲ್ಪಾವಧಿ ಬೆಳೆ ಬಿತ್ತನೆ ಮಾಡಲಾಗಿದೆ. ಈಗ ಸುರಿಯುತ್ತಿರುವ ಸತತ ಮಳೆಗೆ ಮೊಳಕೆ ಬಂದ ಸಸಿಗಳು ತೇವಾಂಶ ಹೆಚ್ಚಾಗಿ ಬೇರು ಕೊಳೆತು ಸಸಿಗಳು ಸಾಯುವ ಆತಂಕದಲ್ಲಿ ರೈತರಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts