More

    ವಿಷ ಪೂರಿತ ನೀರು ಪೂರೈಕೆಗೆ ಸದಸ್ಯರ ಆಕ್ರೋಶ ; ಕುಣಿಗಲ್ ತಾಪಂ ಸಾಮಾನ್ಯ ಸಭೆಯಲ್ಲಿ ಅಧಿಕಾರಿಗಳ ಕಾರ್ಯವೈಖರಿಗೆ ಗರಂ

    ಕುಣಿಗಲ್: ಖಾತಾ ನಕಲು, ತೆರಿಗೆ ವಸೂಲಿ, ಟೆಂಡರ್ ಪ್ರಕ್ರಿಯೆ, ಜನರಿಗೆ ವಿಷ ಪೂರಿತ ಕುಡಿಯುವ ನೀರು ಪೂರೈಕೆ ಸಂಬಂಧ ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡಿದ್ದಲ್ಲದೆ, ಸದಸ್ಯ ಕೋಟೆ ನಾಗಣ್ಣ ಸಭಾತ್ಯಾಗ ಮಾಡಿದರು.

    ಇಲ್ಲಿನ ತಾಪಂ ಸಭಾಂಗಣದಲ್ಲಿ ಅಧ್ಯಕ್ಷ ಎಸ್.ಕೆ. ನಾಗೇಂದ್ರ ಅಧ್ಯಕ್ಷತೆಯಲ್ಲಿ ಮಂಗಳವಾರ ಏರ್ಪಾಡಾಗಿದ್ದ ಪುರಸಭೆ ಸಾಮಾನ್ಯ ಸಭೆಯಲ್ಲಿ ಕಂಡು ಬಂದ ದೃಶ್ಯಗಳು ಇವು. ದೊಡ್ಡಕೆರೆ ಶುದ್ಧಕುಡಿಯುವ ನೀರಿನ ಘಟಕದಲ್ಲಿ ಶುದ್ಧೀಕರಿಸದೆ ನೀರನ್ನು ಪಟ್ಟಣದ 23 ವಾರ್ಡ್‌ನ ಜನರಿಗೆ ಪೂರೈಕೆ ಮಾಡಲಾಗುತ್ತಿದೆ. ಕಲುಷಿತ ನೀರು ಕುಡಿದ ನಾಗರೀಕರು ನಾನಾ ಆನಾರೋಗ್ಯ ಸಮಸ್ಯೆಗೆ ತುತ್ತಾಗುತ್ತಿದ್ದಾರೆ. ಈ ಬಗ್ಗೆ ಕ್ರಮ ಕೈಗೊಳ್ಳಲು ಪುರಸಭಾ ಆಡಳಿತ ವಿಲವಾಗಿದೆ ಎಂದು ಆರೋಪಿಸಿದ ಸದಸ್ಯ ಕೋಟೆ ನಾಗಣ್ಣ ಸಭೆಯ ಸೂಚನಾಪತ್ರ ಎಸೆದು ಸಭಾತ್ಯಾಗ ಮಾಡಿದರು.

    ಬೀದಿದೀಪ ನಿರ್ವಹಣೆ ಸಂಬಂಧ ಇನ್ನೂ ಆರು ತಿಂಗಳ ಅವಧಿಗೆ ಗಜಾನನ ಎಲೆಕ್ಟ್ರಿಕಲ್ಸ್ ಅವರನ್ನೇ ಮುಂದುವರಿಸುವಂತೆ ಸ್ಥಾಯಿ ಸಮಿತಿ ಸಭೆಯಲ್ಲಿ ತಿರ್ಮಾನಿಸಿ ಠರಾವು ಅಂಗೀಕರಿಸಲಾಗಿತ್ತು. ಆದರೆ ಅಧಿಕಾರಿಗಳು ಇದನ್ನು ದಿಕ್ಕರಿಸಿ ಹೊಸದಾಗಿ ಟೆಂಡರ್ ಕರೆದು, ಸದಸ್ಯರ ಗೌರವಕ್ಕೆ ದಕ್ಕೆ ತಂದಿದ್ದಾರೆ ಎಂದು ಸದಸ್ಯ ರಂಗಸ್ವಾಮಿ ಕಿಡಿಕಾರಿದರು.

    ಇದಕ್ಕೆ ಪ್ರತಿಕ್ರಿಯಿಸಿದ ಸಿಇಒ ರವಿಕುಮಾರ್ ಕೆಪಿಟಿಪಿ ಕಾಯ್ದೆ ಅನ್ವಯ ಸ್ಥಾಯಿ ಸಮಿತಿ ಸಭೆಯಲ್ಲಿ ಅನುಮೋದನೆ ಪಡೆದು 126 ಕೊಳವೆಬಾವಿ ದುರಸ್ತಿ ಹಾಗೂ ಬೀದಿದೀಪ ನಿರ್ವಹಣೆ ಟೆಂಡರ್ ಅನ್ನು ಕರೆಯಲಾಗಿದೆ. ಸದಸ್ಯರ ಗೌರವಕ್ಕೆ ದಕ್ಕೆ ಉಂಟು ಮಾಡುವ ಯಾವುದೇ ಕೆಲಸ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.

    ಸದಸ್ಯರನ್ನು ಅಧಿಕಾರಿಗಳು ಕೀಳಾಗಿ ಕಾಣುತ್ತಿದ್ದಾರೆ. ವಾರ್ಡ್‌ನ ನಿವಾಸಿಗಳು ಖಾತಾ ನಕಲು ಕೇಳಿದರೆ ಕಾನೂನು ಸಬೂಬು ಹೇಳುತ್ತಾರೆ. ಆದರೆ ದಳ್ಳಾಳಿಗಳಿಂದ ಹಣ ಪಡೆದು ಅವರಿಗೆ ಖಾತಾ ನಕಲು ಹಾಗೂ ಎನ್‌ಒಸಿ ಮಾರಾಟ ಮಾಡುತ್ತಿದ್ದಾರೆ ಎಂದು ಸದಸ್ಯರಾದ ಬಿ.ಎನ್.ಅರುಣ್‌ಕುಮಾರ್, ಕೆ.ಎಸ್. ಕೃಷ್ಣ, ಶ್ರೀನಿವಾಸ್, ದೇವರಾಜ್, ರಾಮಣ್ಣ ಆಕ್ರೋಶ ವ್ಯಕ್ತಪಡಿಸಿದರು.

    ಸಿಇಒಗೆ ಅಧಿಕಾರ:ನಿಯಮಾನುಸಾರವಾಗಿ ಆಸ್ತಿದಾರರಿಗೆ ಖಾತಾ ನಕಲು ನೀಡಲು ಮುಖ್ಯಾಧಿಕಾರಿ ಅವರಿಗೆ ಸಭೆ ಸಂಪೂರ್ಣ ಅಧಿಕಾರ ನೀಡಿ ಠರಾವು ಅಂಗೀಕರಿಸಲಾಯಿತು.

    ಅನುಮತಿ ನೀಡಲು ನಕಾರ:ಪಟ್ಟಣದ ಒಳಚರಂಡಿ ನಿರ್ಮಾಣದ 2ನೇ ಹಂತದ ಕಾಮಗಾರಿಗೆ ಅನುಮೋದನೆ ನೀಡುವಂತೆ ಯುಜಿಡಿ ಎಇಇ ಸಿದ್ದನಂಜಯ್ಯ ಸದಸ್ಯರಲ್ಲಿ ಮನವಿ ಮಾಡಿದರು. ಇದನ್ನು ತಿರಸ್ಕರಿಸಿದ ಸದಸ್ಯರು ಈ ಸಂಬಂಧ ಮುಂದಿನ ಸಭೆಯಲ್ಲಿ ಕ್ರಮಕೈಗೊಳ್ಳುವುದ್ದಾಗಿ ತಿಳಿಸಿದರು.

    ರಾಜೀನಾಮೆ ನೀಡಿ:ಮಜಲೀಸೆ ಶೂರಾ ಕಮಿಟಿಗೆ ಸೇರಿರುವ 125 ಅಂಗಡಿಗಳಿಂದ ಕಮಿಟಿಯವರು ಪ್ರತಿ ವರ್ಷ 90 ಲಕ್ಷ ರೂಪಾಯಿ ಬಾಡಿಗೆ ವಸೂಲಿ ಮಾಡುತ್ತಿದ್ದಾರೆ. ಶೇ.10ರಂತೆ ಲೆಕ್ಕ ಹಾಕಿದರೆ 9 ಲಕ್ಷ ರೂಪಾಯಿ ಪುರಸಭೆಗೆ ಕಂದಾಯ ಕಟ್ಟಬೇಕು. ಆದರೆ, ಕೇವಲ 75 ಸಾವಿರ ರೂಪಾಯಿ ಕಂದಾಯ ಪಾವತಿಸುತ್ತಿದ್ದಾರೆ. ಹಾಗೂ ಕುಣಿಗಲ್ ಕುದುರೆ ಾರ್ಮ್‌ನಿಂದ 4 ಕೋಟಿ ರೂಪಾಯಿ ಕಂದಾಯ ಬಾಕಿ ಬರಬೇಕಾಗಿದೆ. ಕಂದಾಯ ವಸೂಲಿ ಮಾಡಲು ಆಗದಿದ್ದರೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಎಂದು ಅಧ್ಯಕ್ಷ ಎಸ್.ಕೆ.ನಾಗೇಂದ್ರ, ಸ್ಥಾಯಿ ಸಮಿತಿ ಅಧ್ಯಕ್ಷ ಸಮಿಉಲ್ಲಾ ಅವರನ್ನು ಸದಸ್ಯ ಕೆ.ಎಸ್.ಕೃಷ್ಣ ಆಗ್ರಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts