More

    ಠಾಣೆ ಮೆಟ್ಟಿಲೇರಿದ ಹಣ ಹಂಚಿಕೆ ವಿಚಾರ ; ಪುರಸಭೆ ಸದಸ್ಯರಿಗೆ ತಲಾ 3 ಲಕ್ಷ ರೂ.! ; ಕುಣಿಗಲ್ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷೆ ಜಟಾಪಟಿ

    ಕುಣಿಗಲ್ :ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಚುನಾವಣೆ ವೇಳೆ ಸದಸ್ಯರ ಬೆಂಬಲ ಪಡೆದುಕೊಳ್ಳಲು ಹಂಚಿಕೆ ವಾಡಿದ ಹಣದ ವಿಚಾರ ಇದೀಗ ಠಾಣೆ ಮೆಟ್ಟಿಲೇರಿದೆ.

    ಪುರಸಭೆ ಅಧ್ಯಕ್ಷ ಎಸ್.ಕೆ.ನಾಗೇಂದ್ರ ಹಾಗೂ ಉಪಾಧ್ಯಕ್ಷೆ ಮಂಜುಳಾ ರಂಗಪ್ಪ ನಡುವೆ ಹಣದ ವ್ಯವಹಾರಕ್ಕೆ ಜಟಾಪಟಿ ನಡೆದಿದ್ದು, ಮಂಜುಳಾ ರಂಗಪ್ಪ ಸುಮಾರು 11 ಲಕ್ಷ ರೂಪಾಯಿ ಪಡೆದುಕೊಂಡು ಈಗ ವಾಪಸ್ ನೀಡಲು ನಿರಾಕರಿಸುತ್ತಿದ್ದಾರೆ ಎಂದು ಎಸ್.ಕೆ.ನಾಗೇಂದ್ರ ಪೊಲೀಸರಿಗೆ ದೂರು ನೀಡಿದ್ದಾರೆ. ಇದರಿಂದ ಪುರಸಭೆಯಲ್ಲಿ ಕಾಂಗ್ರೆಸ್ ಸದಸ್ಯರ ನಡುವೆಯೇ ಹೊಂದಾಣಿಕೆ ಇಲ್ಲದೆ ಠಾಣೆ ಮೆಟ್ಟಿಲೇರಿರುವುದು ಕಾಂಗ್ರೆಸ್‌ಗೆ ಮುಖಭಂಗ ಅನುಭವಿಸುವ ಪರಿಸ್ಥಿತಿ ನಿರ್ವಾಣವಾಗಿದೆ.

    ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯಲ್ಲಿ ಹಿರಿಯ ಸದಸ್ಯರಾದ ರಂಗಸ್ವಾಮಿ, ಅರುಣ್ ಕುವಾರ್ ಹಾಗೂ ಮೊದಲ ಬಾರಿ ಗೆಲುವು ಸಾಧಿಸಿದ್ದ ಎಸ್.ಕೆ.ನಾಗೇಂದ್ರ ಅವರು ಅಧ್ಯಕ್ಷ ಸ್ಥಾನದ ರೇಸ್‌ನಲ್ಲಿ ಇದ್ದರು. ಉಪಾಧ್ಯಕ್ಷ ಸ್ಥಾನದಲ್ಲಿ ಮಂಜುಳಾ ರಂಗಪ್ಪ ಸೇರಿ ಇತರರು ಇದ್ದರು.

    ಈ ವೇಳೆ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಹಾಲಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರು ಹೊಂದಾಣಿಕೆ ವಾಡಿಕೊಂಡು ಸದಸ್ಯರ ಬೆಂಬಲ ಪಡೆದುಕೊಳ್ಳಲು 14 ಕಾಂಗ್ರೆಸ್ ಸದಸ್ಯರಿಗೂ ತಲಾ 3 ಲಕ್ಷ ರೂಪಾಯಿ ಹಣದ ಆಮಿಷ ನೀಡಿ ಹಣ ಹಂಚಿಕೆ ವಾಡಿದ್ದರು ಎನ್ನಲಾಗಿದೆ. ಈ ವೇಳೆ ಎಲ್ಲ ಹಣವನ್ನೂ ಹಾಲಿ ಅಧ್ಯಕ್ಷರೇ ಹಂಚಿಕೆ ವಾಡಿದ್ದರು. ನಂತರ ತಮ್ಮ ಪಾಲಿನ ಹಣ ನೀಡುವುದಾಗಿ ಉಪಾಧ್ಯಕ್ಷೆ ಮಂಜುಳಾ ರಂಗಪ್ಪ ವಾತುಕೊಟ್ಟಿದ್ದರು ಎನ್ನಲಾಗಿದೆ.

    ಚುನಾವಣೆ ಮುಗಿದು 6 ತಿಂಗಳು ಕಳೆದ ನಂತರ ಅಧ್ಯಕ್ಷ ಎಸ್.ಕೆ.ನಾಗೆಂದ್ರ, ಉಪಾಧ್ಯಕ್ಷೆಯನ್ನು ಹಣ ಕೇಳಿದ್ದು, ಉಪಾಧ್ಯಕ್ಷೆ ಹಣ ನೀಡಲು ನಿರಾಕರಿಸಿದ್ದರಿಂದ ಕುಪಿತಗೊಂಡ ನಾಗೇಂದ್ರ ಪೊಲೀಸರಿಗೆ ದೂರು ನೀಡಿದ್ದಾರೆ. ಈ ನಿಟ್ಟಿನಲ್ಲಿ ಪುರಸಭೆ ಉಪಾಧ್ಯಕ್ಷೆ ಮಂಜುಳಾ ರಂಗಪ್ಪ ಅವರ ಪುತ್ರ ಸುನೀಲ್ ಅವರನ್ನು ಪೊಲೀಸರು ಠಾಣೆೆಗೆ ಕರೆಸಿ ವಿಚಾರಣೆ ನಡೆಸಿದ್ದಾರೆ. ಇದರ ನಡುವೆ ಹಣ ಹಂಚಿಕೆ ವಿಚಾರದಲ್ಲಿ ಅಧ್ಯಕ್ಷ ಎಸ್.ಕೆ.ನಾಗೇಂದ್ರ ಹಣ ನೀಡಿರುವುದು ಸತ್ಯ ಎಂದು ಸದಸ್ಯರಾದ ದೇವರಾಜು ಹಾಗೂ ನಾಗರಾಜು ಠಾಣಿಗೆ ಖುದ್ದು ಭೇಟಿ ನೀಡಿ ಸಾಕ್ಷ್ಯ ನೀಡಿರುವುದು ಪ್ರಕರಣಕ್ಕೆ ಪೂರಕಾಗಿದೆ. ಇದಲ್ಲದೇ ಈ ವಿಚಾರ ಶಾಸಕ ಡಾ.ರಂಗನಾಥ್ ಗಮನಕ್ಕೆ ಹೋಗಿ ಕಾಂಗ್ರೆಸ್ ವಾನ ಕಳೆಯಲು ಈ ರೀತಿ ವಾಡಿತ್ತಿದ್ದೀರಾ ಎಂದು ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷೆ ಅವರನ್ನು ತರಾಟೆ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts