More

    ಸಮುದ ತೀರ ಮಲಿನ

    ಕುಂದಾಪುರ: ಒಂದು ಕಡೆ ಯುವ ಸಂಘಟನೆಗಳು ಸಮುದ್ರ ತೀರ, ಪರಿಸರ ಸ್ವಚ್ಛತೆಯಂಥ ಸತ್ಕಾರ್ಯಗಳನ್ನು ಮಾಡುತ್ತಿದ್ದರೆ, ಇನ್ನೊಂದೆಡೆ ಯುವಕರು ಕಡಲ ತೀರದಲ್ಲಿ ಮೋಜುಮಸ್ತಿ ಮಾಡಿ ಮದ್ಯದ ಬಾಟಲಿಗಳನ್ನು ಎಲ್ಲೆಂದರಲ್ಲಿ ಎಸೆದು ತ್ಯಾಜ್ಯದ ಕೊಂಪೆ ಮಾಡುತ್ತಿದ್ದಾರೆ. ಈ ತ್ಯಾಜ್ಯದಿಂದ ಜಲಚರಗಳ ಪ್ರಾಣಕ್ಕೂ ಸಂಚುಕಾರ ಬರುತ್ತಿರುವುದು ನಾಗರಿಕರು ತಲೆ ತಗ್ಗಿಸುವ ವಿಚಾರ.
    ಎಲ್ಲೆಲ್ಲಿಂದಲೋ ಬರುವ ಪ್ರವಾಸಿಗರು, ಸ್ಥಳೀಯ ಯುವಕರ ಬೇಜವಾಬ್ದಾರಿಗೆ ಕರಾವಳಿ ತೀರ ಸಾಕ್ಷಿಯಾಗುತ್ತಿದೆ. ಸಮುದ್ರ ತೀರದಲ್ಲಿ ಬೀಳುವ ಪ್ಲಾಸ್ಟಿಕ್ ನೀರಿನ ಬಾಟಲಿ, ಕ್ವಾರ್ಟರ್‌ಗಳ ತೊಟ್ಟೆ, ಮದ್ಯದ ಬಾಟಲಿಗಳ ರಾಶಿ, ಆಹಾರ ಪದಾರ್ಥ ಕಟ್ಟಿ ತಂದ ಪ್ಲಾಸ್ಟಿಕ್ ತೊಟ್ಟೆಗಳು ಬೀಚನ್ನು ಕುಲಗೆಡಿಸುತ್ತಿವೆ. ಪ್ಲಾಸ್ಟಿಕ್ ನಿಷೇಧ ಎಂಬುದು ಪುಸ್ತಕದಲ್ಲಿ ಬದನೆಕಾಯಿ. ಸಮುದ್ರ ಸೇರುವ ಪ್ಲಾಸ್ಟಿಕ್ ಚೀಲಗಳು ಮೀನಗಳ ಹೊಟ್ಟೆ ಸೇರಿದರೆ, ಕಡಲ ತೀರಕ್ಕೆ ಬರುವ ಆಮೆಗಳಿಗೆ ಬಾಟಲಿ ತುಂಡು ಪ್ರಾಣಕ್ಕೆ ಎರವಾಗುತ್ತಿದ

    ನೀರಲ್ಲಿ ಹೋಮ
    ಪರಿಸರ ಮಾಲಿನ್ಯ ತಡೆಯಲು ಕೆಲಸ ಮಾಡುವ ತಂಡವೇ ಕುಂದಾಪುರ ತಾಲೂಕಿನಲ್ಲಿದ್ದು, ಪ್ರತಿ ಭಾನುವಾರ ಕಡಲ ತೀರದ ಸ್ವಚ್ಛತೆ ಜತೆ ರಾಷ್ಟ್ರೀಯ ಹೆದ್ದಾರಿ ಮಗ್ಗಲು, ರಾಜ್ಯ ಹಾಗೂ ಗ್ರಾಮೀಣ ರಸ್ತೆ ಅಂಚುಗಳ ತ್ಯಾಜ್ಯ ತೆರವು ಮಾಡುತ್ತಿದ್ದರೂ ಮತ್ತೆ ಒಂದು ವಾರದಲ್ಲಿ ಅಷ್ಟೇ ತ್ಯಾಜ್ಯ ಬಂದು ಬೇಳುತ್ತದೆ. ಗ್ರಾಮೀಣ ಭಾಗದ ಮಂದಿ ಪೇಟೆ ಪಟ್ಟಣಗಳಲ್ಲಿ ತೆರೆಯುವ ಗೂಡಂಗಡಿಗಳೇ ರಸ್ತೆ ಬದಿಯನ್ನು ಗೊಬ್ಬರಗುಂಡಿಯಾಗಿ ಮಾಡಿದರೆ, ಪ್ರವಾಸಿಗರು, ಕಿಡಿಕೇಡಿಗಳ ಮೋಜುಮಸ್ತಿಗೆ ಕಡಲು ಮಲಿನವಾಗುತ್ತಿದೆ. ಕುಂದಾಪುರ ತಾಲೂಕಿನ ಕೋಡಿ ಕಡಲ ತೀರ ಮಾತ್ರವಲ್ಲ ಸೋಮೇಶ್ವರ ಬೀಚ್, ಅಳವೆಗದ್ದೆ, ಮರವಂತೆ, ಗಂಗೊಳ್ಳಿ ಲೈಟ್‌ಹೌಸ್, ಪಡುಕೆರೆ, ಮಲ್ಪೆ ಬೀಚ್, ಕಾಪು ಬೀಚ್, ಪಡುಬಿದ್ರೆ ಬೀಚ್ ತ್ಯಾಜ್ಯದಿಂದ ಮುಕ್ತವಾಗಿಲ್ಲ. ಸ್ವಚ್ಛತೆ , ಪರಿಸರ ಮಾಲಿನ್ಯ ಕುರಿತು ಜಾಗೃತಿ ಕೋಣನ ಮುಂದೆ ಕಿನ್ನರಿ ಬಾರಿಸಿದಂತಾಗಿದೆ. ಕೋಟ ಪಂಚವರ್ಣ ಯುವಕ ಮಂಡಳ ಪರಿಸರ ಸ್ವಚ್ಚತೆ ಯಜ್ಞದಂತೆ ಮಾಡಿಕೊಂಡು ಬರುತ್ತಿದ್ದು, 155 ವಾರ ಪೂರೈಸಿದೆ. ತ್ರಾಸಿ ಕ್ಲೀನ್ ಪ್ರೊಜೆಕ್ಟ್, ಕರುಣಾಕರ ಆಚಾರ್ಯ ಮರವಂತೆ, ಕ್ಲೀನ್ ಕುಂದಾಪುರ ಪ್ರೊಜೆಕ್ಟ್, ಮೆಟ್ಟನಕಟ್ಟೆ ಮಂಜುನಾಥ ಮುಂತಾದವರು ಪರಿಸರದ ಸ್ವಚ್ಛತೆಗಾಗಿ ಹಗಲಿರುಳು ದುಡಿಯುತ್ತಿದ್ದಾರೆ.


    ಸಿಆರ್‌ಜಡ್ ಅಡ್ಡಗಾಲು
    ಯಾವ ಫಲಾಕಾಂಕ್ಷೆಯಿಂದಲ್ಲೆ ಕಡಲ ತೀರ ಸ್ವಚ್ಛತೆ ಮಾಡುತ್ತಿರುವವರಿಗೆ ಸಿಆರ್‌ಝಡ್ ಅಡ್ಡಗಾಲು ಅಚ್ಚರಿ ವಿಷಯ. ಕಡಲ ತೀರ ಸ್ವಚ್ಛ ಮಾಡುತ್ತಿರುವ ಸ್ವಯಂಸೇಕರಿಗೆ ಸಿಆರ್‌ಝಡ್ ನಮ್ಮ ಏರಿಯಾದಲ್ಲಿ ಕಸ ಏಕೆ ಹೆಕ್ಕುತ್ತೀರೀ ಎಂದು ಪ್ರಶ್ನಿಸಿದೆ. ನಮ್ಮ ಬದಿ ಬಂದು ನೀವು ಕಸ ಹೆಕ್ಕುವದು ಅಂದರೇನು. ವೀಡಿಯೋ ಮಾಡುವುದು ಎಂದರೇ ಎಂದು ಪ್ರಶ್ನಿಸಿದ್ದಷ್ಟೇ ಆಲ್ಲದೆ ಫನಿಷ್ಮೆಂಟ್ ಕೂಡಾ ಹೇರಿದೆ. ಸಿಆರ್‌ಝಟ್ ಸಮುದ್ರ ತೀರದಲ್ಲಿ ಕಸ ಹೆಕ್ಕಿದರೆ ಫನಿಶ್ಮೆಂಟ್ ಹಾಕುತ್ತೆ ಅಂತಾದರೆ ಸಿಆರ್‌ಝಡ್ ಪ್ರದೇಶದಲ್ಲಿ ಮಣ್ಣುತುಂಬಿ ಕಟ್ಟಡ ಕಟ್ಟಿದರೆ ಅಡ್ಡಿಯಿಲ್ವಾ? ಸಿಆರ್‌ಝಡ್‌ನಲ್ಲಿ ಸ್ವಯಂ ಸೇವಕರಿಗೊಂದು ಪ್ರಭಾವಿಗಳಿಂದು ನಿಯಮ ಇದೆಯಾ?
    ———————-
    ಕಡಲ ತೀರದ ಉದ್ದಾನುದ್ದಕ್ಕೂ ಕಸಬ ತೊಟ್ಟಿ ಇಟ್ಟು, ರಾತ್ರಿ 10 ಗಂಟೆ ನಂತರ ಕಡಲ ತೀರಕ್ಕೆ ಜನರ ಪ್ರವೇಶವನ್ನು ನಿಷೇಧಿಸಬೇಕು. ಪೊಲೀಸ್ ರೌಂಡ್ ಹೆಚ್ಚಿಸಬೇಕು. ಸಂಜೆ ಹಾಗೂ ರಜಾ ದಿನಗಳಲ್ಲಿ ಸಮುದ್ರ ತೀರದಲ್ಲಿ ಪೊಲೀಸ್ ನಿಯೋಜಿಸಿ, ಅಪಾಯ ತಪ್ಪಿಸುವ ಜತೆ ಕಡಲ ತೀರ ಮಲಿನ ಮಾಡುವವರ ವಿರುದ್ಧ ಕ್ರಮ ಆಗಬೇಕು. ಕಡಲು ಮೀನುಗಾರರ ಅನ್ನದ ಬಟ್ಟಲಾಗಿದ್ದು, ಮೀನುಗಾರಿಜಕೆ ಇನ್ನಿತರ ವೃತ್ತಿಯಿಂದ ಸಾವಿರಾರು ಜನರ ಬದುಕಿಗೆ ದಾರಿ ಮಾಡಿಕೊಡುತ್ತಿದೆ. ಬೀಚ್ ರಾತ್ರಿ ಪಾರ್ಟಿ ಮಾಡುವ ಜಾಗ ಆಗುತ್ತಿದ್ದು, ಕುಡಿದ ಮದ್ಯದ ಬಾಟಲಿ ಒಡೆದು ಹಾಕುವ ಮೂಲಕ ವಿಕೃತ ಮನಸ್ಥಿತಿ ಅನಾವರಣವಾಗುತ್ತಿದೆ.
    ದಿನೇಶ್ ಸಾರಂಗ, ಎಸ್‌ಎಫ್‌ಎಲ್ ಚೀಪ್ ಕೊ-ಅರ್ಡಿನೇಟರ್, ಕುಂದಾಪುರ

    _——————–
    ಶಿವರಾಮ ಕಾರಂತರು ಥೀಮ್ ಪಾರ್ಕ್ ರಸ್ತೆ ಗುಡಿಸುವುದಕ್ಕೆ ಆರಂಭಿಸಿದ ನಂತರ ಸ್ವಚ್ಚತೆಗೆ ಕೈಗಳ ಜೋಡಣೆ ಆಗುತ್ತಾ ಹೋಗಿದೆ. ಪಂಚವರ್ಣ ಯುವಕ ಮಂಡಲ ಹಾಗೂ ಮಹಿಳಾ ಮಂಡಲ ಜತೆ ಅಭಿಯಾನ ಜೋಡಿಸಿಕೊಂಡು ನಿರಂತರ 155 ವಾರ ಸ್ವಚ್ಚತಾ ಕೆಲಸ ಮಾಡಿದ್ದೇವೆ. ಕಸ ಹಾಕುವ ಕೈ ವಿರುದ್ಧ ಕಸ ಆರಿಸುವ ಕೈ ಸೋಲಬಾರದು ಎನ್ನುವ ದೃಷ್ಟಿಯಲ್ಲಿ ಅಭಿಯಾನ ಮುಂದುರಿಸಿದ್ದೇವೆ. ನಮ್ಮ ಮನೆ ಪರಿಸರ ಹೇಗೆ ಪರಿಶುದ್ಧವಾಗಿ ಇಟ್ಟುಕೊಳ್ಳುತ್ತೇವೆ ಹಾಗೆ ಸುತ್ತಮುತ್ತಲಿನ ಪರಿಸರದ ಬಗ್ಗೆಯೂ ಕಾಳಜಿ ಬೇಕು.
    ರವಿ ಕುಮಾರ್ ಕೋಟ, ಕಾರ್ಯಾಧ್ಯಕ್ಷ ಪಂಚವರ್ಣ ಯುವಕ ಮಂಡಲ ಕೋಟ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts