More

    ಕುಂಬ್ಳೆ ಸುಂದರ ರಾವ್ – ಶ್ರೀಧರ ರಾವ್ ಒಡನಾಟ ಹೇಗಿತ್ತು?

    ಮಂಗಳೂರು: ಸುದೀರ್ಘ ಕಾಲ ಧರ್ಮಸ್ಥಳ ಮೇಳದಲ್ಲಿ ಒಡನಾಡಿ ಕಲಾವಿದರಾಗಿದ್ದ ಕುಂಬ್ಳೆ ಶ್ರೀಧರ ರಾವ್ ತಮ್ಮನ್ನಗಲಿದ ಹಿರಿಯ ಕಲಾವಿದ ಕುಂಬ್ಳೆ ಸುಂದರ ರಾವ್ ಅವರ ಸ್ಮರಣೆಯನ್ನು ವಿಜಯವಾಣಿ ಜತೆ ಇಲ್ಲಿ ಹಂಚಿಕೊಂಡಿದ್ದಾರೆ. ಕುಂಬ್ಳೆ ಶ್ರೀಧರ ರಾವ್ ಅವರ ಮಾತುಗಳಲ್ಲೇ ಓದಿಕೊಳ್ಳಿ.

    ಹುಟ್ಟೂರು ಕುಂಬ್ಳೆ ಸಮೀಪದ ನಾಯ್ಕಪುವಿನಲ್ಲಿ ಸುಂದರಣ್ಣ ಮತ್ತು ನಾನು ನೆರೆಹೊರೆಯವರು. ಆಗ ಅವರು ದೊಡ್ಡ ವೇಷಧಾರಿ. ನಾನು ಶಾಲೆಗೆ ಹೋಗುವಾಗಲೇ ಅವರ ನಡೆ, ನುಡಿಗೆ ಆಕರ್ಷಿತನಾಗಿ ಅವರಂತೆಯೇ ಆಗಬೇಕೆಂದು ನಿಶ್ಚಯಿಸಿದ್ದೆ. 1962ರಲ್ಲಿ ಸುಂದರ ರಾಯರಿದ್ದ ಕುಂಡಾವು ಮೇಳ ಮಂಗಳೂರಿಗೆ ಬಂದಾಗ ನಾನು ಮೇಳದವರ ಜತೆ ಸೇರಿಕೊಂಡು ಆಟದವನೇ ಆದೆ. ಆಗ ನನಗೆ 12 ವರ್ಷ ವಯಸ್ಸು. ಸುಂದರ ರಾಯರು ನನಗಿಂತ 10 ವರ್ಷ ಮೊದಲೇ ಮೇಳದಲ್ಲಿದ್ದರು. ಅಲ್ಲಿ ಅವರ ಜತೆ ಒಂದು ವರ್ಷ ತಿರುಗಾಟ ನಡೆಸಿದೆ. ಒಂದೇ ಊರಿನವನಾದ ನನ್ನ ಬಗ್ಗೆ ಅವರಿಗೆ ಅಪಾರ ಅಭಿಮಾನವಿತ್ತು. ಬಳಿಕ ಕೂಡ್ಲು ಮೇಳದಲ್ಲಿ 2 ವರ್ಷ ತಿರುಗಾಟ ನಡೆಸಿ ನಾನು ಧರ್ಮಸ್ಥಳ ಮೇಳಕ್ಕೆ ಸೇರ್ಪಡೆಗೊಂಡೆ. ಸುಂದರಣ್ಣ ಸುರತ್ಕಲ್ ಮೇಳ ಸೇರಿದರು. 4 ವರ್ಷದ ಬಳಿಕ ಅವರು ಧರ್ಮಸ್ಥಳ ಮೇಳಕ್ಕೆ ಸೇರಿದಾಗ ನಾವು ಮತ್ತೆ ಒಂದಾದೆವು. ಆಗ ನಾನು ಸ್ತ್ರೀವೇಷ ಮಾಡುತ್ತಿದ್ದೆ. ನಮ್ಮ ಜತೆ ವೇಷಗಳು ಜನಮನ್ನಣೆ ಪಡೆದವು. ‘ಮಹಾರಥಿ ಕರ್ಣ’ದ ಅವರ ಕರ್ಣ ನನ್ನ ಕೃಷ್ಣ ಜೋಡಿಯಂತೂ ಅಭೂತಪೂರ್ವ ಯಶ ಕಂಡಿತು. 1968ರಿಂದ 1994ರಲ್ಲಿ ಅವರು ಶಾಸಕನಾಗುವರೆಗೂ ಧರ್ಮಸ್ಥಳ ಮೇಳದಲ್ಲಿ ಜತೆಯಾಗಿದ್ದೆ. ಸಹಕಲಾವಿದರ ಜತೆ ಉತ್ತಮ ಅನುಭೂತಿ ಹೊಂದಿದ್ದರು. ಯಾರೊಂದಿಗೂ ಸಿಟ್ಟು ಮಾಡಿಕೊಂಡವರಲ್ಲ. ಅವರ ನಿಧನದಿಂದ ಯಕ್ಷಗಾನ ರಂಗ ಶ್ರೇಷ್ಠ ಕಲಾವಿದರೊಬ್ಬರನ್ನು ಕಳೆದುಕೊಂಡಂತಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts