More

    ಕುಂಬಳೆ-ಮುಳ್ಳೇರಿಯ ರಸ್ತೆ ಅಭಿವೃದ್ಧಿ

    ಕಾಸರಗೋಡು: ಕುಂಬಳೆ-ಬದಿಯಡ್ಕ-ಮುಳ್ಳೇರಿಯ ರಸ್ತೆಯನ್ನು ‘ರೀ ಬಿಲ್ಡ್ ಕೇರಳ’ ಯೋಜನೆಯನ್ವಯ ಅಭಿವೃದ್ಧಿಗೊಳಿಸುವ ಕಾರ್ಯಕ್ಕೆ ಚಾಲನೆ ದೊರೆತಿದೆ. ವರ್ಷದ ಹಿಂದೆಯಷ್ಟೆ ವಿಸ್ತರಣೆಗೊಳಿಸಿ, ಡಾಂಬರು ಹಾಕಲಾಗಿದ್ದ ರಸ್ತೆಯನ್ನು ಕೇಂದ್ರ-ರಾಜ್ಯ ಸರ್ಕಾರದ ಜಂಟಿ ಯೋಜನೆಯನ್ವಯ 150ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲು ಮತ್ತೆ ಯೋಜನೆ ಹಮ್ಮಿಕೊಳ್ಳಲಾಗಿದೆ.

    ಕುಂಬಳೆಯಿಂದ ಬದಿಯಡ್ಕ ಹಾದಿಯಾಗಿ ಮುಳ್ಳೇರಿಯಾಕ್ಕೆ 28 ಕಿ.ಮೀ. ದೂರವಿದ್ದು, ಮುಳ್ಳೇರಿಯದಲ್ಲಿ ಕಾಸರಗೋಡು-ಸುಳ್ಯ ರಾಜ್ಯ ಹೆದ್ದಾರಿಗೆ ಸಂಪರ್ಕ ಕಲ್ಪಿಸುತ್ತಿದೆ. ಪ್ರಮುಖ ಮೂರು ಪೇಟೆಗಳಾದ ಕುಂಬಳೆ, ಬದಿಯಡ್ಕ ಹಾಗೂ ಮುಳ್ಳೇರಿಯ ಮಧ್ಯೆ ಸಂಪರ್ಕ ಕಲ್ಪಿಸುವ ಈ ರಸ್ತೆಯನ್ನು ಕಾಸರಗೋಡು-ಕಾಞಂಗಾಡು ರಸ್ತೆಯಂತೆ ಕೆಎಸ್‌ಟಿಪಿ(ಕೇರಳ ಸ್ಟೇಟ್ ಟ್ರಾನ್ಸ್‌ಪೋರ್ಟ್ ಪ್ರಾಜೆಕ್ಟ್)ನೇತೈತ್ವದಲ್ಲಿ ಮೇಲ್ದರ್ಜೆಗೇರಿಸಲಾಗುತ್ತಿದೆ. ಇದರಿಂದ ರಸ್ತೆ ಹಾದುಹೋಗುವ ಪೇಟೆಗಳ ಅಭಿವೃದ್ಧಿ ಕಾರ್ಯಗಳಿಗೆ ಮತ್ತಷ್ಟು ಉತ್ತೇಜನ ಲಭಿಸಲಿದೆ. ರಸ್ತೆ ಅಭಿವೃದ್ಧಿ ಕಾರ್ಯಗಳಿಗಾಗಿ ಇಂಜಿನಿಯರಿಂಗ್ ತಂಡ ಈಗಾಗಲೇ ಬದಿಯಡ್ಕದಲ್ಲಿ ಠಿಕಾಣಿ ಹೂಡಿದ್ದು, ರಸ್ತೆ ಲೆವೆಲಿಂಗ್ ತೆಗೆಯುವ ಕಾರ್ಯ ಆರಂಭಿಸಲಾಗಿದೆ. ರಸ್ತೆ ಸುಮಾರು ಒಂಬತ್ತು ಮೀ. ಅಗಲಕ್ಕೆ ವಿಸ್ತರಣೆಗೊಳ್ಳಲಿದ್ದು, ಕೆಲವೆಡೆ ಭೂಸ್ವಾದೀನ ಪ್ರಕ್ರಿಯೆ ನಡೆಯಬೇಕಾಗಿದೆ. ಸೀತಾಂಗೋಳಿಯಿಂದ ಬದಿಯಡ್ಕವರೆಗೆ ಕೆಲವು ಪ್ರದೇಶದಲ್ಲಿ ರಸ್ತೆ ಇಕ್ಕಟ್ಟಿನಿಂದ ಕೂಡಿದ್ದು, ಇನ್ನುಳಿದೆಡೆ ಕಾಮಗಾರಿಗೆ ಅಗತ್ಯವಿರುವ ಜಾಗ ಇದೆ.

    ಕುಂಬಳೆ-ಮುಳ್ಳೇರಿಯ ರಸ್ತೆಯನ್ನು ಕೇರಳ ರೀ ಬಿಲ್ಡ್ ಯೋಜನೆಯನ್ವಯ ಅಭಿವೃದ್ಧಿಗೊಳಿಸಲಾಗುತ್ತಿದ್ದು, ದೆಹಲಿ ಮೂಲದ ಆರ್‌ಡಿಎಸ್ ಸಂಸ್ಥೆ ಟೆಂಡರ್ ವಹಿಸಿಕೊಂಡಿದೆ. ಕೆಎಸ್‌ಟಿಪಿ ಮೇಲುಸ್ತುವಾರಿಯಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯಲಿದ್ದು, ರಸ್ತೆ ಲೆವೆಲಿಂಗ್ ತೆಗೆಯುವ ಕಾರ್ಯ ಆರಂಭಿಸಲಾಗಿದೆ. ಕಾಮಗಾರಿ ಶೀಘ್ರ ಆರಂಭಗೊಳ್ಳುವ ಸಾಧ್ಯತೆಯಿದೆ.
    ಶೀಲಾ, ಸಹಾಯಕ ಮಹಾ ಅಭಿಯಂತೆ
    ಕೆಎಸ್‌ಟಿಪಿ, ಕಣ್ಣೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts