More

    ತ್ರಿಕರಣ ಶುದ್ಧಿಯಿಂದ ದೇವರ ಒಲುಮೆ

    ಮುಂಡರಗಿ: ನಮ್ಮ ಮನಸ್ಸು, ದೇಹ ಸದಾ ಶುದ್ಧವಾಗಿರಬೇಕು. ತ್ರಿಕರಣಗಳು ಶುದ್ಧವಾಗಿರುವವರಿಗೆ ಭಗವಂತನು ಬೇಗ ಒಲಿಯುತ್ತಾನೆ. ಭಗವಂತನ ಒಲುಮೆಯನ್ನು ಪಡೆದುಕೊಳ್ಳಲು ನಾವೆಲ್ಲ ಪ್ರಯತ್ನಿಸಬೇಕು ಎಂದು ಕೇದಾರನಾಥದ ಶ್ರೀ ಹರಿದಾಸ ಮಹಾರಾಜರು ಹೇಳಿದರು.

    ತಾಲೂಕಿನ ಸುಕ್ಷೇತ್ರ ಶಿಂಗಟಾಲೂರ ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ ತುಂಗಭದ್ರಾ ಪುಷ್ಕರ (ಕುಂಭಮೇಳ) ಅಂಗವಾಗಿ ವಿಶ್ವ ಹಿಂದು ಪರಿಷತ್​ನಿಂದ ಮಂಗಳವಾರ ಹಮ್ಮಿಕೊಂಡಿದ್ದ ತುಂಗಭದ್ರಾ ಪುಷ್ಕರ ಪುಣ್ಯಸ್ನಾನ, ತುಂಗಭದ್ರಾ ಪೂಜೆ ಮತ್ತು ಬಾಗಿನ ಅರ್ಪಣೆ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

    ‘ಜಗತ್ತಿನಲ್ಲಿ ಮನುಷ್ಯ ಮಾತ್ರ ಬುದ್ಧಿವಂತ ಪ್ರಾಣಿಯಾಗಿದ್ದಾನೆ. ನಗುವ ಶಕ್ತಿಯನ್ನು ಭಗವಂತ ನಮಗೆ ನೀಡಿದ್ದಾನೆ. ಆದ್ದರಿಂದ ನಾವೆಲ್ಲ ಸದಾ ನಗು ನಗುತ್ತಾ ಬಾಳಬೇಕು’ ಎಂದರು.

    ಧರ್ಮ ಜಾಗರಣ ಪ್ರಾಂತ ಸಹ ಸಂಯೋಜಕ ಡಾ. ಹನುಮಂತ ಮಳಲಿ ಮಾತನಾಡಿ, ನದಿಗಳು ನಮ್ಮ ಪ್ರಾಕೃತಿಕ ಸಂಪತ್ತಾಗಿವೆ. ನಾವೆಲ್ಲ ಅವುಗಳನ್ನು ಸದಾ ಸ್ವಚ್ಛಂದವಾಗಿ ಇಟ್ಟುಕೊಳ್ಳಬೇಕು. ಜಲ ಮೂಲಗಳನ್ನು ಕಲುಷಿತಗೊಳಿಸದಂತೆ ಕಾಳಜಿ ವಹಿಸಬೇಕು ಎಂದು ತಿಳಿಸಿದರು.

    ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶ್ರೀವೀರಭದ್ರೇಶ್ವರ ದೇವಸ್ಥಾನ ಟ್ರಸ್ಟ್ ಕಮಿಟಿ ಅಧ್ಯಕ್ಷ ಕರಬಸಪ್ಪ ಹಂಚಿನಾಳ ಮಾತನಾಡಿ, ದೇವಸ್ಥಾನಕ್ಕೆ ಆಗಮಿಸುವ ಭಕ್ತರಿಗೆ ಎಲ್ಲ ಸೌಲಭ್ಯ ಕಲ್ಪಿಸಲಾಗುವುದು. ದೇವಸ್ಥಾನದ ಮುಂದೆ ಹರಿದಿರುವ ತುಂಗಭದ್ರಾ ನದಿಯನ್ನು ಸದಾ ಸ್ವಚ್ಛವಾಗಿ ಇಟ್ಟುಕೊಳ್ಳಲಾಗುವುದು ಎಂದು ತಿಳಿಸಿದರು.

    ಸಮಾರಂಭಕ್ಕೂ ಪೂರ್ವದಲ್ಲಿ ತುಂಗಭದ್ರಾ ಪುಷ್ಕರ (ಕುಂಭಮೇಳ) ನಿಮಿತ್ತ ನೂರಾರು ಭಕ್ತರು ತುಂಗಭದ್ರಾ ನದಿಯಲ್ಲಿ ಪುಣ್ಯಸ್ನಾನ ಮಾಡಿ, ವಿಶೇಷ ಪೂಜೆ ನೆರವೇರಿಸಿ ವೀರಭದ್ರೇಶ್ವರ ದೇವರ ದರ್ಶನ ಪಡೆದರು. ಶಿಲ್ಪಕಾರ ಕುನಾಲ್ ರತನ್ ಸೂರ್ಯವಂಶಿ, ಡಾ. ಮಲ್ಲಿಕಾರ್ಜುನ ಬಾಳಿಕಾಯಿ, ಪ್ರಲ್ಹಾದ ಇನಾಮದಾರ, ಮಂಜುನಾಥ ಇಟಗಿ, ದುರಗಣ್ಣ, ಮಾರುತಿ ಪವಾರ, ಯಲ್ಲಪ್ಪ ಅರ್ಕಸಾಲಿ, ಕಾಶಿನಾಥ ಬಿಳಿಮಗ್ಗದ, ಶ್ರೀನಿವಾಸ ಕಟ್ಟಿಮನಿ, ಪವನ ಮೇಟಿ, ನಾಗೇಶ ಹುಬ್ಬಳ್ಳಿ, ಬಸವರಾಜ ಬಿಳಿಮಗ್ಗದ, ನಾಗರಾಜ ಮುರಡಿ, ಅನಂತ ಚಿತ್ರಗಾರ, ಶಿವು ನಾಡಗೌಡ, ಸೋಮಶೇಖರ ಹಿರೇಮಠ, ಶಂಭು ಹಿರೇಮಠ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts